ಆಕಾಶ್ ಎಂಬ ವಿದ್ಯಾರ್ಥಿ ಹಾಸ್ಟೆಲ್‍ನಲ್ಲಿ ಆತ್ಯಹತ್ಯೆ: ABVPಯಿಂದ ಜಿಲ್ಲಾಡಳಿತಕ್ಕೆ ಮನವಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 19 ಆಕಾಶ್ ಎಂಬ ವಿದ್ಯಾರ್ಥಿ ಹಾಸ್ಟೆಲ್‍ನಲ್ಲಿ ಆತ್ಯಹತ್ಯೆಗೆ ಶರಣಾಗಿದ್ದಾರೆ ಇವರಿಗೆ ಕಾನೂನು ರೀತಿಯಲ್ಲಿ ಸೂಕ್ತ ತನಿಖೆ
ನಡೆಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳು, ಮನವಿ ಸಲ್ಲಿಸಲಾಯಿತು.

ಚಿತ್ರದುರ್ಗ ನಗರದ ಸರಸ್ಪತಿ ಕಾನೂನು ಕಾಲೇಜಿನಲ್ಲಿ ತೃತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದು, 20 ವರ್ಷದ ವಯಸ್ಸಿನ ಆಕಾಶ್
ಎಂಬ ವಿದ್ಯಾರ್ಥಿ ಮೂಲತಃ ರಾಯಚೂರಿನವರು ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ಇರುವ ಎಲ್.ಎಲ್.ಬಿ ಹಾಸ್ಟೆಲ್‍ನಲ್ಲಿ
ಸುಮಾರು 12 ಗಂಟೆಗೆ ಆತ್ಯಹತ್ಯೆ ಮಾಡಿಕೊಂಡಿರುತ್ತಾರೆ. ಇವರಿಗೆ ಕಾನೂನು ರೀತಿಯಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ
ಒದಗಿಸಿಕೊಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಭಾಗ ಸಹ ಸಂಚಾಲಕರು ಗೋಪಿ, ಪ್ರಾಂತ ಸೂಶಿಯಲ್ ಮೀಡಿಯಾ ಪ್ರಮುಖ್ ಆದರ್ಶ, ಜಿಲ್ಲಾ ಸಂಚಾಲಕ
ಕನಕರಾಜ್ ಕೋಡಿಹಳ್ಳಿ, ಜಿಲ್ಲಾ ಸಹ ಸಂಚಾಲಕ ತಿಪ್ಪೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಂಜಯ್, ಕಾರ್ಯಕರ್ತರು ಜೀವನ್,
ಲೋಕೇಶ್ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *