Celebrity women’s kabaddi league : ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಇವೆಂಟ್ಗಳನ್ನು ಆಯೋಜಿಸುವ ಮೂಲಕ ಜನಪ್ರಿಯರಾಗಿರುವ ನವರಸನ್ ಅವರು ʼಸೆಲೆಬ್ರಿಟಿ ವುಮೆನ್ಸ್ ಕಬಡ್ಡಿ ಲೀಗ್ʼ (Celebrity Womens Kabbadi League) ಆಯೋಜಿಸಿದ್ದಾರೆ.

ಬೆಂಗಳೂರು: ಏಪ್ರಿಲ್ನಲ್ಲಿ ನಡೆಯಲಿರುವ ಸೆಲೆಬ್ರಿಟಿ ಮಹಿಳಾ ಕಬಡ್ಡಿ ಲೀಗ್ನ (ಸಿಡಬ್ಲ್ಯುಕೆಎಲ್) ಪವರ್ ಪ್ಯಾಕ್ಡ್ ಗೀತೆ ರಿಲೀಸ್ ಆಗಿದೆ. ಸೆಲೆಬ್ರಿಟಿ ಮಹಿಳಾ ಕಬಡ್ಡಿ ಲೀಗ್ಗೆ (Celebrity women’s kabaddi league) ʼಉತ್ಸವ್ ಕೆಫೆʼ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿದ್ದು, ಖ್ಯಾತ ಚಂದನ್ ಶೆಟ್ಟಿ ಅವರ ಆಕರ್ಷಕ ಧ್ವನಿಯೊಂದಿಗೆ ಸಿಡಬ್ಲ್ಯುಕೆಎಲ್ ಗೀತೆ ಮೂಡಿಬಂದಿದೆ. ಈ ಹಾಡು ಕಬಡ್ಡಿಯ ಉತ್ಸಾಹ ಹಾಗೂ ಕ್ರೀಡೆಯಲ್ಲಿ ಮಹಿಳೆಯರ ಶಕ್ತಿಯನ್ನು ಪ್ರತಿನಿಧಿಸುವಂತಿದೆ.

ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಇವೆಂಟ್ಗಳನ್ನು ಆಯೋಜಿಸುವ ಮೂಲಕ ಜನಪ್ರಿಯರಾಗಿರುವ ನವರಸನ್ ಅವರು ʼಸೆಲೆಬ್ರಿಟಿ ವುಮೆನ್ಸ್ ಕಬಡ್ಡಿ ಲೀಗ್ʼ (Celebrity Womens Kabbadi League) ಆಯೋಜಿಸಿದ್ದಾರೆ. ʼCWKLʼ ಎಂಬ ಹೆಸರಿನ ಈ ಕಬಡ್ಡಿ ಟೂರ್ನಿಯ ಲೋಗೊವನ್ನು ಇತ್ತೀಚಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅನಾವರಣ ಮಾಡಿ ಟೂರ್ನಿ ಯಶಸ್ವಿಯಾಗಲೆಂದು ಹಾರೈಸಿದ್ದರು.

ಕಬಡ್ಡಿ ನಮ್ಮ ದೇಸಿ ಕ್ರೀಡೆ. ಈ ಕ್ರೀಡೆಯನ್ನು ಮಹಿಳೆಯರು ಆಡುವುದು ಕಡಿಮೆ. ಆ ನಿಟ್ಟಿನಲ್ಲೇ ಈ ʼಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್ʼ (ಸಿಡಬ್ಲ್ಯುಕೆಎಲ್) ಆಯೋಜಿಸಿದ್ದೇನೆ. ಲೋಗೊವನ್ನು ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಈ ಟೂರ್ನಿಯಲ್ಲಿ 10 ತಂಡಗಳಿರುತ್ತದೆ. ಸುಮಾರು 120 ಕ್ಕೂ ಅಧಿಕ ನಟಿಯರು ಪಾಲ್ಗೊಳಲಿದ್ದಾರೆ. ಹತ್ತು ತಂಡಗಳಲ್ಲಿ ಈಗಾಗಲೇ ಎಂಟು ತಂಡಗಳಿಗೆ ಮಾಲೀಕರು ದೊರಕಿದ್ದಾರೆ. ಏಪ್ರಿಲ್ನಲ್ಲಿ ಟೂರ್ನಿ ನಡೆಯಲಿದೆ. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ನಿರ್ಮಾಪಕರು ಈ ಟೂರ್ನಿಗೆ ಆಗಮಿಸಿ ಸ್ಪರ್ಧಿಗಳಿಗೆ ಉತ್ತೇಜನ ನೀಡಲಿದ್ದಾರೆ. ಸಾಯಿ ಗೋಲ್ಡ್ ಪ್ಯಾಲೇಸ್ನ ಶರವಣ, ನಿರ್ಮಾಪಕರಾದ ಚೇತನ್ ಗೌಡ, ಸುರೇಶ್ ಗೌಡ ಹಾಗೂ ರಮೇಶ್ ರೆಡ್ಡಿ ಮುಂತಾದವರು ನಮ್ಮ ಜತೆಗಿರುವುದು ತುಂಬಾ ಸಂತೋಷವಾಗಿದೆ ಎಂದು ನವರಸನ್ ತಿಳಿಸಿದ್ದರು.
Source : Vishwavani
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1