ಹೊಸ ಜೆರ್ಸಿಯಲ್ಲಿರುವ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಅವರ ಫೋಟೋಗಳನ್ನು ICC ಬಿಡುಗಡೆ ಮಾಡಿದೆ. ಈ ಹೊಸ ಜೆರ್ಸಿಯಲ್ಲಿ ಪಂದ್ಯಾವಳಿಯ ಲೋಗೋ ಮತ್ತು ಆತಿಥೇಯ ದೇಶದ ಹೆಸರು ಸ್ಪಷ್ಟವಾಗಿ ಕಾಣಿಸುತ್ತಿದೆ.

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ಸೋಮವಾರ ಅನಾವರಣಗೊಂಡಿರುವ ಭಾರತದ ಹೊಸ ಜೆರ್ಸಿಯಲ್ಲಿ ಈ ಬಾರಿ ಅತಿಥ್ಯ ವಹಿಸಿರುವ ‘ಪಾಕಿಸ್ತಾನ’ವನ್ನು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಹೊಸ ಜೆರ್ಸಿಯಲ್ಲಿರುವ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಅವರ ಫೋಟೋಗಳನ್ನು ICC ಬಿಡುಗಡೆ ಮಾಡಿದೆ. ಈ ಹೊಸ ಜೆರ್ಸಿಯಲ್ಲಿ ಪಂದ್ಯಾವಳಿಯ ಲೋಗೋ ಮತ್ತು ಆತಿಥೇಯ ದೇಶದ ಹೆಸರು ಸ್ಪಷ್ಟವಾಗಿ ಕಾಣಿಸುತ್ತಿದೆ.
ಇದು ಕೆಲವರಿಗೆ ಆಶ್ಚರ್ಯವನ್ನುಂಟು ಮಾಡಿದ್ದರೂ ಭಾರತ ICC ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂದು BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳುವ ಮೂಲಕ ಜರ್ಸಿ ವಿವಾದದ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಫೆಬ್ರವರಿ 19 ರಂದು ಕರಾಚಿಯಲ್ಲಿ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ನ್ಯೂಜಿಲೆಂಡ್ ಎದುರಿಸುವುದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗುತ್ತದೆ. ಫೆಬ್ರವರಿ 20 ರಂದು ಬಾಂಗ್ಲಾದೇಶದ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ.
ಫೆಬ್ರವರಿ 23 ರಂದು ಸಾಂಪ್ರಾದಾಯಿಕ ಎದುರಾಳಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಅಂತಿಮ ಲೀಗ್ ಹಂತದ ಪಂದ್ಯ ನಡೆಯಲಿದೆ.
Source : https://www.kannadaprabha.com/cricket/2025/Feb/18/pakistan-on-indias-ct-kit-sparks-buzz