ಖಗೋಳದ ಬಗ್ಗೆ ನಿಮ್ಮ ಮಕ್ಕಳಿಗಿದ್ಯಾ ಆಸಕ್ತಿ? ಹಾಗಾದ್ರೆ ಇಸ್ರೋದ ಉಚಿತ ಯುವಿಕಾ ಕಾರ್ಯಕ್ರಮಕ್ಕೆ ನೋಂದಣಿ ಮತ್ತು ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ .

FREE SPACE SCIENCE PROGRAM BY ISRO : ಯುವ ವಿಜ್ಞಾನಿಗಳನ್ನು ರೂಪಿಸುವ ಹಾಗೂ ಮಕ್ಕಳಲ್ಲಿ ಬ್ರಹ್ಮಾಂಡ, ಬಾಹ್ಯಾಕಾಶದಲ್ಲಿನ ಆಸಕ್ತಿಗೆ ಅತ್ಯುತ್ತಮ ವೇದಿಕೆಯನ್ನು ಇಸ್ರೋ ಕಲ್ಪಿಸಿದೆ.

ರಾಜಮಹೇಂದ್ರವರ್ಮಾ (ಆಂಧ್ರ ಪ್ರದೇಶ) : ಯುವ ವಿಜ್ಞಾನಿಗಳನ್ನು ಸಂಶೋಧನೆ ಮತ್ತು ಖಗೋಳ ಅಧ್ಯಯನದಲ್ಲಿ ಪ್ರೇರೇಪಿಸುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ದೇಶದಲ್ಲಿ 9ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಯುವ ವಿಜ್ಞಾನ ಕಾರ್ಯಕ್ರಮದಲ್ಲಿ (ಯುವಿಕಾ-25) ಭಾಗವಹಿಸಬಹುದಾಗಿದೆ. ಇಸ್ರೋ ಕೇಂದ್ರದಲ್ಲಿ 14 ದಿನಗಳ ಕಾಲ ಕಲಿಕೆಗೆ ಅವಕಾಶ ಲಭ್ಯವಾಗುವ ಈ ವಾರ್ಷಿಕ ಕಾರ್ಯಕ್ರಮದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಯುವಿಕಾ : ಭಾರತ ಖಗೋಳ ಸಂಶೋಧನೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 100ಕ್ಕೂ ಹೆಚ್ಚು ಪ್ರಯೋಗಗಳನ್ನು ಮಾಡಿ, ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸ್ಪರ್ಧೆ ಮಾಡುತ್ತಿದೆ. ಈ ಯುವಿಕಾ ಮೂಲಕ ಇಸ್ರೋ ವಿದ್ಯಾರ್ಥಿಗಳಲ್ಲಿರುವ ಅದಮ್ಯ ಕುತೂಹಲವನ್ನು ಹೊರಗೆ ತರುವ ಪ್ರಯತ್ನ ನಡೆಸಲಿದೆ. ಅಲ್ಲದೇ ಅವರಿಗೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಇತ್ತೀಚಿನ ಆವಿಷ್ಕಾರಗಳಿಗೆ ತೆರೆದುಕೊಳ್ಳಲು ಅವಕಾಶ ನೀಡಲಿದೆ. ಇದರಲ್ಲಿ ಭಾಗಿಯಾಗುವ ಆಸಕ್ತಿ ನಿಮಗಿದ್ದಲ್ಲಿ, ನೀವು ಕೂಡ ಇದಕ್ಕೆ ನೋಂದಣಿ ಮಾಡಬಹುದಾಗಿದ್ದು, ಈ ಕುರಿತು ಪ್ರಮುಖಾಂಶಗಳಿಲ್ಲಿವೆ.

ಪ್ರಮುಖ ದಿನಾಂಕ ಮತ್ತು ಆಯ್ಕೆ ಪ್ರಕ್ರಿಯೆ :

  • ಅರ್ಜಿ ಸಲ್ಲಿಕೆ : www.isro.gov.in
  • ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್​ 23
  • ಆಯ್ಕೆ ಪಟ್ಟಿ : ಏಪ್ರಿಲ್​ 7
  • ಕಾರ್ಯಕ್ರಮದ ಅವಧಿ : ಮೇ 19ರಿಂದ 30
  • ಅಂತಿಮ ಪ್ರಶಸ್ತಿ : ಮೇ 31

ಎಲ್ಲಿ ನಡೆಯುತ್ತದೆ ಈ ಕಾರ್ಯಕ್ರಮ : ದೇಶದಲ್ಲಿರುವ ಏಳು ಇಸ್ರೋ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

  • ಡೆಹ್ರಾಡೂನ್​ (ಉತ್ತರಾಖಂಡ್​​)
  • ತಿರುವನಂತಪುರಂ (ಕೇರಳ)
  • ಸುಲ್ಲುರ್​ಪೇಟ್​ (ಆಂಧ್ರಪ್ರದೇಶ)
  • ಬೆಂಗಳೂರು (ಕರ್ನಾಟಕ)
  • ಅಹಮದಾಬಾದ್​ (ಗುಜರಾತ್​)
  • ಹೈದರಾಬಾದ್​ (ತೆಲಂಗಾಣ)
  • ಶಿಲ್ಲಾಂಗ್​ (ಮೇಘಾಲಯ)

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಚಟುವಟಿಕೆ :

  • ಇಸ್ರೋ ವಿಜ್ಞಾನಿಗಳೊಂದಿಗೆ ಮಾತುಕತೆ
  • ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭೇಟಿ
  • ಬಾಹ್ಯಾಕಾಶ ವಿಜ್ಞಾನದಲ್ಲಿ ಕಲಿಕೆಗೆ ಅವಕಾಶ
  • ಗ್ರಹಗಳ ವ್ಯವಸ್ಥೆ ಮತ್ತು ರಾಕೆಟ್​ ಕುರಿತು ಒಳನೋಟ
  • ಪ್ರವಾಸ, ಆಹಾರ ಮತ್ತು ವಸತಿ ಸೌಕರ್ಯ ಸಂಪೂರ್ಣ ಉಚಿತ

ಅರ್ಜಿ ಸಲ್ಲಿಸಲು ಯಾರು ಅರ್ಹರು?

ವಯೋಮಿತಿ : ಖಾಸಗಿ ಅಥವಾ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 9ನೇ ತರಗತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಮಾನದಂಡ :

  • 8ನೇ ತರಗತಿಯಲ್ಲಿ ಶೇ. 80ರಷ್ಟು ಅಂಕ ಗಳಿಸಿರಬೇಕು.
  • ಬಾಹ್ಯಾಕಾಶ/ವಿಜ್ಞಾನ ಕ್ಲಬ್​ನಲ್ಲಿ ಭಾಗಿಯಾಗುವಿಕೆ – ಶೇ. 5ರಷ್ಟು
  • ಜಿಲ್ಲಾ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಪ್ರಬಂಧ/ ಭಾಷಣದಲ್ಲಿ ಸಾಧನೆ – ಶೇ. 10ರಷ್ಟು
  • ಎನ್​ಸಿಸಿ, ಸ್ಕೌಟ್​ ಮತ್ತು ಗೈಡ್​ ಸದಸ್ಯರಾಗಿದ್ದರೆ ಶೇ. 5ರಷ್ಟು
  • ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಶೇ. 20ರಷ್ಟು

ಯುವ ವಿಜ್ಞಾನಿಗಳನ್ನು ರೂಪಿಸುವ ನಿಟ್ಟಿನಲ್ಲಿ ಇದೊಂದು ಅದ್ಭುತ ಅವಕಾಶವಾಗಿದ್ದು, ಇದು ವಿದ್ಯಾರ್ಥಿಗಳನ್ನು ತಮ್ಮ ಕನಸಿನ ಹತ್ತಿರಕ್ಕೆ ಕರೆದೊಯ್ಯುವ ಮತ್ತು ಬ್ರಹ್ಮಾಂಡದ ಕುರಿತು ಅವರ ಕೌತುಕ ನೀಗಿಸುವ ಅತ್ಯುತ್ತಮ ಅವಕಾಶವಾಗಿದೆ.

Source : https://www.etvbharat.com/kn/!education-and-career/isro-yuvika-application-for-young-scientist-here-is-the-free-space-science-program-details-kas25030302161

Leave a Reply

Your email address will not be published. Required fields are marked *