ಎಟಿಎಂನಲ್ಲಿ ಕ್ಯಾಷ್ ವಿತ್​​ಡ್ರಾ ಶುಲ್ಕ ಹೆಚ್ಚಳ; ಎಸ್​ಬಿ ಅಕೌಂಟ್​​ನಲ್ಲಿ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ; ಏಪ್ರಿಲ್ 1ರಿಂದ ಬದಲಾವಣೆಗಳನ್ನು ಗಮನಿಸಿ

New banking rules from April: ಮುಂದಿನ ತಿಂಗಳಿಂದ ಕೆಲ ಬ್ಯಾಂಕಿಂಗ್ ನಿಯಮಗಳು ಬದಲಾವಣೆ ಆಗುತ್ತಿವೆ. ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳಿಗೆ ನಿಗದಿ ಮಾಡಿರುವ ಮಿತಿಗಿಂತ ಹೆಚ್ಚು ಟ್ರಾನ್ಸಾಕ್ಷನ್ ಮಾಡಿದರೆ ವಿಧಿಸಲಾಗುವ ಶುಲ್ಕದಲ್ಲಿ ಏರಿಕೆ ಆಗುತ್ತಿದೆ. ಎಸ್​​ಬಿ ಅಕೌಂಟ್್​ಗಳಲ್ಲಿ ನೀವು ಹೆಚ್ಚು ಹಣ ಇಟ್ಟರೆ ಹೆಚ್ಚು ಬಡ್ಡಿ ಸಿಗುವಂತೆ ನಿಯಮ ಮಾಡಲಾಗುತ್ತಿದೆ. ಕೆಲ ಬ್ಯಾಂಕುಗಳು ಮಿನಿಮಮ್ ಬ್ಯಾಲನ್ಸ್ ನಿಯಮವನ್ನು ಪರಿಷ್ಕರಿಸುತ್ತಿವೆ.

ಎಟಿಎಂನಲ್ಲಿ ಕ್ಯಾಷ್ ವಿತ್​​ಡ್ರಾ ಶುಲ್ಕ ಹೆಚ್ಚಳ; ಎಸ್​ಬಿ ಅಕೌಂಟ್​​ನಲ್ಲಿ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ; ಏಪ್ರಿಲ್ 1ರಿಂದ ಬದಲಾವಣೆಗಳನ್ನು ಗಮನಿಸಿ

2025ರ ಏಪ್ರಿಲ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿವೆ. ಎಟಿಎಂ ಹಣ ಹಿಂಪಡೆಯಲು ಹೆಚ್ಚುವರಿ ಶುಲ್ಕದಿಂದ (ATM transaction fee) ಹಿಡಿದು ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ನಿಯಮಗಳವರೆಗೆ ಬದಲಾವಣೆಗಳಾಗುತ್ತಿವೆ. ಇದರಲ್ಲಿ ಪ್ರಮುಖವಾಗಿ ಎರಡು ಅಂಶಗಳು ಗಮನಾರ್ಹ ಎನಿಸಿವೆ. ಮೊದಲನೆಯದು ಎಟಿಎಂಗಳಲ್ಲಿ ಕಾರ್ಡ್ ಬಳಸಿ ಹಣ ವಿತ್​​ಡ್ರಾ ಮಾಡಿದಾಗ ವಿಧಿಸಲಾಗುವ ಶುಲ್ಕದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಹಾಗೆಯೇ, ಕೆಲ ಬ್ಯಾಂಕುಗಳ ಅಕೌಂಟ್​​ಗಳಲ್ಲಿ ಕನಿಷ್ಠ ಹಣ ಎಷ್ಟು ಹೊಂದಿರಬೇಕು ಎನ್ನುವ ನಿಯಮವನ್ನು ಪರಿಷ್ಕರಿಸುತ್ತಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ…

ಎಟಿಎಂ ಕ್ಯಾಷ್ ವಿತ್​​ಡ್ರಾ ಮಾಡಲು ಶುಲ್ಕ

ಬಹುತೇಕ ಎಲ್ಲಾ ಬ್ಯಾಂಕುಗಳು ಇಂಟರ್​​ಚೇಂಜ್ ಶುಲ್ಕಗಳನ್ನು ಹೆಚ್ಚಿಸಿವೆ. ಎಟಿಎಂಗಳಲ್ಲಿ ಅನುಮತಿಸಿದ ಮಿತಿಗಿಂತ ಹೆಚ್ಚು ಬಾರಿ ಹಣ ವಿತ್​​ಡ್ರಾ ಮಾಡಿದರೆ ಶುಲ್ಕ ಕಟ್ಟಬೇಕಾಗುತ್ತದೆ. ಈ ಶುಲ್ಕದ ದರವನ್ನು ಹೆಚ್ಚಿಸಲಾಗಿದೆ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ನಿಮ್ಮ ಬ್ಯಾಂಕ್​ನದ್ದಲ್ಲದ ಎಟಿಎಂಗಳಲ್ಲಿ ನೀವು ತಿಂಗಳಿಗೆ 3ರಿಂದ 5 ವಹಿವಾಟುಗಳನ್ನು ಮಾಡಬಹುದು. ಹಣ ವಿತ್​​ಡ್ರಾ ಆಗಬಹುದು ಅಥವಾ ಬೇರೆ ಟ್ರಾನ್ಸಾಕ್ಷನ್ ಕೂಡ ಆಗಿರಬಹುದು. ಈ ನಿಗದಿತ ಮಿತಿಯನ್ನು ಮೀರಿದರೆ ಆಗ ಪ್ರತೀ ಹೆಚ್ಚುವರಿ ಟ್ರಾನ್ಸಾಕ್ಷನ್​ಗೂ ನಿರ್ದಿಷ್ಟ ಶುಲ್ಕ ಇರುತ್ತದೆ. ಮೇ 1ರಿಂದ ಈ ಶುಲ್ಕದಲ್ಲಿ 1-2 ರೂ ಹೆಚ್ಚಳ ಮಾಡಲಾಗುತ್ತಿದೆ.

ಕ್ಯಾಷ್ ವಿತ್​ಡ್ರಾ ಮಾಡಿದರೆ ವಿಧಿಸುವ ಶುಲ್ಕವನ್ನು 17 ರೂನಿಂದ 19 ರೂಗೆ ಹೆಚ್ಚಿಸಲಾಗುತ್ತಿದೆ. ಅಕೌಂಟ್ ಬ್ಯಾಲನ್ಸ್ ಪರಿಶೀಲನೆ ಸೇರಿದಂತೆ ನಾನ್-ಟ್ರಾನ್ಸಾಕ್ಷನ್ ಶುಲ್ಕ 6 ರೂ ಇದ್ದದ್ದು 7 ರೂ ಆಗುತ್ತದೆ.

ಮಿನಿಮಮ್ ಬ್ಯಾಲನ್ಸ್ ಶುಲ್ಕ

ಎಸ್​​ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮೊದಲಾದ ಪ್ರಮುಖ ಬ್ಯಾಂಕುಗಳು ತಮ್ಮ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಪರಿಷ್ಕರಿಸುತ್ತಿವೆ. ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಅಳವಡಿಸಲಾಗುತ್ತಿದೆ.

ಸೇವಿಂಗ್ಸ್ ಅಕೌಂಟ್​ಗಳಿಗೆ ಬಡ್ಡಿ

ಸೇವಿಂಗ್ಸ್ ಬ್ಯಾಂಕ್ ಅಕೌಂಟ್​​​ಗಳಲ್ಲಿ ನೀವೆಷ್ಟೇ ಹಣ ಬ್ಯಾಲನ್ಸ್ ಇಟ್ಟಿದ್ದರೂ ಬಡ್ಡಿದರ ಫ್ಲ್ಯಾಟ್ ಇರುತ್ತದೆ. 1,000 ರೂ ಇದ್ದವರಿಗೂ ಶೇ. 4, ಒಂದು ಲಕ್ಷ ಹಣ ಇಟ್ಟವರಿಗೂ ಶೇ. 4 ಬಡ್ಡಿ ಮಾತ್ರವೇ ಸಿಗುತ್ತದೆ. ಆದರೆ, ಈಗ ಬ್ಯಾಂಕುಗಳು ಈ ನಿಯಮ ಬದಲಾವಣೆ ಮಾಡುತ್ತಿವೆ. ಅಕೌಂಟ್​​​ಗಳಲ್ಲಿ ಹೆಚ್ಚು ಹಣ ಇದ್ದರೆ ಹೆಚ್ಚು ಬಡ್ಡಿದರ, ಕಡಿಮೆ ಹಣ ಇದ್ದರೆ ಕಡಿಮೆ ಬಡ್ಡಿದರ ನಿಗದಿ ಮಾಡಲಾಗುತ್ತಿದೆ.

ಕ್ರೆಡಿಟ್ ಕಾರ್ಡ್ ಲಾಭಗಳು

ಎಸ್​​ಬಿಐ, ಐಡಿಎಫ್​​ಸಿ ಫಸ್ಟ್ ಬ್ಯಾಂಕ್ ಇತ್ಯಾದಿ ಪ್ರಮುಖ ಬ್ಯಾಂಕುಗಳು ತಮ್ಮ ವಿಸ್ತಾರ ಕ್ರೆಡಿಟ್ ಕಾರ್ಡ್​​ಗಳ ನಿಯಮದಲ್ಲಿ ಬದಲಾವಣೆ ಮಾಡುತ್ತಿವೆ. ಟಿಕೆಟ್ ವೋಚರ್, ರಿನಿವಲ್ ಲಾಭ, ಮೈಲ್​​ಸ್ಟೋನ್ ರಿವಾರ್ಡ್ ಇತ್ಯಾದಿ ಉತ್ತೇಜಕ ಪ್ಲಾನ್​​ಗಳನ್ನು ಕೈಬಿಡಲಾಗುತ್ತಿದೆ.

Source : TV 9 Kannada

Leave a Reply

Your email address will not be published. Required fields are marked *