ಗೋಪೂಜೆಯ ಮೂಲಕ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 20 : ಚಿತ್ರದುರ್ಗ ನಗರದ ಕಭೀರಾನಂದ ನಗರದಲ್ಲಿನ ಶ್ರೀ ಕಬೀರಾನಂಧಾಶ್ರಮದವತಿಯಿಂದ ಫೆ. 22 ರಿಂದ 27ರವರೆಗೆ ನಡೆಯುವ 95ನೇ ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ಫೆ 20 ರ ಇಂದು ಬೆಳಿಗ್ಗೆ ಕಾತ್ರಾಳ್ ಬಳಿಯಿರುವ ಗೋಶಾಲೆಯಲ್ಲಿ
ಗೋಪೂಜೆಯನ್ನು ಮಾಡುವುದರ ಮೂಲಕ ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಶಿವಲಿಂಗಾನಂದ
ಮಹಾಸ್ವಾಮಿಗಳವರ ಚಾಲನೆಯನ್ನು ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹಾ ಶ್ರೀಗಳು ಮಹಾ ಶಿವರಾತ್ರಿ ಸಪ್ತಾಹದ ಪ್ರಾರಂಭದ ದಿನದಂದು ಗೋ ಪೂಜೆಯನ್ನು
ನಡೆಸುವುದು ಪದ್ದತಿಯಾಗಿದೆ ಈ ಹಿನ್ನಲೆಯಲ್ಲಿ ಇಂದು ಗೋ ಪೂಜೆಯನ್ನು ನಡೆಸಿದರು. ಫೆ. 22 ರಿಂದ ನಡೆಯುವ ಮಹಾ ಶಿವರಾತ್ರಿ
ಮಹೋತ್ಸವವು ಯಾವ ರೀತಿಯ ತಡೆಯಿಲ್ಲ ನಿರಾಸವಾಗಿ ನಡೆಯುವಂತೆ ಮಾಡಲು ಗೋಮಾತೆಯಲ್ಲಿ ಮನವಿ ಮಾಡಲಾಯಿತು.
ಗೋವುಗಳನ್ನು ರಕ್ಷಣೆ ಮಾಡುವುದಕ್ಕಾಗಿಯೇ ಇಲ್ಲಿಗೆ ಆಗಮಿಸಿದ ಸಿದ್ದಾರೂಢರು ಗೋಸಂಪತ್ತನ್ನು ರಕ್ಷಿಸುವುದರ ಮೂಲಕ ನಮ್ಮ
ಮಾತೆಯನ್ನು ರಕ್ಷಣೆ ಮಾಡಬೇಕಿದೆ ನಮ್ಮ ಹಿಂದು ಶಾಸ್ತ್ರದ ಪ್ರಕಾರ ಗೋವಿನಲ್ಲಿ 33 ಕೋಟಿ ದೇವತೆಗಳು ಇದ್ದಾರೆ ಎಂಬ ನಂಬಿಕೆ
ಇದೆ ಇದರಿಂದ ಗೋವನ್ನು ಶೂಭ ಕಾರ್ಯವನ್ನು ಪ್ರಾರಂಭ ಮಾಡುವ ಮುಂಚೆ ಸದಾ ಪೂಜೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ 95ನೇ ಮಹಾ ಶಿವರಾತ್ರಿ ಮಹೋತ್ಸವದ ಪ್ರಧಾನ ಕಾರ್ಯದರ್ಶಿಗಳಾದ ಬದರಿನಾಥ್, ಕಭೀರಾನಂದಾಶ್ರಮದ
ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್, ವಿಎಚ್.ಪಿ.ಯ ರುದ್ರೇಶ್,ಸದಸ್ಯರಾದ ಓಂಕಾರ್, ಉತ್ಸವ ಸಮಿತಿ ಸದಸ್ಯರಾದ
ಸತೀಶ್, ನಾಗರಾಜ್ ಸಂಗಂ, ಕಿರಣ ಕುಮಾರ್, ಭಾನು ಮೂರ್ತಿ, ಪುಟ್ಟಣ್ಣ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ ನಿರಂಜನ ಮೂರ್ತಿ,
ಯೋಗಿಶ್, ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *