ರಾಜ್ಯದ ರಸ್ತೆಗಳ ಅಭೀವೃದ್ದಿಗಾಗಿ ಕೇಂದ್ರ ಸರ್ಕಾರದಿಂದ 50 ಲಕ್ಷ ಕೋಟಿ: ಸಂಸದ ಗೋವಿಂದ ಕಾರಜೋಳ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 24 : ಕರ್ನಾಟಕ ರಾಜ್ಯಕ್ಕೆ 50 ಲಕ್ಷ ಕೋಟಿ ಹಣವನ್ನು ಕೇಂದ್ರ ಸರ್ಕಾರ ರಸ್ತೆಗಳ ಅಭೀವೃದ್ದಿಗಾಗಿ ನೀಡಲಾಗಿದೆ ಎಂದು ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.

ನ್ಯಾಷನಲ್ ಹೈವೇ ಲಾಜಿಸ್ಟಿಕ್ ಮ್ಯಾನೇಜೈಂಟ್ ಲಿಮಿಟೆಡ್ ಹಾಗೂ ಮೆ|| ಸುಮಾರ್ಗ ಎಮಿನಿಟೀಜ ಪ್ರೈ. ಸಹಯೋಗದೊಂದಿಗೆ
ಚಿತ್ರದುರ್ಗ ಜಿಲ್ಲಾ ಕೇಂದ್ರದ ಹೊರವಲಯದ ಮಲ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ48ರಲ್ಲಿ (ಹಳೇಹೆದ್ದಾರಿನಂ.4) ರಸ್ತೆ ಬದಿಯ
ಮೂಲ ಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸುವ ಕಟ್ಟಡ ಕಾಮಗಾರಿಗಳಿಗೆ “ಭೂಮಿ ಪೂಜಾಯನ್ನು ನೇರವೇರಿಸಿ
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು. ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಆಧಿಕಾರಕ್ಕೆ ಬಂದ ಮೇಲೆ ದೇಶದ
ಉದ್ದಗಲ್ಲಕ್ಕೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಅಭೀವೃದ್ದಿ ಮಾಡುವುದರಲ್ಲಿ ದೇಶ ಬಹಳಷ್ಟು
ಪ್ರಗತಿಯನ್ನು ಸಾಧಿಸಿದೆ. ಇದು ಮೋದಿಯವರ ಹಾಗೂ ಸಚಿವರಾದ ನತಿನ್ ಗಡ್ಕರಿರವರ ಕನಸು ಸಹಾ ಆಗಿದೆ. ನಮ್ಮ ದೇಶದ
ರಸ್ತೆಗಳು ಸಹಾ ಅಂತರಾಷ್ಟ್ರಿಯ ಮಟ್ಟದಲ್ಲಿ ಇರಬೇಕು ರಸ್ತೆಗಳಲ್ಲಿ ಸಂಚಾರ ಮಾಡುವವರಿಗೆ ಮೂಲಭೂತ ಸೌಕರ್ಯಗಳು
ದೂರಕಬೇಕು, ವಸತಿ ಸಿಗಬೇಕು, ಚಾಲಕರಿಗೆ ಡಾರ್ಮೆಟರಿ ದೂರಕಬೇಕು, ಅವರು ರೆಸ್ಟ್ ಪಡೆಯಲು ಅವಕಾಶವನ್ನು ಕಲ್ಪಿಸಬೇಕಿದೆ.
ಇದರೊಂದಿಗೆ ಉತ್ತಮವಾದ ಆಹಾರ ನೀಡುವ ಕೇಂದ್ರಗಳು, ಶೌಚಾಲಯಗಳು, ವಸತಿ ಗೃಹಗಳು, ಮಾಲ್‍ಗಳನ್ನು ವ್ಯಾಪಾರ
ಮಾಡಲು ಅನುಕೂಲವನ್ನು ಕಲ್ಪಿಸಬೇಕಿದೆ ಎಂದರು.

ಸಾವಿರಾರು ಕಿ.ಮೀ. ರಾ.ಹೆದ್ದಾರಿಗಳು ಇವೆ. ಬಾಂಬೆಯಿಂದ ಬೆಂಗಳೂರು,ಪುಣೆಯಿಂದ ಬೆಂಗಳೂರುವರೆಗೂ ನಾಗಪುರದವರೆಗೂ
ಹೆದ್ದಾರಿಗಳಿವೆ. ಈ ಹೆದ್ದಾರಿಗಳಿಗೆ ಸಂಪರ್ಕವನ್ನು ಕಲ್ಪಿಸಬೇಕಿದೆ ಈ ಹಿನ್ನಲೆಯಲ್ಲಿ ಮೋದಿಯವರ ಸರ್ಕಾರ ಉತ್ತಮವಾದ
ಕಾರ್ಯವನ್ನು ಮಾಡಿದೆ. ಆಟಲ್ ಬಿಹಾರಿ ವಾಜಿಪೇಯಿಯವರ ಕನಸು ಸಹಾ ಇತ್ತು. ಒಂದೇ ದೇಶಕ್ಕೆ ಮಾಲೆಯ ರೀತಿಯಲ್ಲಿ ಸುವರ್ಣ
ಪಥ ರಸ್ತೆಯನ್ನು ಮಾಡಬೇಕೆಂದು ಕನಸನ್ನು ಹೊಂದಿದ್ದರು. ಅದನ್ನು ಅವರ ಕಾಲದಲ್ಲಿಯೇ ಮಾಡಲಾಗಿತ್ತು ಅದರ ಮುಂದುವರೆದ
ಭಾಗವಾಗಿ ದೇಶದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೆ 50 ಲಕ್ಷ ಕೋಟಿ
ಹಣವನ್ನು ಕೇಂದ್ರ ಸರ್ಕಾರ ರಸ್ತೆಗಳ ಅಭೀವೃದ್ದಿಗಾಗಿ ನೀಡಲಾಗಿದೆ ಎಂದು ಸಂಸದರು ತಿಳಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 11 ಎಕರೆ ಪ್ರದೇಶದಲ್ಲಿ ಸುಮಾರು 40 ಕೋಟಿ ವೆಚ್ಚದಲ್ಲಿ ಹೋಟೇಲ್ ವಸತಿಗೃಹ, ಮಾಲ್,
ಚಾಲಕರಿಗೆ ಡಾರ್ಮಿಟರಿಗಳು ಶೌಚಾಲಯಗಳು, ಸ್ನಾನಗೃಹಗಳು, ಎಲ್ಲಾ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗುತ್ತಿದೆ. ಇದರಿಂದ
ಹೋಟೆಲ್ ಉದ್ಯಮ ಅಭೀವೃದ್ದಿಯಾಗಲಿದೆ. ಇದನ್ನು 8 ತಿಂಗಳಲ್ಲಿ ಪ್ರಥಮ ಹಂತದ ಕಾಮಗಾರಿಯನ್ನು ಪೂರ್ಣ ಮಾಡಲಾಗುತ್ತಿದೆ.
ಲೋಕಾರ್ಪಣೆಯನ್ನು ಮಾಡಲಿದ್ದಾರೆ. ಪಾಲುದಾರಿಕೆಯ ಮೇಲೆ ಈ ಕಾರ್ಯ ನಡೆಯುತ್ತಿದೆ ಇದು ಉತ್ತಮವಾದ ಬೆಳವಣಿಗೆಯಾಗಿದೆ.
ಚಿತ್ರದುರ್ಗದಲ್ಲಿ ತ್ರಿಸ್ಟಾರ್ ಹೋಟೇಲ್ ಇರಲಿಲ್ಲ ಇರಲಿಲ್ಲ ಇದು ಉತ್ತಮವಾದ ಹೋಟೇಲ್ ವ್ಯವಸ್ಥೆಯಾಗಲಿದ್ದು ಜನರಿಗೆ ಹೋಟೇಲ್
ವ್ಯವಸ್ಥೆ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ
ಎ.ಮುರಳಿ, ಖಂಜಾಚಿ ಮಾಧುರಿ ಗೀರೀಶ್, ರಾಜ್ಯ ರೈತ ಮೂರ್ಚಾದ ಕಾರ್ಯದರ್ಶೀ ಮಲ್ಲಿಕಾರ್ಜನ್, ನಗರಸಭಾ ಅಧ್ಯಕ್ಷೆ ಶ್ರೀಮತಿ
ಸುಮಿತಾ ರಾಘವೇಂದ್ರ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಸುರೇಶ್, ಮುಖಂಡರಾದ ಅನಿತ್ ಕುಮಾರ್, ವಿನೋಧ್ ಲೋಲಿ,
ಶಿವಸಿಂಪಿ ಸಮಾಜದ ಮುಖಂಡರಾದ ಷಣ್ಮುಖಪ್ಪ, ಮುರುಗೇಶ್, ಶಿವಯೋಗಿ, ಅನಿತಾ ಮುರುಗೇಶ್, ಗೋನೂರು ಗ್ರಾಮ
ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗುಂಡಮ್ಮ ನಿರ್ದೇಶಕರಾದ ಉಮೇಶ್ ಮಹಾಬಳಶೆಟ್ಟಿ, ಲಲಿತ್ ನಹತಾ, ಅರವಿಂದ್ ಬಿ.ಜಿ
ಭಾಗವಹಿಸಿದ್ದರು.

Leave a Reply

Your email address will not be published. Required fields are marked *