ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 27 ಲಂಬಾಣಿ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಬಂಜಾರ (ಲಂಬಾಣಿ) ಸಮಾಜ (ರಿ)ನ ಜಿಲ್ಲಾಧ್ಯಕ್ಷರಾದ ಎಂ ಸತೀಶ್ ಕುಮಾರ್ ಕರೆ ನೀಡಿದರು.

ಹಿರಿಯೂರು ತಾಲೂಕಿನ ಜೆಜಿ ಹಳ್ಳಿ ಹೋಬಳಿಯ ಓಬಳಾಪುರ ಲಂಬಾಣಿ ತಾಂಡಾದಲ್ಲಿ ಸೇವಾಲಾಲ್ ತಾಂಡ ಆಭಿರುದ್ದಿ ಟ್ರಸ್ಟ್ (ರಿ)
ಓಬಳಾಪುರ ತಾಂಡ ಇವರ ವತಿಯಿಂದ ಹಮ್ಮಿಕೊಂಡಿದ್ದ 286ನೇ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ
ಎರ್ಪಡಿಸಿದ್ದ ಸೇವಾಲಾಲ್‍ರ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಕರು ಸೇವಾಲಾಲ್ ಮಹಾರಾಜರ
ಆದರ್ಶ ಹಾಗೂ ತತ್ವಗಳನ್ನು ಪರಿಪಾಲನೆ ಮಾಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬುದ್ದಿವಂತರು ಮಾತ್ರ ಮುಂದೆ ಬರಲು ಸಾಧ್ಯ.
ಲಂಬಾಣಿ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕು. ಶಿಕ್ಷಣ, ಹೋರಾಟ ಮತ್ತು ಸಂಘಟನೆಯಿದ್ದಲ್ಲಿ
ಜಯ ದೊರಕಲಿದೆ ಎಂದರು.

ಸಂತ ಸೇವಾಲಾಲರ ಸಮಾಜಮುಖಿ ಚಿಂತನೆ ಅನುಕರಣೀಯ ಅಗತ್ಯವಾಗಿದೆ. ನಮ್ಮ ಸಮುದಾಯ ಶ್ರಮ ಸಂಸ್ಕೃತಿಯ
ಪ್ರತೀಕವಾದ ಬಂಜಾರ ಸಮುದಾಯ ಒಂದೆಡೆ ನೆಲೆ ನಿಂತು ವ್ಯವಸಾಯ, ಪಶುಪಾಲನೆ ಮಾಡುವಂತೆ ಅರಿವು ಮೂಡಿಸಿ,
ಸ್ತ್ರೀಯರಿಗೂ ಸಮಾನ ಸ್ಥಾನಮಾನ ಪ್ರತಿಪಾದಿಸಿದ ಮಹಾನ್ ಚೇತನ ಪ್ರಾಮಾಣಿಕತೆ-ನಿಷ್ಠೆಗೆ ಲಂಬಾಣಿ ಸಮುದಾಯ ಹೆಸರಾಗಿದೆ.
ಜಾನಪದಕ್ಕೆ ಸಮುದಾಯ ತನ್ನದೇ ಕೊಡುಗೆ ನೀಡಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುನ್ನಡೆ
ಸಾಧಿಸಬೇಕು ಎಂದು ಬಣ್ಣಿಸಿದರು.
ಬಂಜಾರ ಸಮುದಾಯದ ಸಂಸ್ಕೃತಿ ಮತ್ತು ಭಾಷೆ ಉಳಿಸಿ-ಬೆಳೆಸಲು ಸರ್ಕಾರ ಬಜೆಟ್‍ನಲ್ಲಿ ವಿಶೇಷ ಅನು ದಾನ ಮೀಸಲಿಡಬೇಕು.
ತಾಂಡಾಗಳು ಶೇ. 100 ರಷ್ಟು ಕಂದಾಯ ಗ್ರಾಮಗಳಾಗಬೇಕು. ಶಾಲೆ, ನೀರು, ವಿದ್ಯುತ್, ಬ್ಯಾಂಕ್ ಸೇವೆ, ಗ್ರಂಥಾಲಯ,
ವೈದ್ಯಕೀಯ ಸೇವೆ, ಕಸೂತಿ ಕೇಂದ್ರ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ. ಸಮುದಾಯಕ್ಕೆ ಸಾಮಾಜಿಕ ನ್ಯಾಯ
ಒದಗಿಸಬೇಕು ಎಂದು ಒತ್ತಾಯಿಸಿದರು.
ಸೇವಾಲಾಲ್ ತಾಂಡ ಆಭಿವೃದ್ದಿ ಟ್ರಸ್ಟ್ (ರಿ) ಬಿ.ದುರ್ಗ ಕಲ್ಲವ್ವನಾಗತಿಹಳ್ಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಪರಮೇಶ್,
ಗುಲಗಂಜಿಹಟ್ಟಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶನಾಯ್ಕ್, ಬಂಜಾರ ಜಾನಪದ ಕಲಾವಿದ ಉಮೇಶನಾಯ್ಕ್
ಚಿನ್ನಸಮುದ್ರ ರಮೇಶ ನಾಯ್ಕ, ಕಿರಣ್ ಕುಮಾರ್, ಮಂಜುನಾಥ್ ನಾಯ್ಕ್,ಲಚ್ಚನಾಯ್ಕ್ , ಪ್ರಶಾಂತ್ ಕುಮಾರ್ ಪಿ, ಷಣ್ಮುಖ
ನಾಯ್ಕ್,ಕಿರಣ್ ನಾಯ್ಕ್, ಉಮೇಶ್,ತಾಂಡಾದ ನಾಯಕ್ ಡಾವ್ ಕಾರ್ಬಾರಿ ಭಾಗವಹಿಸಿದ್ದರು. ನಿರೂಪಣೆ ಕಾವೇರಿ
ಮಂಜಮ್ಮನವರು ನೇರವೇರಿಸಿದರು.