ಇಂದಿನ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಸಾಧನೆಯತ್ತ ದಾಪುಗಾಲಿಡುತ್ತಿದ್ದರೂ ಅವಳ ಮೇಲಿನ ದೌರ್ಜನ್ಯವನ್ನು ತೊಡೆದು ಹಾಕಲಾಗಿಲ್ಲ: ಶ್ರೀಮತಿ ಶಶಿಕಲಾ ರವಿಶಂಕರ್

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 26 : ಇತಿಹಾಸದ ಶೋಷಿತ ರಕ್ತಸಿಕ್ತ ಹೆಜ್ಜೆಗುರುತುಗಳನ್ನು ಅಳಿಸಿ ಹಾಕಿ ಇಂದಿನ ಮಹಿಳೆ ಲಿಂಗ ಸಮಾನತೆ ರಾಷ್ಟ್ರದ ಸಧೃಢತೆಗೆ ಭದ್ರ ಬುನಾದಿ ಎನ್ನುವುದನ್ನು ನಿರೂಪಿತಗೊಳಿಸಬೇಕಿದೆ.ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಮಹಿಳೆಯರು
ಸಾಧನೆಯತ್ತ ದಾಪುಗಾಲಿಡುತ್ತಿದ್ದರೂ ಅವರ ಮೇಲಿನ ಶೋಷಣೆ.. ದೌರ್ಜನ್ಯ..ಸಂಪೂರ್ಣವಾಗಿ ತೊಡೆದು ಹಾಕಲಾಗಿಲ್ಲ ಎಂದು
ಸತ್ವ ಮಹಿಳಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರವಿಶಂಕರ್ ತಿಳಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ವಾಣಿ ಸಕ್ಕರೆ ಕಾಲೇಜು ಹಾಗೂ ಸತ್ವ ಮಹಿಳಾ ಸಂಸ್ಥೆಯ
ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷದ ಧ್ಯೇಯ ಅವಳ ಅಭಿವೃದ್ಧಿ
ಪ್ರಕ್ರಿಯೆಯ ವೇಗೋತ್ಕರ್ಷವಾಗಿದೆ. ಅವಳ ಸಾಧನೆಯ ದಾರಿಯ ತೊಡರುಗಳನ್ನು ನಿವಾರಿಸುವುದು ಪ್ರತಿಯೊಬ್ಬರ
ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳು ತಮ್ಮ ಸರ್ವತೋಮುಖ ಅಭಿವೃದ್ಧಿಗೆ ಪರಿಶ್ರಮಿಸಬೇಕು.. ಮೊದಲು ಶೈಕ್ಷಣಿಕ..
ಆರ್ಥಿಕ.. ಸಾಮಾಜಿಕವಾಗಿ ಸಧೃಢಳಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾಕ್ಟರ್.ಆರ್.ಮಹೇಶ್ ರವರು ಮಹಿಳೆಯರು
ಅವಕಾಶವಂಚಿತರಾಗದೆ ಪ್ರಗತಿ ಸಾಧಿಸಿ ಸಮಾಜದ ಉನ್ನತಿಗೆ ಶ್ರೇಷ್ಠ ಕೊಡುಗೆ ಮಹಿಳೆಯರು ಎಂದು ಅಭಿಪ್ರಾಯಪಟ್ಟರು

ಮಹಿಳಾ ಕುಂದುಕೊರತೆಗಳ ಸೆಲ್‍ನ ಸಂಯೋಜಕರಾದ ಪ್ರೊಫೆಸರ್ ಹೇಮಲತಾ ಪ್ರಾಸ್ಥಾವಿಕ ಮಾತನಾಡಿ ಲಿಂಗ ಸಾಮರಸ್ಯದ
ಮಹತ್ವದ ಬಗ್ಗೆ ಮಾತನಾಡಿ ನಿಜ ಔಚಿತ್ಯವನ್ನು ಮನದಟ್ಟು ಮಾಡಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಸತ್ವದ ಪ್ರಧಾನ ಕಾರ್ಯದರ್ಶಿ ಸರ್ವಮಂಗಳಾ, ಪ್ರೊಫೆಸರ್ ವಲಿ,ಶ್ರೀಕರ ರವರು ಭಾಷಣ ಸ್ಪರ್ಧೆಯ
ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿ ಸಭೆ ಕುರಿತು ಮಾತನಾಡಿದರು.

“ಲಿಂಗ ಸಮಾನತೆ ರಾಷ್ಟ್ರದ ಸದೃಢತೆಗೆ ಭದ್ರ ಬುನಾದಿ “ಎನ್ನುವ ವಿಷಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ನಡೆದು
ಮೌಲ್ಯಯುತ ಪುಸ್ತಕಗಳ ಬಹುಮಾನ ವಿತರಣೆ ನಡೆದ ವಿಶೇಷ ಸುಂದರ ಮೌಲ್ಯಯುತ ಸಮಾರಂಭ ಇದಾಗಿತ್ತು.

ಸಭೆಯಲ್ಲಿ ಪ್ರೊಫೆಸರ್.ಧರಣೇಂದ್ರಯ್ಯು,ಮೂರ್ತಿ, ಉಪನ್ಯಾಸಕರಾದ ರಾಧಿಕಾ,ಗೌರಿ ಕಿಮತ್ಕರ್, ರಾಜೇಶ್ವರಿ,ಸತ್ವ ಮಹಿಳಾ
ಸಂಸ್ಥೆಯ ಉಪಾಧ್ಯಕ್ಷೆ ಯಮುನಾ ಉಮಾಕಾಂತ.ಖಜಾಂಜಿ ತ್ರಿವೇಣಿ ಸತೀಶ್, ನಿರ್ದೇಶಕರಾದ ಲತಾ ಶಿವಪ್ರಸಾದ್, ಅರುಣಾವೀರೇಶ್, ಸವಿತಾಮಹೇಶ್, ರಾಜೇಶ್ವರಿಸಂಜಯ್, ನಿರ್ಮಲಾಮಹಂತೇಶ್ ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 1

Leave a Reply

Your email address will not be published. Required fields are marked *