ಬಂಜಾರ ಸಮಾಜದಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ 286ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 21 : ಸಂತ ಶ್ರೀ ಸೇವಾಲಾಲ್ ಮಹಾರಾಜ್‍ರ ತಮ್ಮ ಜೀವನದಲ್ಲಿ ನಡೆದ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಂಡಾಗ ಮಾತ್ರ ಸಂತ ಶ್ರೀ ಸೇವಾಲಾಲ್ ಮಹಾರಾಜ್‍ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಮಾಜಿ ಉಪ
ಮುಖ್ಯಮಂತ್ರಿಗಳು ಹಾಗೂ ಸಂಸದ ಗೋವಿಂದ ಎಂ. ಕಾರಜೋಳ ಲಂಬಾಣಿ ಜನಾಂಗಕ್ಕೆ ಕರೆ ನೀಡಿದರು.

ನಗರದ ಬಿ.ಡಿ. ರಸ್ತೆಯಲ್ಲಿನ ಬಂಜಾರ ಭವನದಲ್ಲಿ ಶುಕ್ರವಾರ ಬಂಜಾರ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ 286ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದ ಅವರು, ದೇಶದಲ್ಲಿ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೂ ಲಂಬಾಣಿ ಜನಾಂಗ ಒಂದೇ ಭಾಷೆ, ಒಂದೇ ರೀತಿಯಾದ ವೇಷ ಭೂಷಣವನ್ನು ಹೊಂದಿದೆ. ಈ ರೀತಿಯಾದ ಒಂದೇ ಭಾಷೆ, ಒಂದೇ ರೀತಿಯಾದ ವೇಷ ಭೂಷಣವನ್ನು ಹೊಂದಿದ ಜನಾಂಗ ನಮಗೆ ಎಲ್ಲೂ ಸಹಾ ಸಿಗುವುದಿಲ್ಲ, ಅದು ಸಿಕ್ಕರೆ ಲಂಬಾಣಿ ಜನಾಂಗದಲ್ಲಿ ಮಾತ್ರವೇ ಇದು ಬಂಜಾರ ಸಮುದಾಯವನ್ನು
ಒಗ್ಗಟು ಮಾಡುವ ಕೆಲಸವನ್ನು ಮಾಡುತ್ತದೆ ಎಂದು ತಿಳಿಸಿದರು.

ಸಂತ ಸೇವಾಲಾಲ್ ಮಹರಾಜು 286 ವರ್ಷಗಳ ಹಿಂದೆ ಆಗಿ ಹೋಗಿರುವವರು, ಅವರನ್ನು ಇಂದಿಗೂ ಸಹಾ ಪುಣ್ಮ ಸ್ಮರಣೆಯನ್ನು
ಮಾಡಲಾಗುತ್ತಿದೆ. ಅವರು ಬಿಟ್ಟು ಹೋದ ಸಮಾಜ ಕಲ್ಯಾಣಕ್ಕಾಗಿ ಮಾನವ ಕಲ್ಯಾಣಕ್ಕಾಗಿ ಸಂದೇಶಗಳನ್ನು ಚಾಚು ತಪ್ಪದೆ ನಮ್ಮ
ನಿತ್ಯ ಜೀವನದಲ್ಲಿ ಅಳವಡಿಕೆಯನ್ನು ಮಾಡಿಕೊಂಡಾಗ ಮಾತ್ರ ಈ ರೀತಿಯಾದ ಜಯಂತಿ ಅಚರಣೆಗೆ ಅರ್ಥ ಬರುತ್ತದೆ ಎಂದ
ಅವರು, ಮಾನವ ಕುಲ ಕಲ್ಯಾಣವಾಗುತ್ತದೆ. ಅವರು ಬಯಸಿದಂತ ಸಮಾಜ ನಿರ್ಮಾಣವಾಗುತ್ತದೆ. ನಾವೆಲ್ಲರು ಒಟ್ಟಾಗಿ ಒಂದಾಗಿ
ಉತ್ತಮವಾದ ಸಮಾಜವನ್ನು ಮುನ್ನಡೆಸುವ ಕೆಲಸವನ್ನು ಮಾಡಬೇಕಿದೆ ಎಂದು ಸಂಸದರ ಕರೆ ನೀಡಿದರು.

ಹಿಂದುಳಿದ ಸಮಾಜಗಳಲ್ಲಿ ಒಗ್ಗಟ್ಟು ಬಹಳ ಕಡಿಮೆ ಇರುತ್ತದೆ. ಒಳ್ಳೆಯ ಕೆಲಸವನ್ನು ಮಾಡಿದರೆ ಅದನ್ನು ಕಾಲೆಳೆಯುವವರ ಸಂಖ್ಯೆ
ಹೆಚ್ಚಾಗಿ ಇರುತ್ತದೆ. ಇದರಿಂದ ಒಳ್ಳೇಯ ಕೆಲಸವನ್ನು ಮಾಡುವವರಿಗೆ ಪ್ರೋತ್ಸಾಹವನ್ನು ನೀಡಬೇಕಿದೆ. ಬೆಳಸಬೇಕಿದೆ.
ಮುಂದುವಯ್ಯುವಂತ ಕಾರ್ಯವನ್ನು ಮಾಡಬೇಕಿದೆ. ಇಂದಿನ ದಿನಮಾನದಲ್ಲಿ ಶಿಕ್ಷಣದ ಅಗತ್ಯ ಇದೆ ಈ ಹಿಂದೆ ಬಂಜಾರ
ಸಮುದಾಯದಲ್ಲಿ ಶಿಕ್ಷಣದ ಕೊರತೆ ಇತ್ತು ಅದರೆ ಈಗ ಈ ಸಮುದಾಯವರು ಹೆಚ್ಚಾಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಇದು
ಸಂತೋಷದ ಸಂಗತಿಯಾಗಿದೆ. ಒಂದು ಕಾಲದಲ್ಲಿ ಈ ಸಮುದಾಯದವರು ತಾಂಡಗಳನ್ನು ಬಿಟ್ಟು ಹೊರಗೆ ಬರುತ್ತಿರಲಿಲ್ಲ ಅಲ್ಲಿಯೇ
ಕೂಲಿಯನ್ನು ಮಾಡುತ್ತಾ ಅಲ್ಲಿಯೇ ತಮ್ಮ ಜೀವನವನ್ನು ನಡೆಸುತ್ತಿದ್ದರು. ಮಕ್ಕಳಿಗೆ ಸರಿಯಾಗಿ ಶಿಕ್ಷಣವನ್ನು ನೀಡುತ್ತಿರಲಿಲ್ಲ, ಆದರೆ
ಈಗ ಅವರು ವಿದ್ಯಾವಂತರಾಗಿ ಉದ್ಯೋಗವಂತರಾಗಿ ಬುದ್ದಿವಂತರಾಗಿದ್ದಾರೆ. ಸಮಾಜದಲ್ಲಿ ಗೌರವಯುತವಾದ ಬದುಕನ್ನು
ನಡೆಸುತ್ತಿದ್ದಾರೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ ಬಂಜಾರ ಸಮುದಾಯದವರು ದುಡಿಮೆಯಲ್ಲಿ ಯಾವೊತ್ತು ಸಹಾ ಹಿಂದೆ
ಬೀಳುವುದಿಲ್ಲ ಶ್ರಮವಹಿಸಿ ದುಡಿಯುತ್ತಾರೆ. ದುಡಿಮೆಯಲ್ಲಿ ದೇಶದಲ್ಲಿಯೇ ಬಜಾಂರ ಸಮುದಾಯ ಮುಂದೆ ಇದೆ. ಬುದ್ದಿವಂತಿಕೆ,
ಶಕ್ತಿಯಿಂದ ಸಾಮರ್ಥದಿಂದಲೂ ಸಹಾ ಈ ಸಮುದಾಯ ಕೆಲಸವನ್ನು ಮಾಡುತ್ತಿದೆ. ಈ ಜನಾಂಗದ ವೇಷ ಆಕರ್ಷಣಿಯವಾಗಿದೆ
ಇದನ್ನು ಬೇರೆಯವರು ಹಾಕಿಕೊಂಡು ಪೋಟೋವನ್ನು ತೆಗೆಸಿಕೊಳ್ಳುತ್ತಿದ್ದಾರೆ. ಭಾಷೆಯಲ್ಲಿ ಒಂದೇ ಇರುವ ಸಮಾಜ ಎಂದರೆ ಅದು

ದೇಶದಲ್ಲಿ ಬಂಜಾರ ಸಮುದಾಯ ಮಾತ್ರ, ತಮ್ಮಲ್ಲಿನ ಪ್ರತಿಭೆಯನ್ನು ಹೆಚ್ಚು ಮಾಡುವಂತ ಗಮನ ನೀಡಿ, ಮುಖ್ಯವಾಹಿನಿಗೆ
ಬರಬೇಕು ಮುಖ್ಯ ಸ್ಥಾನದಲ್ಲಿ ಸಮಾಜ ಇರಬೇಕಿದೆ ಎಂದು ತಿಳಿಸಿದರು.

ಯಾವುದೇ ಹಾಗೂ ಯಾರ ಆಪಪ್ರಚಾರಕ್ಕೂ ಸಹಾ ಕಿವಿಗೂಡಬೇಡಿ ನಂಬಬೇಡಿ, ಯಾರ ಮಾತನ್ನು ನಂಬಬೇಡಿ, ಹಿಂದುಳಿದ ಎಲ್ಲಾ
ಸಮುದಾಯಗಳ ಏಳ್ಗೆ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ ನೀವು ಹಾಕುವ ಕಾರ್ಯಕ್ರಮಗಳಿಗೆ ನಾನು ಮುಂದೆ ನಿಂತು ನಿಮ್ಮ
ಬೆನ್ನಲುಬಾಗಿ ಇರುತ್ತೇನೆ ಎಂದು ಸಂಸದ ಗೋವಿಂದ ಕಾರಜೋಳ ಭರವಸೆಯನ್ನು ನೀಡಿದರು.

ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವನಾಯ್ಕ
ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಲಂಬಾಣಿ ಜನಾಂಗ 1 ಲಕ್ಷದಿಂದ 1ವರೆ ಲಕ್ಷದವರೆಗೆ ಜನಾಂಗ ಇದೆ ಇಷ್ಟು ಇದ್ದ ಜನಾಂಗ ಈ
ರೀತಿಯ ಕಾರ್ಯಕ್ರಮದಲ್ಲಿ ಹೆಚ್ಚಿನ ರೀತಿಯಲ್ಲಿ ಜನತೆ ಭಾಗವಹಿಸಬೇಕಿತ್ತು, ಆದರೆ ಕಡಿಮೆ ಸಂಖ್ಯೆಯಲ್ಲಿ ಬಂದಿರುವುದು
ದುರಂತವಾಗಿದೆ. ದೇಶದ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಈ ಜನಾಂಗ ವ್ಯಾಪ್ತಿಸಿದ್ದು, ಇಲ್ಲಿ ಒಂದೇ ರೀತಿಯ
ಉಡುಗೆ ತೊಡುಗೆಯನ್ನು ಹೊಂದಿದೆ. ನಾವು ಅನೇಕ ಜಾತಿಗಳ ಆಚಾರ ವಿಚಾರವನ್ನು ನೋಡಲಾಗಿದೆ. ಎಲ್ಲದರಲ್ಲೂ ಸಹಾ ಗಂಡು,
ಹೆಣ್ಣು ಎಂದು ಭೇದವನ್ನು ಮಾಡಲಾಗಿದೆ ಆದರೆ ನಮ್ಮ ಬಂಜಾರ ಸಮುದಾಯದಲ್ಲಿ ಮಾತ್ರ ಗಂಡು ಹೆಣ್ಣು ಎಂದು ಭೇದ ಇಲ್ಲದೆ
ಎಲ್ಲರು ಒಂದೇ ಎಂಬ ಭಾವನೆಯಿಂದ ನೋಡಲಾಗುತ್ತಿದೆ ಎಂದರು.

ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ ನಮ್ಮ ಸಮುದಾಯದ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು
ಕೂಡಿಸಬೇಕಿದೆ ಇದಕ್ಕೆ ಉಚುತವಾದ ಹಾಸ್ಟಲ್ ನೀಡಬೇಕಿದೆ ಆದರೆ ಈಗ ಹಾಸ್ಟಲ್ ಸದ್ಯಕ್ಕೆ ನಿಂತಿದೆ ಅದನ್ನು ಪುನರ್ ಸ್ಥಾಪನೆ
ಮಾಡಬೇಕಿದೆ ಇದರ ಬಗ್ಗೆ ನಿಗಮದ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಹಾಸ್ಟಲ್ ಪುನರ್ ಸ್ಥಾಪನೆ ಮಾಡಲು
ಅನುವು ಮಾಡಿಕೊಂಡಬೇಕಿದೆ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ತಾ.ಅಧ್ಯಕ್ಷರಾದ ಶ್ರೀಮತಿ ಗೀತಾಬಾಯಿ ಗುರುರಾಜ್, ಎಸ್.ಬಿ.ಐ.ನ
ವ್ಯವಸ್ಥಾಪಕರಾದ ಗುರುರಾಜ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಮುರಳಿ, ವೇದ ಆಗಮ ಪುರೋಹಿತರಾದ ಬ್ರಹ್ಮ ಸುನೀತ ಶಾಸ್ತ್ರಿಜಿ,
ಮಾರುತಿ ನಾಯ್ಕ್, ನಾಗರಾಜ್ ನಾಯ್ಕ್, ಮಂಜುನಾಥ್ ನಾಯ್ಕ್, ವೀರಭದ್ರನಾಯ್ಕ್, ರಮೇಶ್ ನಾಯ್ಕ್, ವೆಂಕಟೇಶ್ ನಾಯ್ಕ್,
ಗೀರೀಶ್ ನಾಯ್ಕ್ ಭಾಗವಹಿಸಿದ್ದರು.

ನಗರದ ಹಳೇ ಮಾಧ್ಯಮಿಕ ಶಾಲಾವಾರಣದಿಂದ ಜರುಗಿದÀ ಮೆರವಣಿಗೆಯನ್ನು ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ್ರ ರಾಘವೇಂದ್ರ
ಚಾಲನೆ ನೀಡಿದರು.ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು
ಅಂಕಗಳಿಸಿದ ಸಮುದಾಯದ ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Views: 1

Leave a Reply

Your email address will not be published. Required fields are marked *