
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 15 : ಸ್ವತಂತ್ರ ಬಂದ ನಂತರ 70 ವರ್ಷದಲ್ಲಿ, 60 ವರ್ಷ ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ ಕೈ ಆಡಳಿತದಲ್ಲಿ ಕುರ್ಚಿ ಕಂಟಕ ಬಂದಾಗ ಮತದಾರರು ಅವರನ್ನು ತಿರಸ್ಕರಿಸಿದಾಗ ಹೊಸ ನಾಟಕ ಶುರು ಮಾಡ್ತಾರೆ ಬಯಲಾಟ, ದೊಡ್ಡಾಟ ಅಡುವ ನಾಟಕ ಕಂಪನಿ ಈ ಸರ್ಕಾರ ಕಂದಿಲು ಬೆಳಕಲ್ಲಿ ನಡೆಯುವ ನಾಟಕ ಕಂಪನಿ ಕಾಂಗ್ರೆಸ್ ಸರ್ಕಾರ ಇಂತಹ ಗಿಮಿಕ್ ಬಹಳ ಮಾಡಿದ್ದಾರೆ ಎಂದು ಸಂಸದ
ಗೋವಿಂದ ಕಾರಜೋಳ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಚಿತ್ರದುರ್ಗದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು. ಕಾಂಗ್ರೆಸ್ನಲ್ಲಿ ದಲಿತ ಸಿಎಂ ಕೂಗು ವಿಚಾರ ಕಾಂಗ್ರೆಸ್ ನವರು ದಲಿತ ಸಿಎಂ ಮಾಡಲ್ಲ ಧೀರ್ಘಾವಧಿ ಅಧಿಕಾರದಲ್ಲಿದ್ದ ಖರ್ಗೆಯವರನ್ನೇ ಸಿಎಂ ಮಾಡಲಿಲ್ಲ ನರಿಗದ್ದಲ ಕೈ ನಾಯಕರಿಗೆ ಎಂದೂ ಕೇಳುವುದಿಲ್ಲ ಕಾಂಗ್ರೆಸ್ಸನ್ನು ದಲಿತರೆಲ್ಲಾ ಸೇರಿ ಚಿಂದಿ ಮಾಡಿದಾಗ ಅವರಿಗೆ ಬುದ್ದಿ ಬರಲಿದೆ ಎಂದ ಅವರು, ಎಸಿಪಿ ಟಿಎಸ್ಪಿ ಹಣ ದುರುಪಯೋಗ ಮಾಡಿಕೊಂಡ ಸರ್ಕಾರಕ್ಕೆ ನೈತಿಕತೆ ಇಲ್ಲ ದಲಿತರ ಸಮಾವೇಶ ನಡೆಸುವ ನೈತಿಕತೆ
ಕಾಂಗ್ರೆಸ್ಗೆ ಇಲ್ಲ ಸದ್ಯ ರಾಜ್ಯದಲ್ಲಿ ಆರ್ಥಿಕವಾಗಿ ಸರ್ಕಾರ ದಿವಾಳಿಯಾಗಿದೆ ಈಗೇನೋ ಬಜೆಟ್ ಮಂಡನೆ ಮಾಡುತ್ತಾರೆ ಬಜೆಟ್
ನಲ್ಲಿ 25,000 ಕೋಟಿಯನ್ನು ನೀಡಿ ದಲಿತರ ಉದ್ದಾರ ಮಾಡಲಿಕ್ಕೆ ಬಳಸಲಿ. 9 ವಿ.ವಿ ಗಳನ್ನು ಮುಚ್ಚುತ್ತಿರೋದು ಆರ್ಥಿಕ ದಿವಾಳಿ
ಎದ್ದು ಕಾಣ್ತಿದೆ ಸರ್ಕಾರದ ಭೂಮಿಯನ್ನು ಕಾಂಗ್ರೆಸ್ ನುಂಗಿ ಹಾಕಿದೆ ನೂರಾರು ಎಕರೆ ಜಾಗ ಕೊಟ್ಟು ವಿಶ್ವವಿದ್ಯಾಲಯ ಮುಚ್ಚದಂತೆ
ಉಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಮೈಸೂರಿನ ಉದಯಗಿರಿಯಲ್ಲಿ ಗಲಾಟೆ ಪ್ರಕರಣ ಹಿನ್ನೆಲೆಯಲ್ಲಿ ಮಾತನಾಡಿದ ಸಂಸದರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ
ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಉದಯಗಿರಿ ಒಂದೇ ಅಲ್ಲ, ಹುಬ್ಬಳ್ಳಿ ಗಲಾಟೆ ಠಾಣೆ ಮುತ್ತಿಗೆ ಹಾಕಿದರು, ಪೊಲೀಸರ ಮೇಲೆ
ಹಲ್ಲೆ ನಡೆಸಿದರು ಸ್ವಾತಂತ್ರ್ಯ ಬಂದ್ಮೇಲೆ ನಮ್ಮ ಪೂರ್ವಜರು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಅಧಿಕಾರ ನಡೆಸಿದ್ದಾರೆ. ಪೊಲೀಸ್ ಠಾಣೆ ಮೇಲೆ ಅಟ್ಯಾಕ್, ಪೊಲೀಸರ ಮೇಲೆ ದೌರ್ಜನ್ಯ ನಡೆಸಿದವರನ್ನು ಎಂದೂ ಬಿಟ್ಟಿಲ್ಲ ಇಂದು ಗೂಂಡಗಳು,ಕೋಮುವಾದಿ ಗಲಭೆ ಹುಟ್ಟಿಸಿ, ಅಶಾಂತಿ ನಿರ್ಮಾಣ ಇಂತವರಿಗೆ ಪ್ರೋತ್ಸಾಹಿಸುವ ಸರ್ಕಾರ ಅಧಿಕಾರದಲ್ಲಿದೆ ಇದನ್ನು ಖಂಡಿಸುತ್ತೇನೆ.
ಎಂಟು ದಿನಗಳ ಬಳಿಕ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ತೆರಳಿ ಸಭೆ ನಡೆಸಿದ್ದಾರೆ ಯಾರನ್ನು ಬಿಡಲ್ಲವೆಂದು ಕೆಲವು ಪದಗಳನ್ನು ಬಳಸಿದ್ದಾರೆ ಗೃಹಮಂತ್ರಿ, ಡಿಸಿಎಂ,ಸಿಎಂ ಯಾರನ್ನು ಬಿಡಲ್ಲವೆಂದು ಹೇಳಿದ್ದಾರೆ ಯಾರನ್ನು ಬಿಡಲ್ಲ ಅನ್ನೋದನ್ನು ಸಾಬೀತು ಮಾಡಿ ತೋರಿಸಬೇಕು ಎಫ್ ಐ ಆರ್ ನಲ್ಲಿ ಸಾವಿರ ಮಂದಿ ಇದ್ದರು ಎಂಬ ಅಂಶವಿದೆ ಸಿಸಿಟಿವಿಯಲ್ಲಿ ರೆಕಾರ್ಡ್, ಮೀಡಿಯಾ ಕ್ಯಾಮರಗಳಲ್ಲಿ 1000 ಮಂದಿ ಇರೋದು ಸೆರೆಯಾಗಿದೆ ತಿಣುಕಾಡಿ 13 ಮಂದಿ ಬಂಧಿಸಿರುವ ನಿಮಗೆ ನಾಚಿಕೆ ಆಗಬೇಕು.
ಸಿಎಂ ಸಿದ್ದರಾಮಯ್ಯ ಗೆ ಛೀಮಾರಿ ಹಾಕಿದ ಮಾಜಿ ಡಿಸಿಎಂ ಗೋವಿಂದ ಕಾರಜೋಳ1000 ಮಂದಿ ನಡೆಸಿದ ಗಲಾಟೆಯಲ್ಲಿ ಜೈಲು ತುಂಬುವಷ್ಟು ಜನರನ್ನು ಬಂಧಿಸಬೇಕಿತ್ತು ಆಡಳಿತ ನಡೆಸಲು ಸರ್ಕಾರಕ್ಕೆ ಯೋಗ್ಯತೆ ಇಲ್ಲ ಸಿಎಂ ರಾಜೀನಾಮೆ ಕೊಟ್ಟು ಸಾರ್ವಜನಿಕರ ಕ್ಷಮೆ ಯಾಚಿಸುವಂತೆ ಆಗ್ರಹ ಮಾಡಿದರು.