
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 19 : ಫೆ.21ರಂದು ಬಂಜಾರ ಸಮಾಜದಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ 286ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್ ಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 11ಕ್ಕೆ ನಗರದ
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಜರುಗುವ ಮೆರವಣಿಗೆಯನ್ನು ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ್ರ ರಾಘವೇಂದ್ರ ಚಾಲನೆ
ನೀಡುವರು.
ಮಧ್ಯಾಹ್ನ 12.30ಕ್ಕೆ ನಗರದ ಬಿ.ಡಿ. ರಸ್ತೆಯಲ್ಲಿನ ಬಂಜಾರ ಭವನದಲ್ಲಿ ವೇದಿಕೆ ಕಾರ್ಯಕ್ರಮವನ್ನು ಸಂಸದ ಗೋವಿಂದ ಎಂ.
ಕಾರಜೋಳ ಉದ್ಘಾಟಿಸುವರು. ಕರ್ನಾಟಕ ತಾಂಡ ಅಭಿವೃದ್ಧಿನಿಗಮದ ಅಧ್ಯಕ್ಷ ಎನ್.ಜಯದೇವನಾಯ್ಕ ವಿಶೇಷ ಮುಖ್ಯ
ಅತಿಥಿಯಾಗಿ ಭಾಗವಹಿಸಲಿದ್ದು, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಪಿ.ರಾಜೀವ್ರವರು
ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ
ಎಂ.ಬಸವರಾಜ ನಾಯ್ಕ, ಉಪವಿಭಾಗಾಧಿಕಾರಿಗಳಾದ ವೆಂಕಟೇಶ್ ನಾಯ್ಕ್, ಡಿವೈಎಸ್ಪಿ ಲೋಕಾಯುಕ್ತ ಮೃತ್ಯುಂಜಯ
ಪೋಲಿಸ್ ಇನ್ಸ್ಪೆಕ್ಟರ್ ಬಾಲಚಂದ್ರನಾಯ್ಕ್, ಎಸ್.ಆರ್,ಎಸ್.ನ ಲಿಂಗಾರೆಡ್ಡಿ, ಜೆಡಿಎಸ್ನ ಕಾಂತರಾಜ್, ಬಿಜೆಪಿ ಮುಂಂಡರಾದ
ರುದ್ರೇಗೌಡ, ಕಾಂಗ್ರೆಸ್ ಮಹಿಳಾ ಘಟಕದ ತಾ.ಅಧ್ಯಕ್ಷರಾದ ಶ್ರೀಮತಿ ಗೀತಾಬಾಯಿ ಗುರುರಾಜ್ ಭಾಗವಹಿಸುವರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳಿಸಿದ ಸಮುದಾಯದ
ಮಕ್ಕಳನ್ನು ಸನ್ಮಾನಿಸಿ, ಪುರಸ್ಕರಿಸಲಾಗುತ್ತದೆ. ಅರ್ಹ ಮಕ್ಕಳ ಪೋಷಕರು ಸಮಾಜಕ್ಕೆ ದಾಖಲಾತಿ ಒದಗಿಸುವಂತೆ ಮನವಿ
ಮಾಡಿದರು.
ಪತ್ರಿಕಾ ಗೋಷ್ಟಿಯಲ್ಲಿ ಸಮುದಾಯ ಮುಖಂಡರಾದ ರಮೇಶ್ ನಾಯ್ಕ, ನಟರಾಜ್, ಪರಮೇಶ್ ನಾಯ್ಕ ಭಾಗವಹಿಸಿದ್ದರು.
Views: 0