
ಗೌರವ ಕಾರ್ಯದರ್ಶಿ, ಅಕೌಂಟೆಂಟ್ ವಿಮುಕ್ತಗೊಳಿಸುವಂತೆ ತೀರ್ಮಾನ
ವಯೋ ನಿವೃತ್ತಿ ನಂತರವೂ ಕರ್ತವ್ಯದಲ್ಲಿ ಮುಂದುವರೆಕೆಗೆ ಆಕ್ರೋಶ.
ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ಣಯ.
ನಾಯಕನಹಟ್ಟಿ: ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗೌರವಧನದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕೂಡಲೇ ಕರ್ತವ್ಯದಿಂದ ವಿಮುಕ್ತಿಗಳಿಸುವಂತೆ ಸಂಘದ ಅಧ್ಯಕ್ಷ ಜೆ.ಆರ್. ರವಿಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ವಿರುಪಾಕ್ಷಪ್ಪ ಮೂರು ವರ್ಷ ಹಿಂದೆಯೇ ವಯೋ ನಿವೃತ್ತಿ ಹೊಂದಿದ್ದಾರೆ. ಹಾಗೆಯೇ ಅಕೌಂಟೆಂಟ್ ಅಮೃತವಾಣಿ ಒಂದು ವರ್ಷದ ಹಿಂದೆಯೇ ವಯೋ ನಿವೃತ್ತಿ ಹೊಂದಿದ್ದರೂ ಕರ್ತವ್ಯದಲ್ಲಿ ಮುಂದುವರೆದು ವೇತನ ಪಡೆದುಕೊಂಡಿದ್ದಾರೆ. ಹೀಗಾಗಿ ಸರ್ಕಾರದ ಅಧಿಸೂಚನೆ ಸಂಖ್ಯೆ 123 ಸಿಎಲ್‍ಎಂ 2016 ದಿ.29-07-2017ರ ಆದೇಶದಂತೆ ವಯೋ ನಿವೃತ್ತಿ ನಂತರ ನೇಮಕಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳ್ನು ತೆರವುಗೊಳಿಸಬೇಕಿದೆ. ಆದ್ದರಿಂದ ಕೂಡಲೇ ಈ ಇಬ್ಬರಿಂದ ಇಲ್ಲಿವರೆಗೂ ಪಡೆದ ವೇತನಕ್ಕೆ ಬಡ್ಡಿ ಸಮೇತ ವಸೂಲಿ ಮಾಡಬೇಕೆಂದು ಅಧ್ಯಕ್ಷ ಜೆ.ಆರ್.ರವಿಕುಮಾರ್ ವಿಷಯ ಮಂಡಿಸಿದರು. ಇದಕ್ಕೆ ಸರ್ವಸದಸ್ಯರು ಒಪ್ಪಿಗೆ ಸೂಚಿಸಿದರು.
ಸಂಘದಲ್ಲಿ 2890 ಷೇರುದಾರರಿದ್ದು. ಮುಂದಿನ ದಿನಗಳಲ್ಲಿ ಷೇರುದಾರರ ಸಂಖ್ಯೆ ಹೆಚ್ಚಳ ಮಾಡಬೇಕು. ಪಡಿತರ ಪಡೆಯಲು ಹಾಗೇ ಸಾಲ ಪಡೆದ ರೈತರ ಮಾಹಿತಿ ಪಡೆದು ಸಕಾಲದಲ್ಲಿ ಸಾಲವನ್ನು ಮರುಪಾವತಿಸುವಂತೆ ಪ್ರೇರೇಪಣೆ ಮಾಡಲಾಗುವುದು. ನಾಯಕನಹಹಟ್ಟಿ ಪಟ್ಟಣದ ಹಲವು ವಾರ್ಡ್‍ಗಳ ಫಲಾನುಭವಿಗಳಿಗೆ ತಿಂಗಳಲ್ಲಿ ಹದಿನೈದು ದಿನಗಳವರೆಗೂ ನಿರಂತರವಾಗಿ ವಿಳಂಬವಾಗದೇ ಸಕಾಲಕ್ಕೆ ಪಡಿತರ ಒದಗಿಸಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಳಿತಾಯ ಖಾತೆಯು ಕೆನರಾ ಬ್ಯಾಂಕಿನಲ್ಲಿದ್ದು, ಅದನ್ನು ಕೂಡಲೇ ರದ್ದುಪಡಿಸಿ ಆ ಖಾತೆಯನ್ನು ಪಟ್ಟಣದಲ್ಲಿರುವ ಸಿಡಿಸಿಸಿ ಬ್ಯಾಂಕ್‍ಗೆ ವರ್ಗಾಯಿಸುವಂತೆ ಅನುಮೋಧಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ.ಆರ್.ರವಿಕುಮಾರ್, ಉಪಾಧ್ಯಕ್ಷ ಕಷ್ಣಪ್ಪ, ನಿರ್ಧೇಶಕರಾದ ನೀಲಮ್ಮ, ಸಿದ್ದಮ್ಮ, ಜಿ.ನಿಂಗಪ್ಪ, ಅಕ್ರಂವುಲ್ಲಾ, ಜಿ.ಪಿ.ಬಸವರಾಜ್, ಪಾಲಯ್ಯ, ಬೋಸೇರಂಗಪ್ಪ, ಸೋಮ್ಲಾನಾಯ್ಕ್, ಹಾಯ್ಕಲ್ ರಾಜಯ್ಯ ಸಿಡಿಸಿಸಿ ಬ್ಯಾಂಕ್ ಮೇಲ್ವೀಚಾರಕ ನವೀನ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್ ಉಪಸ್ಥಿತರಿದ್ದರು.