
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಭಾನುವಾರ ಮುಕ್ತಾಯವಾಗಿದ್ದು ಇದೀಗ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 22ರಂದು ಈಡನ್ ಗಾರ್ಡನ್ಸ್ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ.
ಐಪಿಎಲ್ ಮೆಗಾಹರಾಜಿನಲ್ಲಿ ತಂಡಗಳು ಮತ್ತಷ್ಟು ಸ್ಟಾರ್ ಆಟಗಾರರನ್ನು ಖರೀದಿ ಮಾಡುವ ಮೂಲಕ ತಂಡದ ಬಲವನ್ನು ಹೆಚ್ಚಿಸಿಕೊಂಡಿವೆ. ಕಳೆದ ಬಾರಿಗಿಂತ ಈ ಬಾರಿ ಐಪಿಎಲ್ ಮತ್ತಷ್ಟು ರೋಚಕವಾಗಿರಲಿದೆ. ಹಲವು ತಂಡಗಳು ಪ್ರಮುಖ ಆಟಗಾರರ ಈ ಬಾರಿ ಬೇರೆ ತಂಡದ ಜೊತೆ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ಪಂದ್ಯಗಳಿಗೆ ಈಗಾಗಲೇ ಹಲವು ಫ್ರಾಂಚೈಸಿಗಳು ಟಿಕೆಟ್ ಮಾರಾಟ ಆರಂಭಿಸಿವೆ.
ಆರ್ಸಿಬಿ ಪಂದ್ಯಗಳ ಟಿಕೆಟ್ ಬೆಲೆ ಎಷ್ಟು?
ಸಾಮಾನ್ಯವಾಗಿ ಚಿನ್ನಸ್ವಾಮಿಯಲ್ಲಿ ನಡೆಯುವ ಆರ್ ಸಿಬಿ ಪಂದ್ಯಗಳ ಟಿಕೆಟ್ ಬೆಲೆ ದುಬಾರಿಯಾಗಿರುತ್ತದೆ. ಎಲ್ಲಾ ಫ್ರಾಂಚೈಸಿಗಳಿಗಿಂತ ಆರ್ ಸಿಬಿ ಹೆಚ್ಚಿನ ಟಿಕೆಟ್ ಬೆಲೆ ನಿಗದಿ ಮಾಡುತ್ತದೆ, ಆದರೂ ಟಿಕೆಟ್ಗಾಗಿ ಅಭಿಮಾನಿಗಳು ಮುಗಿಬೀಳುತ್ತಾರೆ. ಆರ್ ಸಿಬಿ ಪಂದ್ಯಗಳ ಟಿಕೆಟ್ಗಳನ್ನು ಫ್ರಾಂಚೈಸಿಯ ಅಧಿಕೃತ ವೆಬ್ಸೈಟ್ (https://shop.royalchallengers.com/ticket) ನಲ್ಲಿ ಖರೀದಿ ಮಾಡಬುದು.
ಸದ್ಯ ಆರ್ ಸಿಬಿ ಇನ್ನೂ ಟಿಕೆಟ್ ಮಾರಾಟವನ್ನು ಆರಂಭಿಸಿಲ್ಲ ಇನ್ನು ಕೆಲವೇ ದಿನಗಳಲ್ಲಿ ಟಿಕೆಟ್ ಮಾರಾಟ ಆರಂಭಿಸಲಿದೆ. ಟಿಕೆಟ್ ಮಾರಾಟ ಆರಂಭಿಸಿದರೆ ತಂಡದ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಆರ್ ಸಿಬಿ ಮಾಹಿತಿ ನೀಡುತ್ತದೆ. ನೀವು ತಂಡದ ಅಧಿಕೃತ ವೆಬ್ಸೈಟ್ನಲ್ಲಿ ಟಿಕೆಟ್ ಖರೀದಿ ಮಾಡಬಹುದು.
ಟಿಕೆಟ್ ಬುಕ್ ಮಾಡುವುದು ಹೇಗೆ?
ಒಂದೊಂದು ಕ್ರೀಡಾಂಗಣದಲ್ಲಿ ಒಂದೊಂದು ರೀತಿಯಲ್ಲಿ ಬೆಲೆಗಳನ್ನು ನಿಗದಿ ಮಾಡಲಾಗಿದೆ. 400 ರೂಪಾಯಿಯಿಂದ 30,000 ರೂಪಾಯಿವರೆಗೆ ಟಿಕೆಟ್ ಬೆಲೆ ನಿಗದಿ ಮಾಡಲಾಗುತ್ತದೆ. ಆರ್ ಸಿಬಿ ತಂಡದ ಟಿಕೆಟ್ ದರ ಸ್ವಲ್ಪ ದುಬಾರಿಯೇ ಇರುತ್ತದೆ. ಫ್ರಾಂಚೈಸಿಗಳು ಟಿಕೆಟ್ಗಳನ್ನು ಕೌಂಟರ್ ಗಳಲ್ಲಿ ಕೂಡ ಮಾರಾಟ ಮಾಡುತ್ತವೆ. ಬುಕ್ ಮೈ ಶೋ, ಪೇಟಿಎಂ ಇನ್ಸೈಡರ್ ನಲ್ಲಿ ಕೂಡ ಟಿಕೆಟ್ ಲಭ್ಯವಿದೆ. ಆರ್ ಸಿಬಿ ಅಧಿಕೃತ ವೆಬ್ಸೈಟ್ನಲ್ಲಿ ನೀವು ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು. ಯಾವುದೇ ಅನಧಿಕೃತ ವೆಬ್ಸೈಟ್ಗಳಲ್ಲಿ ಟಿಕೆಟ್ ಮಾಡುವ ತಪ್ಪು ಮಾಡದೆ ಎಚ್ಚರ ವಹಿಸಿ.
1. ಅಧಿಕೃತ ಐಪಿಎಲ್ ಟಿಕೆಟಿಂಗ್ ವೆಬ್ಸೈಟ್ ಅಥವಾ ನಿಮ್ಮ ನೆಚ್ಚಿನ ತಂಡದ ಸೈಟ್ಗೆ ಭೇಟಿ ನೀಡಿ.
2. ನಿಮ್ಮ ಖಾತೆ ರಚಿಸಿ ಅಥವಾ ಲಾಗಿನ್ ಆಗಿ.
3. ನೀವು ಮೈದಾನದಲ್ಲಿ ವೀಕ್ಷಿಸಲಯ ಬಯಸುವ ಪಂದ್ಯವನ್ನು ಆಯ್ಕೆ ಮಾಡಿ.
4. ನಿಮ್ಮ ಬಜೆಟ್ಗೆ ಸರಿಹೊಂದುವ ಸೀಟ್ಗಳನ್ನು ಆಯ್ಕೆಮಾಡಿ ಮತ್ತು ಟಿಕೆಟ್ ಲಭ್ಯತೆಯನ್ನು ಪರಿಶೀಲಿಸಿ.
5. ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಇಮೇಲ್ ಅಥವಾ ಎಸ್ಎಂಎಸ್ ಮೂಲಕ ನಿಮ್ಮ ದೃಢೀಕರಣವನ್ನು ಸ್ವೀಕರಿಸಿ.