ಸಿಗರೇಟ್ ಸೇದುವ ವಿಚಾರಕ್ಕೆ ಆರಂಭವಾದ ಗಲಾಟೆ, ಸ್ನೇಹಿತನ ಕೊಲೆಯಲ್ಲಿ ಅಂತ್ಯ.

ಚಿತ್ರದುರ್ಗ: ಸಿಗರೇಟ್ ಸೇದುವ ವಿಚಾರಕ್ಕೆ ಗೆಳೆಯರ ಮಧ್ಯೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿತ್ರದುರ್ಗದ (Chitradurga) ಚಂದ್ರವಳ್ಳಿ ಬಳಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೃತನನ್ನು ಮಹೆಬೂಬ್(33) ಎಂದು ಗುರುತಿಸಲಾಗಿದೆ. ಫೆ.14ರ ಮಧ್ಯರಾತ್ರಿ ಸ್ನೇಹಿತರು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದರು. ಆ ವೇಳೆ ಸಿಗರೇಟು ಸೇದುವ ವಿಚಾರಕ್ಕೆ ಆರಂಭವಾದ ಗಲಾಟೆ ಸಾಲದ ವಿಚಾರಕ್ಕೆ ತಿರುಗಿದೆ. ಹೀಗಾಗಿ ಅಲ್ಲಿದ್ದ ಗೆಳೆಯರು ಮೆಹಬೂಬ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆಗ ಎಚ್ಚೆತ್ತ ಗೆಳೆಯರ ಗುಂಪು, ಬೈಕ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಆ ಮೃತದೇಹವನ್ನು ಮೆಹಬೂಬ್ ಮನೆಗೆ ಸಾಗಿಸಿ, ಪತ್ನಿಯ ಸಮ್ಮುಖದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕುಟುಂಬಸ್ಥರೊಂದಿಗೆ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆಗ ಮೆಹಬೂಬ್ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದು, ಸಾವಿನ ಸುತ್ತ ಬಾರಿ ಅನುಮಾನದ ಹುತ್ತ ಬೆಳೆದಿದೆ. ಹೀಗಾಗಿ ಮೃತನ ಕುಟುಂಬಸ್ಥರು ಐವರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ಚಿತ್ರದುರ್ಗದ ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

Source : https://publictv.in/fight-over-cigarette-smoking-friend-murder-at-the-party-in-chitradurga

Leave a Reply

Your email address will not be published. Required fields are marked *