ಅಕ್ರಮ ಚಿನ್ನ ಸಾಗಾಟ ಆರೋಪ: ಮಾಣಿಕ್ಯ ಸಿನಿಮಾ ಖ್ಯಾತಿಯ ನಟಿ ರನ್ಯಾ ರಾವ್ ವಿಮಾನ ನಿಲ್ದಾಣದಲ್ಲೇ ವಶಕ್ಕೆ.

ನಟಿ ರನ್ಯಾ ರಾವ್ (Ranya Rao )ಅವರು 2014 ರ ಸುದೀಪ್ ನಾಯಕನಾಗಿ ನಟಿಸಿದ ಸೂಪರ್ ಹಿಟ್ ಸಿನಿಮಾ ಮಾಣಿಕ್ಯ (Manikya Movie) ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇದೀಗ ನಟಿ ರನ್ಯಾ ರಾವ್ ರಿಂದ ಅಕ್ರಮ ಚಿನ್ನ ಸಾಗಾಟ ಆರೋಪ (Allegations of illegal gold smuggling) ಕೇಳಿ ಬಂದಿದೆ. ವಿದೇಶದಿಂದ ಬಂದ ನಟಿಯನ್ನ DRI  ತಂಡ ವಶಕ್ಕೆ ಪಡೆದಿದೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ (Excess gold from the country) ತಂದಿರುವ ಆರೋಪದಲ್ಲಿ‌ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಏರ್ಪೋಟ್ ಕಸ್ಟಮ್ಸ್  DRI ತಂಡದ ಅಧಿಕಾರಿಗಳಿಂದ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ಕೆಐಎಬಿಯಲ್ಲಿ‌ ವಶಕ್ಕೆ ಪಡೆದು ಅಧಿಕಾರಿಗಳು ನಟಿಯನ್ನು ಕರೆದೊಯ್ದಿದ್ದಾರೆ.

ಡಿಜಿಪಿ ರಾಮಚಂದ್ರರಾವ್ ಸಂಬಂಧಿಯಾಗಿರುವ ನಟಿ ರನ್ಯಾ ರಾವ್ ಅವರನ್ನು ಖಚಿತ ಮಾಹಿತಿ ಮೆರೆಗೆ DRI ತಂಡ ವಶಕ್ಕೆ ಪಡೆದಿದೆ. ನಟಿ ಏರ್ಪೋಟ್ ಗೆ ಬರ್ತಿದ್ದಂತೆ ವಶಕ್ಕೆ ಪಡೆದು ಕರೆದೋಗಿದ್ದಾರೆ  ಅಧಿಕಾರಿಗಳು. ದುಬೈನಿಂದ ಕಳೆದ ರಾತ್ರಿ ಕೆಂಪೇಗೌಡ ಏರ್ಪೋಟ್ ಗೆ ನಟಿ ಬಂದಿದ್ದರು ಎನ್ನಲಾಗಿದೆ.

ರನ್ಯಾ ಜನಿಸಿದ್ದು 1991ರಲ್ಲಿ. ಅವರು ಮೂಲತಃ ಚಿಕ್ಕಮಗಳೂರಿನವರು. ನಟನಾ ವೃತ್ತಿ ಆರಂಭಿಸಲು ಬೆಂಗಳೂರಿಗೆ ಬಂದರು. 2014ರಲ್ಲಿ ಸುದೀಪ್ ನಟನೆಯ ‘ಮಾಣಿಕ್ಯ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರದಲ್ಲಿ ಮಾನಸಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡರು. 2016ರಲ್ಲಿ ತಮಿಳಿನ ಸಿನಿಮಾ ಒಂದನ್ನು ಮಾಡಿದರು. ಆದರೆ, ಇದು ಅಷ್ಟಾಗಿ ಗೆಲುವು ತಂದುಕೊಡಲಿಲ್ಲ.

2017ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಪಟಾಕಿ’ ಸಿನಿಮಾದಲ್ಲಿ ಸಂಗೀತಾ ಹೆಸರಿನ ಪಾತ್ರ ಮಾಡಿದರು. ಆ ಬಳಿಕ ಅವರಿಗೆ ಅಷ್ಟಾಗಿ ಆಫರ್​ಗಳು ಬರಲೇ ಇಲ್ಲ. ಆ ಬಳಿಕ ಅವರು ಸಿನಿಮಾ ಮಾಡಿಲ್ಲ. ಈಗ ಅವರು ಅಕ್ರಮ ಚಿನ್ನ ಸಾಗಣೆ ಮಾಡಿದ ಆರೋಪದಲ್ಲಿ ಸುದ್ದಿ ಆಗಿದ್ದಾರೆ.

Source : https://kannada.news18.com/news/entertainment/actress-ranya-rao-accused-of-illegal-dri-team-started-investigation-yda-2013456.html

Leave a Reply

Your email address will not be published. Required fields are marked *