ಭೀಮಸಮುದ್ರ ಗ್ರಾಮದ ಹೊಲಗಳಲ್ಲಿ ಓಡಾಡುತ್ತಿದ್ದ ಮೈನ್ಸ್ ಲಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 20 : ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಹೊಲಗಳಲ್ಲಿ ಓಡಾಡುತ್ತಿದ್ದ ಮೈನ್ಸ್ ಲಾರಿಗಳಲ್ಲಿ ತಡೆದ ಗ್ರಾಮಸ್ಥರು
ಪ್ರತಿಭಟನೆಯನ್ನು ನಡೆಸಿ ದಾರಿ ಇಲ್ಲದೆ ಇದ್ದರೂ ಸಹಾ ದಾರಿ ಮಾಡಿಕೊಂಡು ಹೋಗುತ್ತಿರುವ ಲಾರಿ ಮಾಲಿಕರ ಮೇಲೆ
ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಭೀಮಸಮುದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹೊಲವೊಂದರಲ್ಲಿ ಈ ಹಿಂದೆ ಅಕ್ರಮವಾಗಿ ನಡೆಸಿದ ಗಣೀಗಾರಿಕೆಯ
ಖನಿಜವನ್ನು ಹೊಲವೊಂದರಲ್ಲಿ ಸಂಗ್ರಹ ಮಾಡಲಾಗಿತ್ತು ಇದನ್ನು ಖಾಸಗಿ ಕಂಪನಿಯೊರ್ವರು ಸರ್ಕಾರದ ಮೂಲಕ ಟೆಂಡರ್ ಪಡೆದ
ಅದರ ಸಾಗಾಟಕ್ಕೆ ಗುತ್ತಿಗೆಯನ್ನು ಪಡೆದಿದ್ದರು. ಆದರೆ ಈ ಹೊಲದಿಂದ ಗ್ರಾಮದ ಲಾರಿಗಳು ಹೂರಗಡೆ ಹೋಗಲು ಸರಿಯಾದ ದಾರಿ
ಇಲ್ಲ ಈಗ ಇರುವ ದಾರಿ ಅಕ್ಕ-ಪಕ್ಕದಲ್ಲಿನ ರೈತರು ತಮ್ಮ ಹೊಲದಲ್ಲಿ ಸ್ವಲ್ಪ ಭಾಗವನ್ನು ಬಿಟ್ಟುಕೊಟ್ಟು ದಾರಿಯನ್ನು ನಿರ್ಮಾಣ
ಮಾಡಿ ತಮ್ಮ ಹೊಲಗಳಿಗೆ ಬೀಜ, ಗೊಬ್ಬರ ಸೇರಿದಂತೆ ಇತರೆ ವಸ್ತುಗಳನ್ನು ಸಾಗಾಟ ಮಾಡಲು ಬಳಸುತ್ತಿದ್ದಾರೆ ಈ ದಾರಿಯಲ್ಲಿ
ಯಾವುದೇ ಕಾರಣಕ್ಕೂ ಮೈನ್ಸ್ ಲಾರಿಗಳು ಓಡಾಡ ಬಾರದೆಂದು ರಸ್ತೆಯನ್ನು ನಿರ್ಮಾಣ ಮಾಡುವಾಗ ನಿಭಂದನೆಯನ್ನು
ಹಾಕಲಾಗಿತ್ತು. ಇಷ್ಠಾದರೂ ಸಹಾ ನಿನ್ನೆ ಬೆಳಿಗ್ಗೆ 4 ಗಂಟೆಗೆ ಲಾರಿಯನ್ನು ತೆಗೆದುಕೊಂಡು ಬಂದು ಅದಿರನ್ನು ಲೋಡ್ ಮಾಡಿ ಇಲ್ಲಿಂದ
ಹೋಗುವ ಯತ್ನವನ್ನು ಮಾಡಿದರು ಇದು ನಮಗೆ ಗೊತ್ತಾಗಿ ಲಾರಿಯನ್ನು ಮುಂದೆ ಹೋಗದಂತೆ ತಡೆಹಿಡಿಯಲಾಗಿದೆ ಈ
ದಾರಿಯಿಂದ ಗಣಿ ಲಾರಿಗಳು ಓಡಾಡಬಾರದು ಬೇರೆ ಕಡೆಯಿಂದ ಹೋಗಲಿ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇಲ್ಲಿ ಲಾರಿಗಳು ಓಡಾಟದಿಂದಾಗಿ ಸುತ್ತಾ-ಮುತ್ತಲ್ಲಿನ ಜಮೀನುಗಳಲ್ಲಿ ಬೆಳೆ ಬೆಳೆಯದೆ ಹಾಳಾಗಿದೆ ಲಕ್ಷಾಂತರೂಗಳ
ಬಂಡವಾಳವನ್ನು ಹಾಕಿ ಈಗ ಬೆಳೆ ಬರುತ್ತದೆ ಎಂದು ಕಾಯುತ್ತಿರುವ ರೈತನಿಗೆ ಗಣಿ ಲಾರಿಗಳ ಓಡಾಟದಿಂದಾಗಿ ಬೆಳೆ ಪೂರ್ಣ
ಪ್ರಮಾಣದಲ್ಲಿ ಹಾಳಾಗಿದೆ, ಇದರ ನಷ್ಠವನ್ನು ಯಾರು ಹೊರುತ್ತಾರೆ ನಮಗೆ ಆದ ನಷ್ಠವನ್ನು ಯಾರೂ ತುಂಬಿ ಕೊಡುತ್ತಾರೆ ಎಂದು
ನಮ್ಮ ಅಳಲನ್ನು ತೋಡಿಕೊಂಡರು, ಇದಕ್ಕೂ ಮುನ್ನಾ ಲಾರಿಗಳನ್ನು ಈ ದಾರಿಯಲ್ಲಿ ಓಡಾಡಿಸಬೇಡಿ ಎಂದು ಕೇಳಲು ಹೋದ
ರೈತರ ಮೇಲೆ ಲಾರಿಯ ಚಾಲಕರು ದೌರ್ಜನ್ಯ ಮಾಡಿದ್ದಾರೆ ಇವರ ಮೇಲೆ ಲಾರಿಯನ್ನು ಹತ್ತಿಸು ಎಂದು ಹೇಳಿದ್ದಾರೆ ಎಂದು
ಗ್ರಾಮಸ್ಥರು ತಿಳಿಸಿದ್ದಾರೆ.

ಈ ದಾರಿಯಲ್ಲಿ ಗಣಿ ಲಾರಿಗಳನ್ನು ಓಡಾಡಲು ಬಿಡಿವುದಿಲ್ಲ ಅವರು ಬೇರೆ ಧಾರಿಯನ್ನು ನೋಡಿಕೊಳ್ಳಲಿ ಎಂದು ಗ್ರಾಮಸ್ಥರು
ಲಾರಿಗಳನ್ನು ಮುಂದೆ ಬಿಡದೆ ದಾರಿಯಲ್ಲಿ ಅಡ್ಡ ಹಾಕಿ ಲಾರಿಗಳು ಮುಂದೆ ಹೋಗದಂತೆ ದಾರಿಯನ್ನು ಕಡಿಯಲಾಗಿದೆ. ಸ್ಥಳದಲ್ಲಿ
ಪೋಲಿಸರು ಮೊಕ್ಕಂ ಮಾಡಿದ್ದು ಸಮಸ್ಯೆಯನ್ನು ಇತ್ಯರ್ಥ ಮಾಡುವಲ್ಲಿ ಮುಂದಾಗಿದ್ದರು. ರಾತ್ರಿ ಪೂರ್ಣವಾಗಿ ಗ್ರಾಮಸ್ಥರು ನಿದ್ದೆ
ಮಾಡದೆ ಲಾರಿಗಳನ್ನು ಮುಂದೆ ಬಿಡದೆ ಕಾದಿದ್ದಾರೆ.

Leave a Reply

Your email address will not be published. Required fields are marked *