ಚಿತ್ರದುರ್ಗ ಮಾ. 03 ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇವರ ಸಂಯುಕ್ತಾಶ್ರಯಾದಲ್ಲಿ ಮಾ. 8 ರಂದು ಚಿತ್ರದುರ್ಗ ನಗರದ ತರಾಸು ರಂಗಮAದಿರದಲ್ಲಿ 2023 ಮತ್ತು 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರಧಾನ ಹಾಗೂ ಪುಸ್ತಕ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷರಾದ ಡಾ.ಚನ್ನಪ್ಪ ಕಟ್ಟಿ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ಸಮಾರಂಭದಲ್ಲಿ 2023ರಲ್ಲಿ ಹತ್ತು 2024ರಲ್ಲಿ ಹತ್ತು ಮಂದಿಯನ್ನು ಗೌರವಿಸಲಾಗುತ್ತದೆ. 2023ನೇ ಸಾಲಿನ ಗೌರವ ಪ್ರಶಸ್ತಿಗೆ ಪ್ರೋ. ಎಚ್.ಎಸ್.ರಾಘವೇಂದ್ರ ರಾವ್, ವಿನಯ ಚೈತನ್ಯ,
ಡಾ.ಎಚ್.ಎಂ.ಕುಮಾರಸ್ವಾಮಿ, ಡಾ.ನಟರಾಜ್ ಹುಳಿಯಾರ್ ಹಾಗೂ ಡಾ.ದು.ಸರಸ್ವತಿ 2024ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರಾದ
ಡಾ.ಆರ್.ಕೆ.ಕುಲಕರ್ಣಿ, ಡಾ.ಕರಿಗೌಡ ಬೀಚನಹಳ್ಳಿ, ಡಾ.ರಾಜೇಂದ್ರ ಚೆನ್ನಿ, ಶ್ರೀ ಬೋಡೆ ರಿಯಾಜ್ ಅಹ್ಮದ್ ಹಾಗೂ ಡಾ.ಬಸು ಬೇವಿನಗಿಡದ
ಇವರನ್ನು ಗೌರವಿಸಲಾಗುವುದು ಎಂದರು.
2022ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರಲ್ಲಿ ಕನ್ನಡದಿಂದ ಇಂಗ್ಲೀಷ್‌ಗೆ ಶ್ರೀಮತಿ ಮೈತ್ರೇಯಿ ಕೆ.ಆರ್. ಶ್ರೀಮತಿ ಜಯಶ್ರೀ ಭಟ್, ಬಿ.ಆರ್. ಜಯರಾಮರಾಜೇ ಆರಸ್, ಇಂಗ್ಲೀಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ
ಡಾ.ವಿಕ್ರಮ ವಿಸಾಜಿ, ಶ್ರೀಮತಿ ಶುಭಮಂಗಳ ಎಂ.ಜಿ. 2023ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರಾದ ಕನ್ನಡದಿಂದ ಇಂಗ್ಲೀಷ್‌ಗೆ
ಅನುವಾದ ಮಾಡಿದ ಶ್ರೀಮತಿ ಸುಕನ್ಯಾ ಕನಾರಳ್ಳಿ,ಶ್ರೀಧರ ಹೆಗ್ಗೋಡು, ವಿಕಾಸ ಆರ್ ಮೌರ್ಯ ಇಂಗ್ಲೀಷ್ ಹೊರತಾಗಿ ಬೇರೆ
ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ ಸುಬ್ಬಯ್ಯ ಜಿ.ಭಾಗ್ವತ್ ಡಾ.ತೊಂಟದ ಸಿದ್ದರಾಮ ಸ್ವಾಮಿಗಳಿಗೆ
ನೀಡಲಾಗುತ್ತದೆ ಎಂದರು.
ಕುವೆAಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷರಾದ ಸದಸ್ಯ ಸಂಚಾಲಕರಾದ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಇದುವರೆವಿಗೂ ಬೆಂಗಳೂರಿನಲ್ಲಿ ಮಾತ್ರವೇ ಈ ಕಾರ್ಯಕ್ರಮ ನಡೆಸಲಾಗುತ್ತಿತ್ತು ಇದೆ ಪ್ರಥಮ ಬಾರಿಗೆ ಚಿತ್ರದುರ್ಗದಲ್ಲಿ ಗೌರವ ಪ್ರಶಸ್ತಿ ಹಾಗೂ ಬಹುಮಾನ ವಿತರಣೆ ಮಾಡಲಾಗುತ್ತದೆ. ಅಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ವಹಿಸಲಿದ್ದಾರೆ.
ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಶಿವರಾಜ್ ತಂಗಡಗಿ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಪರಿಚಯ ಪುಸ್ತಕವನ್ನು ಸಾಹಿತಿಗಳಾದ ಡಾ.ಕೆ.ಮರಳುಸಿದ್ದಪ್ಪ ಮಾಡಲಿದ್ದು, ಅಧ್ಯಕ್ಷತೆಯನ್ನು ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ವಹಿಸಲಿದ್ದಾರೆ. ಸಂಸದರಾದ ಗೋವಿAದ ಕಾರಜೋಳ, ಸಚಿವರಾದ ಡಿ.ಸುಧಾಕರ್,
ಶಾಸಕರುಗಳಾದ ಬಿಜಿ.ಗೋವಿಂದಪ್ಪ, ರಘುಮೂರ್ತಿ, ಗೋಪಾಲಕೃಷ್ಣ, ಡಾ.ಎಂ.ಚAದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ದ್ರಾಕ್ಷಾರಸ ಮಂಡಳಿ ಅಧ್ಯಕ್ಷರಾದ ಡಾ.ಯೋಗಿಶ್ ಬಾಬು, ಅದಿಜಾಂಬವ ಅಭೀವೃದ್ದಿ ನಿಗಮದ
ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್‌ಪೀರ್, ನಗರಸಭಾ ಅಧ್ಯಕ್ಷರಾದ ಶ್ರೀಮತಿ
ಸುವಿತಾ ರಾಘವೇಂದ್ರ ಭಾಗವಹಿಸಲಿದ್ದಾರೆ ಎಂದರು.