
ಚಿತ್ರದುರ್ಗ ಫೆ 25: ಚಿತ್ರದುರ್ಗ ತಾಲ್ಲೂಕು, ಜಾಲಿಕಟ್ಟೆ ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಣಿಕಂಠ ಯುವಕರ ಸೇವಾ ಸಂಘ (ರಿ.) ಶ್ರೀವಿನಾಯಕ ಗೆಳೆಯರ ಬಳಗ ಮತ್ತು ಗ್ರಾಮಸ್ಥರಿಂದ 11ನೇ ವರ್ಷದ ಶ್ರೀ ವೀರಭದ್ರೇಶ್ವರ ಗುಗ್ಗುಳೋತ್ಸವ ಹಾಗೂ ಕೆಂಡಾರ್ಚನೆ
ಕಾರ್ಯಕ್ರಮವೂ ಫೆ. 27 ರಂದು ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ
ಕೋಶಾಧ್ಯಕ್ಷರಾದ ಸಿ.ರುದ್ರಪ್ಪ ಜಾಲಿಕಟ್ಟೆ ತಿಳಿಸಿದ್ದಾರೆ.
ಫೆ. 27ರ ಗುರುವಾರ ಬೆಳಿಗ್ಗೆ 5.00 ಗಂಟೆಗೆ “ಶ್ರೀ ಈಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ಆಂಜನೇಯಸ್ವಾಮಿ ಅಭಿಷೇಕ” ಬೆಳಿಗ್ಗೆ 6.ರಿಂದ
ಹೊಳಲ್ಕೆರೆ ತಾಲ್ಲೂಕು, ಕಡೂರು, ಕಲಾತಂಡದವರಿಂದ ‘ವೀರಗಾಸೆ’ ಇವರಿಂದ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಶ್ರೀ ವೀರಭದ್ರೇಶ್ವರ
ಗುಗ್ಗುಳೋತ್ಸವ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಈಶ್ವರ ದೇವಸ್ಥಾನದ ಹತ್ತಿರ “ಕೆಂಡಾರ್ಚನೆ” ನಂತರ 1.00
ಗಂಟೆಯಿಂದ “ಪ್ರಸಾದ ವಿನಿಯೋಗ” ಕಾರ್ಯಕ್ರಮ ನಡೆಯಲಿದೆ. ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸಕಲ
ಬಂಧುಗಳು, ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.