ಮಾ. 23 ರಂದು ಅಖಿಲ ಭಾರತ ಅಂಚೆ ನೌಕರರ ಸಂಘ, ಚಿತ್ರದುರ್ಗ ವಿಭಾಗದ 42 ನೇ ಜಂಟಿ ದೈವಾರ್ಷಿಕ ಸಮ್ಮೇಳನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 21 : ಅಖಿಲ ಭಾರತ ಅಂಚೆ ನೌಕರರ ಸಂಘಗಳು ಮೂರನೇ ವರ್ಗ, ನಾಲ್ಕನೇ ವರ್ಗ ಮತ್ತು ಗ್ರಾಮೀಣ ಅಂಚೆ ನೌಕರರು ಚಿತ್ರದುರ್ಗ ವಿಭಾಗದ 42 ನೇ ಜಂಟಿ ದೈವಾರ್ಷಿಕ ಸಮ್ಮೇಳನವೂ ಮಾ. 23ರ ಭಾನುವಾರ 10.30ಕ್ಕೆ ನಗರದ ಕೋಟೆ ಮುಂಭಾಗದ
ಮಹಾರಾಣಿ ಕಾಲೇಜಿನ ಶ್ರೀ ಗುರು ವಾಲ್ಮೀಕಿ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಅಂಚೆ ನೌಕರರ
ಸಂಘಗಳು ವಿಭಾಗೀಯ ಕಾರ್ಯದರ್ಶಿ ಆರ್.ಕರಿಸಿದ್ದಪ್ಪ ತಿಳಿಸಿದ್ದಾರೆ.

ಸಮ್ಮೇಳನವನ್ನು ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ಅಂಚೆ ನೌಕರರ ಸಂಘದ ಮೂರನೇ ವರ್ಗದ ಅಧ್ಯಕ್ಷರಾದ ಕಾಂ.ಕೆ. ಚಿದಾನಂದ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿತ್ರದುರ್ಗ
ವಿಭಾಗದ ಅಂಚೆ ಅಧೀಕ್ಷಕರಾದ ಕೆ. ಆರ್. ಉಷಾ, ಅಖಿಲ ಭಾರತ ಅಂಚೆ ನೌಕರರ ಸಂಘ, ಕರ್ನಾಟಕ ವಲಯದ ಅಧ್ಯಕ್ಷರಾದ ಕಾಂ. ಚಂದ್ರಸ್ವಾಮಿ, ರಾಷ್ಟ್ರೀಯ ಕಾರ್ಯಾಧ್ಯಕ್ಷರು, ಗ್ರೂಪ್.ಸಿ. ಮತ್ತು ವಲಯ ಕಾರ್ಯದರ್ಶಿಗಳಾದ ಕಾಂ, ಜಿ. ಜಾನಕಿರಾಮ್, ಕಾಂ. ಪಿ. ಮಲ್ಲಿಕಾರ್ಜುನ, ಸಹಕಾರ್ಯದರ್ಶಿ, ಪ್ರಾಂತೀಯ ಪ್ರತಿನಿಧಿ ಕಾಂ. ರಾಘವೇಂದ್ರ ಹವಳೇರ, ವಲಯ ಸಹಕಾರ್ಯದರ್ಶಿ ಕಾಂ.
ಕೆ.ಎಸ್. ರುದ್ರೇಶ್, ಕಾಂ. ಹೆಚ್.ವಿ.ರಾಜ್‍ಕುಮಾರ್‍ಚಿತ್ರದುರ್ಗ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಜಿ. ಬಸವರಾಜ್,
ಚಿತ್ರದುರ್ಗ ಉಪ ವಿಭಾಗದ ಸಹಾಯಕ ಅಂಚಿ ಅಧೀಕ್ಷಕರಾದ ಎನ್. ಅನಿಲ್ ಕುಮಾರ್, ಅಖಿಲ ಭಾರತ ಅಂಚೆ ನೌಕರರ ಸಂಘ,
ಮೂರನೇ ವರ್ಗದ ಮಾಜಿ ವಿಭಾಗೀಯ ಕಾರ್ಯದರ್ಶಿ ಹೆಚ್. ಚೌಡಪ್ಪ, ಟೆಲಿಕಾಂನ ನಿವೃತ್ತ ಅಕೌಂಟ್ಸ್ ಆಫೀಸರ್ ಕಾಂ. ಬಿ.
ತಿಮ್ಮಪ್ಪ ಅಖಿಲ ಭಾರತ ಅಂಚೆ ನೌಕರರ ಸಂಘ, ಮೂರನೇ ವರ್ಗದ ಮಾಜಿ ಗೌರವಾಧ್ಯಕ್ಷರಾದ ಕಾಂ, ಜಿ.ಟಿ. ಮಠಪತಿ
ವಿಭಾಗೀಯ ಮಾಜಿ ಕಾರ್ಯದರ್ಶಿ ಕಾಂ.ಕೆ. ರಂಗಸ್ವಾಮಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಈ ಸಮ್ಮೇಳನದಲ್ಲಿ ಬಡ್ತಿ ಹೊಂದಿದ, ನಿವೃತ್ತಿ ಹೊಂದಿದ ಅಂಚೆ ನೌಕರರನ್ನು ಹಾಗೂ ಸಂಘಕ್ಕೆ ಹೊಸದಾಗಿ ಸೇರ್ಪಡೆಯಾದ ಅಂಚೆ
ನೌಕರರನ್ನು ಸನ್ಮಾನಿಸಲಾಗುವುದು. ಹಾಗೂ ಈ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಅಂಚೆ ನೌಕರರಿಗೆ, ಅಂಚೆ ಅಧೀಕ್ಷಕರ
ಅನುಮತಿ ಪಡೆಯಲಾಗಿದೆ.ಸಂಘದ ಎಲ್ಲಾ ಅಂಚೆ ನೌಕರರು ಈ ಸಮ್ಮೇಳನದಲ್ಲಿ ತಪ್ಪದೇ ಭಾಗವಹಿಸಿ, ಸಮಾರಂಭವನ್ನು
ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

Leave a Reply

Your email address will not be published. Required fields are marked *