SOLAR ECLIPSE 2025:2025ರ ಮೊದಲ ಸೂರ್ಯಗ್ರಹಣವು ಯಾವ ಪ್ರದೇಶಗಳಲ್ಲಿ ಗೋಚರಿಸುತ್ತದೆ? ಗ್ರಹಣದ ಶುಭ ಮತ್ತು ಅಶುಭ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.

ಹೈದರಾಬಾದ್: ಖಗೋಳದಲ್ಲಿ ಈ ವರ್ಷದ ಮೊದಲ ಸೂರ್ಯಗ್ರಹಣ ಮಾರ್ಚ್ 29 ರಂದು ಸಂಭವಿಸಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2:20 ಕ್ಕೆ ಪ್ರಾರಂಭವಾಗಿ ಸಂಜೆ 6:16 ಕ್ಕೆ ಕೊನೆಗೊಳ್ಳಲಿದೆ. ಇದು ಪಾಲ್ಗುಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಂಭವಿಸುವ ಭಾಗಶಃ ಸೂರ್ಯಗ್ರಹಣವಾಗಿದೆ.
ಭಾರತದಲ್ಲಿ ಗೋಚರಿಸುತ್ತದೆಯೇ? ಈ ಭಾಗಶಃ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಈಶಾನ್ಯ ಅಮೆರಿಕ ಮತ್ತು ಕೆನಡಾದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಈ ವಿದ್ಯಮಾನವು ಚಂದ್ರನು ಸೂರ್ಯನನ್ನು ಕಚ್ಚುತ್ತಿರುವ ಮಾದರಿ ಕಂಡುಬರಲಿದೆ. ಉದಯದ ವೇಳೆ ಸೂರ್ಯ ಅರ್ಧಚಂದ್ರಾಕೃತಿಯಲ್ಲಿ ಕಂಡುಬರಲಿದ್ದಾನೆ.
ಗ್ರಹಣದಿಂದ ಆಗುವ ಶುಭ, ಅಶುಭಗಳೇನು ಎಂಬ ಬಗ್ಗೆ ಶಾಸ್ತ್ರಜ್ಞರು ಇಲ್ಲಿ ವಿವರಿಸಿದ್ದಾರೆ. ಗ್ರಹಣವು ದೇಶದಲ್ಲಿ ಸಂಭವಿಸದ ಕಾರಣ, ಯಾವುದೇ ಮುನ್ನೆಚ್ಚರಿಕೆಗಳು ಅಥವಾ ಪರಿಹಾರಗಳನ್ನು ಮಾಡುವ ಅಗತ್ಯವಿಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅನಗತ್ಯ ಭೀತಿ ಮತ್ತು ವದಂತಿಗಳನ್ನು ನಂಬದಂತೆ ಸಲಹೆ ನೀಡಿದ್ದಾರೆ.

ಅಮಾವಾಸ್ಯೆಯ ದಿನದಂದು ಗ್ರಹಣ ಇರುವುದರಿಂದ ಆ ದಿನ ಶಿವನನ್ನು ಪೂಜಿಸುವುದು, ಶನಿಗೆ ಎಣ್ಣೆ ಅಭಿಷೇಕ ಮಾಡುವುದು ಮತ್ತು ಬ್ರಾಹ್ಮಣರಿಗೆ ಎಳ್ಳು ದಾನ ಮಾಡುವುದರಿಂದ ಗ್ರಹ ದೋಷಗಳು ದೂರವಾಗುತ್ತವೆ ಎಂದು ವಿದ್ವಾಂಸರು ಹೇಳಿದ್ದಾರೆ.
ಪಿತೃದೇವತೆಗಳಿಗೆ ತರ್ಪಣ ನೀಡಲು ಸಕಾಲ: ನಮ್ಮ ಪೂರ್ವಜರನ್ನು ಸಂತುಷ್ಟಗೊಳಿಸಲು ಇದು ಸಕಾಲವಾಗಿದೆ. ಅಮಾವಾಸ್ಯೆಯಂದು ಆಹಾರ ನೈವೇದ್ಯಗಳನ್ನು ಪೂರ್ವಜರಿಗೆ ಅರ್ಪಿಸಬೇಕು. ಇದರಿಂದ ಅವರು ಸಂತುಷ್ಟರಾಗುತ್ತಾರೆ. ಪಿತೃದೇವತೆಗಳಿಗೆ ತರ್ಪಣಗಳನ್ನು ಅರ್ಪಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ ಉಂಟಾಗುತ್ತದೆ ಎಂಬುದು ಜ್ಯೋತಿಷಿಗಳ ಅಭಿಪ್ರಾಯ.

ಆ ದಿನ ಕಾಗೆಗಳಿಗೆ ಆಹಾರ, ಕಪ್ಪು ಇರುವೆಗಳಿಗೆ ಸಕ್ಕರೆ ಅರ್ಪಿಸುವುದು, ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪ ಹಚ್ಚುವುದರಿಂದ ಆರ್ಥಿಕ ಸಮಸ್ಯೆಗಳು, ಸಾಲಗಳು ಮತ್ತು ದುಃಖಗಳು ನಿವಾರಣೆಯಾಗಿ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ವಿದ್ವಾಂಸರು ಹೇಳುತ್ತಾರೆ.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ ಅದನ್ನು ‘ಸಂಪೂರ್ಣ ಸೂರ್ಯಗ್ರಹಣ’ ಎನ್ನಲಾಗುತ್ತೆ. ಆದರೆ ಅದು ಸಂಪೂರ್ಣವಾಗಿ ಆವರಿಸಲು ಸಾಧ್ಯವಾಗದಿದ್ದಾಗ ‘ಭಾಗಶಃ ಸೂರ್ಯಗ್ರಹಣ’ ಎಂದು ಕರೆಯಲಾಗುತ್ತದೆ.

ಬರಿಗಣ್ಣಿಂದ ನೋಡುವ ಸಾಹಸ ಬೇಡ: ಸೂರ್ಯಗ್ರಹಣವನ್ನು ಎಂದಿಗೂ ಬರಿಗಣ್ಣಿನಿಂದ ನೋಡಬಾರದು. ಗ್ರಹಣ ವೀಕ್ಷಿಸಲು ಹಲವು ವಿಶೇಷ ರೀತಿಯ ಕನ್ನಡಕಗಳು ಲಭ್ಯವಿದೆ. ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿದಾಗ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವ ಕೆಲವು ನಿಮಿಷಗಳ ಅವಧಿ ಇರುತ್ತದೆ. ಈ ಸಮಯದಲ್ಲಿ, ಅದು ಕತ್ತಲೆಯಾಗುತ್ತದೆ ಮತ್ತು ತಾಪಮಾನದಲ್ಲಿ ಕುಸಿತ ಕಂಡುಬರುತ್ತದೆ.
Source : ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1