ವೀರಶೈವವೇ ನಿಜವಾದ ಧರ್ಮ ಲಿಂಗಾಯಿತಎನ್ನುವುದು ರೂಡಿಯಿಂದ ಬಂದಿದ್ದು: ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 14 ಹಿರಿಯರು, ಅಧ್ಯಯನ ಶೀಲರು, ವಯೋವೃದ್ಧರು, ಅತ್ಯುತ್ತಮ ಬರಹಗಾರರು, ಚಿಂತಕರಾದ ಗೋರುಚರನ್ನು ಅವನಿಗೆ ಧರ್ಮದ ಇತಿಹಾಸವೇ ಗೊತ್ತಿಲ್ಲ, ವಯೋವೃದ್ಧ, ಅನುಭವದ ಕೊರತೆ ಇದೆ ಎಂದೆಲ್ಲ ಏಕವಚನದಲ್ಲಿ ಟೀಕಿಸಿ ಗೋರೂಚರ ಅಭಿಪ್ರಾಯಕ್ಕೆ
ತಿರುಗೇಟು ನೀಡಲು ಹೋಗಿ ಒಂದು ಸಮಾಜದ ಗುರುಗಳಾದ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಹಾಗೂ ಕೇದಾರಸ್ವಾಮಿಗಳು ತಮ್ಮ ಸ್ಥಾನದ ಎಲ್ಲೆ ಮೀರಿ ಅಸಹನೆಯ ಮಾತುಗಳನ್ನಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಇದನ್ನು ಜಾಗತಿಕ ಲಿಂಗಾಯತ ಮಹಾಸಭಾ (ರಿ) ಚಿತ್ರದುರ್ಗ ಜಿಲ್ಲಾ ಘಟಕ ಖಂಡಿಸುತ್ತದೆ. ಈ ಕೂಡಲೇ ಶ್ರೀಗಳು ಗೋರುಚರವರ ಕ್ಷೇಮ ಕೋರಬೇಕು ಎಂದು ಒತ್ತಾಯಿಸಿದೆ.


ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ
ಜೆ.ಡಿ.ಕೆಂಚವೀರಪ್ಪ ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ, ಜಾಗತಿಕ ಲಿಂಗಾಯಿತ ಮಹಾಸಭಾ, ಅಖಿಲ ಭಾರತ
ಲಿಂಗಾಯತ ಮಠಾಧೀಶರ ಒಕ್ಕೂಟ, ಬಸವದಳ ಹಾಗೂ ಎಲ್ಲ ಬಸವಪರ ಸಂಘನೆಗಳ ನೇತೃತ್ವದಲ್ಲಿ ವಚನ ದರ್ಶನ ಮಿತ್ಯ/ಸತ್ಯ
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಶ್ರೀಗಳು ಹಿರಿಯ ವಿದ್ವಾಂಸರಾದ ಗೋರೂರು ಚನ್ನಬಸಪ್ಪನವರು ವೀರಶೈವ
ಎಂಬುವುದು ಧರ್ಮವಲ್ಲ, ಲಿಂಗಾಯತವೇ ನಿಜವಾದ ಧರ್ಮ ಎಂದು ಹೇಳಿರುವುದು ಸರಿ. ಎಂಬ ಗೋರೂಚರ ಅಭಿಪ್ರಾಯಕ್ಕೆ
ತಿರುಗೇಟು ನೀಡಲು ಹೋಗಿ ಒಂದು ಸಮಾಜದ ಗುರುಗಳಾದವರು ತಮ್ಮ ಸ್ಥಾನದ ಎಲ್ಲೆ ಮೀರಿ ಅಸಹನೆಯ
ಮಾತುಗಳನ್ನಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ, ಹಾಗೇ ಶ್ರೀಗಳು ವೀರಶೈವವೇ ನಿಜವಾದ ಧರ್ಮ ಲಿಂಗಾಯಿತ
ಎನ್ನುವುದು ರೂಡಿಯಿಂದ ಬಂದಿದ್ದು ಎಂದು ಹೇಳಿದ್ದಾರೆ. ವೀರಶೈವ ಧರ್ಮ ಎಂಬುದಕ್ಕೆ ಯಾವುದೇ ಇತಿಹಾಸ ದಾಖಲೆಗಳು ಇಲ್ಲ,
ಜಗತ್ತಿನಲ್ಲಿ ಯಾವ ಧರ್ಮ ಗುರುಗಳು ಕಲ್ಲಿನಲ್ಲಿ ಉದ್ಭವಿಸಿಲ್ಲ, ನೀವೇ ಬರೆಸಿದ ವೀರಶೈವ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿ
ಗ್ರಂಥದಲ್ಲಿ ರೇಣುಕ ಒಬ್ಬರೇ ಗುರುಗಳಾಗಿದ್ದರೆ. ಆದರೆ ಇನ್ನುಳಿದ ನಾಲ್ಕು ಚತುರಾಚಾರ್ಯರು ಯಾವಾಗ ಎಲ್ಲಿಂದ ಉದ್ಭವವಾದರು
ಎನ್ನುವುದು ತಿಳಿಯದು ನಿಮ್ಮ ಆಚರಣೆಗಳಿಗೂ ಲಿಂಗಾಯಿತರ ಆಚರಣೆಗಳಿಗೂ ಬಹಳಷ್ಟು ವ್ಯತ್ಯಾಸಗಳು ಇವೆ ಎಂದಿದ್ದಾರೆ.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಿ.ಟಿ.ನಂದೀಶ್ ಮಾತನಾಡಿ, ಪುರಾಣದ ಕಾಲ್ಪನಿಕ ಕಥೆಗಳನ್ನು
ಹೇಳುವ ಮೂಲಕ ಇಲ್ಲಿಯವರೆಗೂ ಜನರನ್ನು ವಂಚಿಸಿದ್ದು ಸಾಕು. ಜನ ನಿಮ್ಮನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಲಿಂಗಾಯಿತವೇ
ನಿಜವಾದ ಧರ್ಮ, ಬಸವಾದಿ ಶರಣರಿಂದ ಲಿಂಗಾಯಿತ ಧರ್ಮ ಸ್ಥಾಪಿತವಾಗಿದೆ. ಇದಕ್ಕೆ ಇಪ್ಪತ್ತೂರು ಸಾವಿರ ವಚನಗಳೇ ಸಾಕ್ಷಿ.
ಲಿಂಗಾಯಿತ ಧರ್ಮ ಸಮಾನತೆಯ ಹಾಗೂ ಕಾಯಕ ಮತ್ತು ದಾಸೋಹ ತತ್ವದ ಆಧಾರದ ಮೇಲೆ ಸ್ಥಾಪಿತವಾಗಿದೆ. ಇದನ್ನು
ಯಾರೂ ಅಲ್ಲಗಳೆಯಲಾಗದು ಇದಕ್ಕೆ ಸಾಕಷ್ಟು ಐತಿಹಾಸಿಕ ಪುರಾವೆಗಳು ಇವೆ. ನಿಮಗೆ ವೀರಶೈವವೇ ನಿಜವಾದ ಧರ್ಮ
ಎನಿಸಿದರೆ, ನಮ್ಮ ಅಭ್ಯಂತರವಿಲ್ಲ, ನಿಮ್ಮ ಆಚರಣೆಗಳನ್ನು ನೀವು ಆಚರಿಸಿಕೊಂಡು ಹೋಗಿ. ನಿಮ್ಮ ನಿಮ್ಮ ಧಾರ್ಮಿಕ
ನಂಬಿಕೆಗಳನ್ನು ಆಚರಿಸಲು ಸಂವಿಧಾನ ನಿಮಗೆ ಸ್ವಾತಂತ್ರ್ಯ. ನೀಡಿದೆ ಅದಕ್ಕೆ ನಾವು ಅಡ್ಡಿ ಪಡಿಸುವುದಿಲ್ಲ. ಆದರೆ ಲಿಂಗಾಯಿತ
ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದಲ್ಲಿ ಹಾಗೂ ವಚನಗಳನ್ನು ವಿರೂಪಗೊಳಿಸುವುದರಲ್ಲಿ ತಾವು ಅಸ್ತಕ್ಷೇಪ ಮಾಡದಿರಿ ಎಂದ
ಅವರು ಇದನ್ನು ಜಾ.ಲಿಂ.ಮ.ಸಭಾ ಚಿತ್ರದುರ್ಗ ಜಿಲ್ಲಾ ಘಟಕ ಖಂಡಿಸುತ್ತದೆ. ಆದುದರಿಂದ ಈ ಕೂಡಲೇ ಶ್ರೀಗಳು ಗೋರುಚರವರ
ಕ್ಷೇಮ ಕೋರಬೇಕು ಇಲ್ಲಿದಿದ್ದರೆ ಜಾ.ಲಿಂ.ಮ.ಸಭಾ ರಾಜ್ಯದಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳಾಗುವುದು ಎಂದು ಎಚ್ಚರಿಸಿದೆ.

ಗೋಷ್ಟಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶೀ ಧನಂಜಯ ಲಕ್ಷ್ಮೀಸಾಗರ ಉಪಾಧ್ಯಕ್ಷರಾದ ರಾಗಿ
ಶಿವಲಿಂಗಪ್ಪ, ಬಸವರಾಜಪ್ಪ ಕಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *