
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 11 : ತಾಯಿ-ಮಗನ ಬಾಂಧವ್ಯದ ಬೆಸುಗೆಯ ಕಥಾ ಹಂದರದ ‘ನಿಂಬಿಯಾ ಬನಾದ ಮ್ಯಾಗ..ಪೇಜ್!’ ಏ. 4 ರಂದು ಬಿಡುಗಡೆಯಾಗಲಿದೆ ಎಂದು ಡಾ| ರಾಜಕುಮಾರ್ ಅವರ ಮೊಮ್ಮಗ, ನಾಯಕ ಷಣ್ಣುಖ ಗೋವಿಂದ ರಾಜ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಂಬಿಯಾ ಬನಾದ ಮ್ಯಾಗ ಪೇಜ್! ನನ್ನ ಪ್ರಥಮ ಚಿತ್ರ. ತಾಯಿ-
ಮಗನ ಸುತ್ತ ಕಥೆ, ಚಿತ್ರ ಕಥೆ ಸಾಗುತ್ತದೆ. 25 ವರ್ಷದ ಬಳಿಕ ಮಗ ತಾಯಿಯನ್ನು ಹುಡುಕಿಕೊಂಡು ಬಂದಾಗ ಮುಂದಿನ
ಕಥಾನಕವೇ ಚಿತ್ರದ ಹೂರಣ ಎಂದರು.
ಎಂಬಿಎ ಮುಗಿಸಿ ಬೆಂಗಳೂರಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡಿದೆ. ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. ನಟನೆ ಬಳಿಕ
ಸಿನಿಮಾದ ವಿವಿಧ ಹಂತಗಳಲ್ಲಿ ತೊಡಗಿಸಿಕೊಳ್ಳುವ ಆಲೋಚನೆ ಇದೆ. ನಿಂಬಿಯಾ ಬನಾದ ಮ್ಯಾಗ ಹಾಡು ಬಾಲ್ಯವನ್ನು
ನೆನಪಿಸುತ್ತದೆ. ಜಾನಪದ ಸೊಗಡನ್ನು ಹೇಳುವ ಕಾರಣಕ್ಕೆ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ ಎಂದು ತಿಳಿಸಿದರು.
ತನುಶ್ರೀ, ಸುನದ್ ರಾಜ್, ಸಂಗೀತಾ, ಪದ್ಮಾ ವಾಸಂತಿ, ರಾಮಕೃಷ್ಣ ಮುಗು ಸುರೇಶ್, ಸಂದೀಪ್ ಮಲಾನಿ, ತ್ರಿಷಾ ಮತ್ತಿತರರು
ಅಭಿನಯಿಸಿದ್ದಾರೆ. ಕನ್ನಡಿಗರು ಪ್ರಥಮ ಚಿತ್ರವನ್ನು ವೀಕ್ಷಿಸುವ ಮೂಲಕ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಆಶೀರ್ವದಿಸಬೇಕು
ಎಂದು ಮನವಿ ಮಾಡಿದರು.
ನಿರ್ದೇಶಕ ಅಶೋಕ ಕಡಬ ಮಾತನಾಡಿ, ನಿಂಬಿಯಾ ಬನಾದ ಮ್ಯಾಗ ಪೇಜ್ 1 ಏ. 4ರಂದು ರಾಜ್ಯದ 60 ಕೇಂದ್ರಗಳಲ್ಲಿ
ಬಿಡುಗಡೆಯಾಗಲಿದೆ. ನನ್ನ ನಿರ್ದೇಶನದ ಆರನೆಯ ಚಿತ್ರ. ಚಿತ್ರಕ್ಕೆ ಕಥೆ-ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ, ಕುಟುಂಬ ಸದಸ್ಯರು
ಆರಾಮವಾಗಿ ನೋಡಬಹುದಾದ ಉತ್ತಮ ಸಿನಿಮಾ ಎಂದು ತಿಳಿಸಿದರು.
ಚಿಕ್ಕಮಗಳೂರು, ಹೆಬ್ರಿ, ಆಗುಂಬೆ ಸೇರಿ ಮಲೆನಾಡಿನ ಭಾಗಗಳಲ್ಲಿ ಶೇ80ರಷ್ಟು ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಕೈಮ್ಯಾಕ್ಸ್
ಹೈಲೈಟ್. ಸಿನಿಮಾದ ಎರಡನೇ ಭಾಗದ ಭಾಗಶಃ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳಲ್ಲಿ ಒಂದು ಈಗಾಗಲೇ
ಬಿಡುಗಡೆಯಾಗಿದೆ. ಶೀರ್ಷಿಕೆ ಹಾಡನ್ನು ನಾಯಕನಟ ಷಣ್ಮುಖ ಗೋವಿಂದರಾಜ್ ಹಾಡಿದ್ದಾರೆ ಎಂದರು.
ನಟ ಸುನಾರಾಜ್ ಮಾತನಾಡಿ, ಮೇಘಮಾಲೆ ಚಿತ್ರದ ಬಳಿಕ ಬಹುದಿನದ ನಂತರ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದೇನೆ. ಗಮನ
ಸೆಳೆಯುವ ಪಾತ್ರ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಚಿತ್ರದ ನಿರ್ಮಾಪಕ ವಿ. ಮಾದೇಶ್, ಚಿತ್ರ ಉತ್ತಮವಾಗಿ ಮೂಡಿಬಂದಿದೆ.
ಸಿನಿಮಾ ಗೆಲ್ಲುವ ಭರವಸೆ ಇದೆ ಎಂದರು.
ಗೋಷ್ಟಿಯಲ್ಲಿ ನಿರ್ಮಾಪಕ ನಗರಸಭೆಯ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಚಿತ್ರದ ನಿರ್ಮಾಪಕ ಮಾದೇಶ್ ಸೇರಿದಂತೆ ಇತರರು
ಭಾಗವಹಿಸಿದ್ದರು.