ಮಾನವನಲ್ಲಿ ಉತ್ತಮವಾದ ಗುಣ ಹಾಗೂ ಮೌಲ್ಯಗಳನ್ನು ಬೆಳಸುವುದೇ ನಿಜವಾದ ಶಿಕ್ಷಣ : ಡಾ.ಶ್ರೀ ಬಸವಪ್ರಭು ಶ್ರೀಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 24 ಮಾನವನಲ್ಲಿ ಉತ್ತಮವಾದ ಗುಣ ಹಾಗೂ ಮೌಲ್ಯಗಳನ್ನು ಬೆಳಸುವುದೇ ನಿಜವಾದ ಶಿಕ್ಷಣವಾಗಿದೆ ಎಂದು ದಾವಣಗೆರೆಯ
ವಿರಕ್ತಮಠದ ಅಧ್ಯಕ್ಷರಾದ ಡಾ.ಶ್ರೀ ಬಸವಪ್ರಭು ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ರಾ.ಹೆ.50ರ ಪಿಳ್ಳೇಕೆರೆನಹಳ್ಳಿಯಲ್ಲಿನ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯ ಹಾಗೂ ದಾವಣಗೆರೆ ವಿಶ್ವ
ವಿದ್ಯಾನಿಲಯದವತಿಯಿಂದ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹತ್ತು ಬೆಳದಿಂಗಳು ವಿಶೇಷ ಕಾರ್ಯಕ್ರಮದಲ್ಲಿ ಪ್ರಥಮ
ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಎನ್.ಎಸ್.ಎಸ್.ಘಟಕ ಉದ್ಘಾಟನೆ
ಹಾಗೂ ಕೈ ಬರಹ ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಮಾನವ ಬಾಹ್ಯವಾಗಿ ಸುಂದರವಾಗಿ ಕಾಣುವುದಕ್ಕಿಂತ ಆಂತರಿಕವಾಗಿ ಸುಂದರವಾಗಿ ಕಾಣುವಂತಾಗಬೇಕಿದೆ, ಇದು ಶಾಶ್ವತವಾದ ಸೌಂದರ್ಯವಾಗಿದೆ. ಇದನ್ನು ಪಡೆದವರು ಜೀವನ ಪೂರ್ತಿಯಾಗಿ ಸುಂದರವಾಗಿ ಇರುತ್ತಾರೆ. ಗುಣ ಸದ್ಗುಣ ಸೇರಿ ಸೌಂದರ್ಯವಾಗಿದೆ. ಇಂದಿನ ದಿನಮಾನದಲ್ಲಿ ವಿದ್ಯಾವಂತರೇ ತಪ್ಪುಗಳನ್ನು ಮಾಡುತ್ತಿದ್ದಾರೆ ತಮ್ಮ ಪೋಷಕರನ್ನು ಮನೆಯಿಂದ ವೃದ್ದಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ವಿದ್ಯಾವಂತರ ರಕ್ತ ಸಂಬಂಧಕ್ಕಿಂತ ಹಣದ ಸಂಭಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಮಾನವರನ್ನು ಕೀಳಾಗಿ ಕಾಣುತ್ತಿದ್ದಾರೆ ಹಣಕ್ಕೆ ಹೆಚ್ಚಿನ ಬೆಲೆಯನ್ನು ನೀಡುತ್ತಿದ್ದಾರೆ ಎಂದು ಶ್ರೀಗಳು ವಿಷಾಧಿಸಿದರು.

ಮಾನವನಲ್ಲಿ ಗುಣ ಹಾಗೂ ಮೌಲ್ಯಗಳನ್ನು ಬೆಳಸುವಲ್ಲಿ ಶಿಕಣ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ನಿಜವಾದ ಶಿಕ್ಷಣ ಎಂದರೆ ಮಾನವ
ಜೀವನವನ್ನು ಉತ್ತಮ ಗೊಳಿಸುವುದು ಆಗಿದೆ. ಶಿಕ್ಷಣವನ್ನು ಪಡೆಯುವುದರಿಂದ ಉತ್ತಮವಾದ ಜೀವನವನ್ನು ಪಡೆಯಲು ಸಾಧ್ಯವಿದೆ.
ಪೋಷಕರಿಗೆ ಮೋಸ ಮಾಡಬೇಡಿ ಸುಳ್ಳನ್ನು ಹೇಳ ಬೇಡಿ ಅವರ ಕಷ್ಟದಿಂದ ನಿಮ್ಮ ಬದುಕು ನಡೆಯುತ್ತಿದೆ ಎಂಬುದನ್ನು ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಶ್ರೀಗಳು, ತಂದೆ-ತಾಯಿಯವರಿಗೆ ಗೌರವ ಕೂಡುವುದನ್ನು ಕಲಿಯಿರಿ,ಗುರುಗಳನ್ನು ಹಿರಿಯರನ್ನು ಗೌರವಿಸಿ, ಮಾನವ ಶಿಕ್ಷಣವನ್ನು ಪಡೆದರೆ ಸಮಾಜದಲ್ಲಿ ಗೌರವ ಸಿಗುತ್ತದೆ. ಇಲ್ಲವಾದಲ್ಲಿ ರಾಕ್ಷಸನಾಗುತ್ತಾನೆ, ತಮ್ಮ ಬದುಕಿನಲ್ಲಿ ಕಾಯಕ ನಿಷ್ಠೆಯನ್ನು ರೂಢಿಸಿಕೊಳ್ಳಿ, ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಅದರ ಸದುಪಯೋಗ ಮಾಡಿಕೊಳ್ಳಿ, 25 ವರ್ಷ ನೀವು ಕಷ್ಟ ಪಟ್ಟರೆ ಮುಂಧಿನ 75 ವಷ ಸುಖವಾಗಿ ಇರಬಹುದಾಗಿದೆ ಆದರೆ 25 ವರ್ಷ ಮೋಜು ಮಾಡಿದರೆ ಮುಂದಿನ 75 ವರ್ಷ ಕಷ್ಟ ಪಡಬೇಕಾಗುತ್ತದೆ ಅಲೋಚನೆ ಮಾಡುವಂತೆ ಶ್ರೀಗಳು ತಿಳಿ ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಡೀನ್ ಪ್ರೊ, ಶ್ರೀಮತಿ ಲಕ್ಷ್ಮೀ ಮಾತನಾಡಿ,
ಸಧೃಡವಾದ ಸಮಾಜವನ್ನು ನಿರ್ಮಾಣ ಮಾಡಲು ಶಿಕ್ಷಣರಿಂದ ಮಾತ್ರ ಸಾಧ್ಯವಿದೆ ಇವರನ್ನು ಬಿಟ್ಟು ಬೇರೆಯಾರಿಗೂ ಸಾಧ್ಯವಿಲ್ಲ
ಶಿಕ್ಷಕರಾದವರು ನಾಲ್ಕು ಗೋಡೆಗಳ ಮಧ್ಯದಲ್ಲಿ ದೇಶದ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡುವ ಪ್ರಜೆಗಳನ್ನು ರೂಪಿಸಲಾಗುತ್ತದೆ. ಕಲಿಕೆ ಎನ್ನುವುದು ನಿರಂತರವಾಗಿ ಇರಬೇಕಿದೆ. ಇದು ನಿಂತ ನೀರಲ್ಲ ಹರಿಯುವ ನೀರಾಗಿದೆ. ಜೀವನದಲ್ಲಿ ವೈಚಾರಿಕ ಚಿಂತನೆಗಳನ್ನು ಬೆಳಸಿಕೊಳ್ಳಬೇಕಿದೆ. ಇಂದಿನ ದಿನಮಾನದಲ್ಲಿ ಸಾಮಾಜಿಕ ಜಾಲ ತಾಣಗಳ ಪ್ರಭಾವ ಹೆಚ್ಚಾಗಿದೆ ಇದರಿಂದ ನಮ್ಮ ಯುವ ಜನಾಂಗ ಹಾಳುಗುತ್ತಿದೆ ಇದನ್ನು ಅಗತ್ಯ ಇರುವುದಕ್ಕೆ ಮಾತ್ರವೇ ಬಳಕ ಮಾಡಿಕೊಳ್ಳಬೇಕಿದೆ ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆ ಮಾಡಬಾರದು ಇದರಿಂದ ಜೀವನಗಳು ಹಾಳಾಗುತ್ತವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಪೂಜಿ ಸಮೂಹ ಸಂಸ್ಥೆಗಳು ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಂ.
ವಿರೇಶ್ ಮಾತನಾಡಿ, ಗುರುಗಳನ್ನು ತಾಯಿ, ಕಾವಿಧಾರಿಗಳಲ್ಲಿ ಹಾಗೂ ಅಕ್ಷರವನ್ನು ಕಲಿಸಿದವರಲ್ಲಿ ಮಾತ್ರವೇ ಕಾಣಲು ಸಾಧ್ಯವಿದೆ,
ಸಮಾಜವನ್ನು ತಿದ್ದುವ ಕಾರ್ಯವನ್ನು ಗುರುಗಳಾದವರ ಮಾತ್ರ ಮಾಡುತ್ತಾರೆ. ತರಗತಿಯಲ್ಲಿ ಮಕ್ಕಳು ಸರಿದಾರಿಗೆ ತರುವ ಕಾರ್ಯವನ್ನು ಶಿಕ್ಷಕರಾದವರು ಮಾತ್ರ ಮಾಡುತ್ತಾರೆ. ನಾವು ಧರಿಸು ವಸ್ತ್ರ ನಮ್ಮ ತನವನ್ನು ತಿಳಿಸುವಂತ ಕಾರ್ಯವಾಗಬೇಕಿದೆ.

ಮನೆಯಲ್ಲಿನ ಹಿರಿಯರ ಮಾತನ್ನು ತಿರಸ್ಕಾರ ಮಾಡಬಾರದು ಇದು ಮುಂದೆ ನಿಮಗೂ ಸಹಾ ಅನ್ವಯವಾಗಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಹೆಚ್.ಎನ್.ಶಿವಕುಮಾರ್‍ರವರ ಕೈ ಬರಹದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದರೊಂದಿಗೆ 2023-24ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಬಿ.ಇಡಿ ಪ್ರಶಿಕ್ಷಣಾರ್ಥಿಗಳನ್ನು ಸನ್ಮಾನಿಸಲಾಯಿತು. ಇದ್ದಲ್ಲದೆ 2022-23 ಹಾಗೂ
2023-24ನೇ ಸಾಲಿನಲ್ಲಿ ಕೆ-ಸೆಟ್, ನೆಟ್, ಸಿ-ಟೆಟ್ ಹಾಗೂ ಟೆಟ್ ಪರೀಕ್ಷೆಗಳಲ್ಲಿ ಅರ್ಹತೆಯನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿಯನ್ನು ಭೋಧಿಸಲಾಯಿತು.

ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿಯ ಮುಖ್ಯಸ್ಥರಾದ ಡಾ.ವೆಂಕಟೇಶ್, ಕಾರ್ಯಕ್ರಮ ಸಂಯೋಜಕರಾದ ಡಾ.ಆಶೋಕ ಕುಮಾರ್
ವಿ.ಪಾಳೇದ ಕರ್ನಾಟಕಮ ಮುಕ್ತ ವಿಶ್ವ ವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ರಾಧಿಕಾ, ಬಾಪೂಜಿ ಶಿಕ್ಷಣ ಮಹಾ
ವಿದ್ಯಾಲಯದ ಪ್ರಾಂಶುಪಾಲರಾದ ಪ್ರೋ.ಜಯಲಕ್ಷ್ಮೀ ಭಾಗವಹಿಸಿದ್ದರು.

Leave a Reply

Your email address will not be published. Required fields are marked *