
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 25 : ಐತಿಹಾಸಿಕ ಚಿತ್ರದುರ್ಗದ ಮೇಲುದುರ್ಗದಲ್ಲಿರುವ ಶ್ರೀ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ಪ್ರತಿವರ್ಷದ ಮಾಮೂಲು ಪದ್ದತಿಯಂತೆ ಶ್ರೀ ವಿಶ್ವಾವಸುನಾಮ ಸಂವತ್ಸರದಲ್ಲಿ ಏ. 1 ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ.
ಏ,01ರಂದು ಮಂಗಳವಾರ ರಾತ್ರಿ 11-40ಕ್ಕೆ ಅಮ್ಮನವರ ಜಾತ್ರೆಯ ಸಾರು ಹಾಕುವ ಕಾರ್ಯಕ್ರಮ, ಏ.05 ರಂದು ಶನಿವಾರ ಕಂಕಣಧಾರಣೆ, ಅಮ್ಮನವರಿಗೆ ಭಂಡಾರ ಪೂಜೆ ಮತ್ತು ರುದ್ರಾಭಿಷೇಕ, ಏ.06ರಂದು ಭಾನುವಾರ ರಾತ್ರಿ 8-00 ಗಂಟೆಯಿಂದ ರಾಜಬೀದಿಗಳಲ್ಲಿ ಸಿಂಹವಾಹಿನಿ ಉತ್ಸವ, ಏ.07ರಂದು ಸೋಮ ವಾರ ರಾತ್ರಿ 8-00 ಗಂಟೆಯಿಂದ ರಾಜಬೀದಿಗಳಲ್ಲಿ ಸರ್ಪೋತ್ಸವದೊಂದಿಗೆ ಭಕ್ತರ ಮನೆಗಳಲ್ಲಿ ಪೂಜಾ ಕಾರ್ಯಕ್ರಮ ರಾತ್ರಿ 8-00 ಗಂಟೆಯಿಂದ ರಾಜಬೀದಿಗಳಲ್ಲಿ ಮಯುರೋತ್ಸವ(ನವಿಲು ಉತ್ಸವ) ಏ.08ರಂದು ಮಂಗಳವಾರ ರಾತ್ರಿ ಶ್ರೀ ಅಮ್ಮನವರಿಗೆ ಭಂಡಾರ ಪೂಜಾ ಕಾರ್ಯಕ್ರಮ ಏ.09ರಂದು ಬುಧವಾರ ಬೆಳಗ್ಗೆ ಭಂಡಾರದ ಪೂಜೆ 9-00 ಗಂಟೆಗೆ ಅಮ್ಮನವರು ಕೆಳಗೆ ಇಳಿಯುವ ಕಾರ್ಯಕ್ರಮ.

ಅರ್ಚಕರ ಮನೆಯಿಂದ ಮಕ್ಕಳಿಗೆ ಬೇವಿನ ಉಡಿಗೆ ಸೇವಾ ಅಶೋತ್ಸವದಲ್ಲಿ ಕಾಮನಬಾವಿ ಹೊಂಡದಲ್ಲಿ ಗಂಗಾಪೂಜೆಗೆ ಆಗಮಿಸಿ, ಇದೇ
ರಾತ್ರಿ 9-00 ಗಂಟೆಯಿಂದ ಶ್ರೀ ಅಮ್ಮನವರ ಉತ್ಸವ ಜಿಲ್ಲಾಧಿಕಾರಿಗಳವರ ಬಂಗಲೆಗೆ ಬಿಜಯುಂಗೈಯುವುದು. ಮಂಗಳಾರತಿ
ಕೆಳಗೋಟೆ ಭಕ್ತಾದಿಗಳಿಂದ. ಏ.10ರಂದು ಗುರುವಾರ ಸಾಯಂಕಾಲ 7-00 ಗಂಟೆಗೆ ಇದೇ ಕರುವಿನಕಟ್ಟೆ ಭಕ್ತಾಧಿಗಳಿಂದ ಸೇವೆ,
ರಾಜಬೀದಿಗಳಲ್ಲಿ ಉತ್ಸವ. ಏ.11ರಂದು ಶುಕ್ರವಾರ ಬೆಳಗ್ಗೆ 8-00 ಗಂಟೆಯಿಂದ ರಾಜ ಬೀದಿಗಳಲ್ಲಿ ಅಕ್ಟೋತ್ಸವ ಮತ್ತು ಹೂವಿನ
ಉತ್ಸವ ಮಹಾ ಮಂಗಳಾರತಿ. ಏ.12ರಂದು ಸಂಜೆ 5-30ಕ್ಕೆ ಜಾತ್ರಾ ಬಯಲಿನ ಪಾದಗಟ್ಟೆಯಲ್ಲಿ ‘ಸಿಡಿ ಉತ್ಸವ’ ಅಮ್ಮನವರಿಗೆ
ಮಹಾಮಂಗಳಾರತಿ ಕಾರ್ಯಕ್ರಮ ಏ.13ರಂದು ಭಾನುವಾರ ಸಾಯಂಕಾಲ 6-30ಕ್ಕೆ ಬೆಟ್ಟದ ಮೇಲೆ ಓಕಳಿ ಉತ್ಸವ ಜೋಗತಿ
ಮತ್ತು ಜೋಗಪ್ಪ ಇವರಿಂದ. ಏ.15ರಂದು ಬೆಳಗ್ಗೆ 10-30ಕ್ಕೆ ಕಂಕಣ ವಿಸರ್ಜನೆ ಮತ್ತು ಗಂಗಾಪೂಜೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.

ದಿನಾಂಕ: 11-04-2025ನೇ ಶುಕ್ರವಾರ ಬೆಳಗ್ಗೆ 09:30ಕ್ಕೆ ಶ್ರೀ ಏಕನಾಥೇಶ್ವರಿ ಅಮ್ಮನವರ ಪಾದಗುಡಿಯ ಜಾತ್ರೆ ಬಯಲಿನ
ದ್ವಾರಬಾಗಿಲಿನ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಮೇಲ್ಕಂಡ ಎಲ್ಲಾ ಸಕಲ ಕಾರ್ಯಕ್ರಮಗಳಿಗೂ ಭಕ್ತಾಧಿಗಳು
ಭಾಗವಹಿಸಿ, ತನು, ಮನ, ಧನಗಳಿಂದ ಸಹಕರಿಸಿ, ಶ್ರೀ ಏಕನಾಥೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ
ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ವಿನಂತಿಸಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0