
ಐಪಿಎಲ್ 2025ರ 11ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್ಗಳಿಂದ ಗೆದ್ದು, ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು.

ಐಪಿಎಲ್ 2025ರ 11ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Rajasthan Royals vs Chennai Super Kings) ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ತಂಡ ಕೊನೆಯ ಓವರ್ನಲ್ಲಿ ರೋಚಕವಾಗಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ಗೆ ಸೋಲಿನ ಶಾಕ್ ನೀಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ನಿಗದಿತ 20 ಓವರ್ಗಳಲ್ಲಿ 182 ರನ್ ಗಳಿಸಿದರು. 183 ರನ್ ಟಾರ್ಗೆಟ್ ಬೆನ್ನಟ್ಟಿದ ಸಿಎಸ್ಕೆ 6 ರನ್ಗಳ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿತು. ಹಾಗೂ ರಾಜಸ್ಥಾನ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಪರವಾಗಿ, ನಿತೀಶ್ ರಾಣಾ ಕೇವಲ 36 ಎಸೆತಗಳಲ್ಲಿ 10 ಬೌಂಡರಿ 5 ಸಿಕ್ಸರ್ಗಳ ಸಹಿತ 81 ರನ್ಗಳಿಸಿ ಬೃಹತ್ ಗುರಿ ನೀಡಲು ನೆರವಾದರು. ನಾಯಕ ರಿಯಾನ್ ಪರಾಗ್ 29 ಎಸೆತಗಳಲ್ಲಿ 37 ರನ್ಗಳಿಸುವ ಮೂಲಕ ರಾಣಾಗೆ ಸಾಥ್ ನೀಡಿದರು.

ರಾಯಲ್ಸ್ಗೆ ರಾಣಾ ಆಸರೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ್ ರಾಯಲ್ಸ್ ಮೊದಲ ಓವರ್ನ 2ನೇ ಎರಡನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ (4) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್ಗೆ ಸಂಜು ಸ್ಯಾಮ್ಸನ್ ಹಾಗೂ ನಿತೀಶ್ ರಾಣಾ ಕೇವಲ 42 ಎಸೆತಗಳಲ್ಲಿ 82 ರನ್ಗಳ ಜೊತೆಯಾಟ ನೀಡಿದರು. ಪವರ್ ಪ್ಲೇನಲ್ಲಿ ನಿತೀಶ್ ರಾಣಾ ಅಬ್ಬರಿಸಿದರು ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆದರೆ ಪವರ್ ಪ್ಲೇ ನಂತರ ಅದೇ ಆ ವೇಗವನ್ನ ಮುಂದುವರಿಸಲು ವಿಫಲರಾದರು. ಇನ್ನು ಸಂಜು ಸ್ಯಾಮ್ಸನ್ ಇಂದೂ ಕೂಡ ರನ್ಗಳಿಸಲು ವಿಫಲರಾದರು. 16 ಎಸೆತಗಳಲ್ಲಿ ಕೇವಲ 20 ರನ್ಗಳಿಸಿ ಔಟ್ ಆದರು. ಅಂತಿಮವಾಗಿ ರಾಜಸ್ಥಾನ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು.
ನೂರ್ ಅಹ್ಮದ್ ಕಮಾಲ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸತತ 3ನೇ ಪಂದ್ಯದಲ್ಲೂ ಮಿಂಚಿದ ನೂರ್ ಅಹ್ಮದ್ 28ಕ್ಕೆ2 ಪಡೆದರೆ, ಇವರಿಗೆ ಸಾಥ್ ನೀಡಿದ ಖಲೀಲ್ ಅಹ್ಮದ್ 38ಕ್ಕೆ2, ಪತೀರಣ 28ಕ್ಕೆ2 ವಿಕೆಟ್ ಪಡೆದು ಮಿಂಚಿದರು. ರವೀಂದ್ರ ಜಡೇಜಾ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಒಂದು ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ 200ರ ಗಡಿ ದಾಟಬಹುದು ಎನ್ನಲಾಗಿತ್ತು. ಆದರೆ ಕೊನೆಯ 6 ಓವರ್ಗಳಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದ ಸಿಎಸ್ಕೆ 182ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಚೆನ್ನೈಗೆ ಗಾಯಕ್ವಾಡ್ ಆಸರೆ
ಬೃಹತ್ ಮೊತ್ತದ ಚೇಸ್ ಆರಂಭಿಸಿದ ಚೆನ್ನೈಗೆ ಇನ್ಫಾಮ್ ರಚಿನ್ ರವೀಂದ್ರ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಚೆನ್ನೈ ಬ್ಯಾಟರ್ಗಳು ಸೋಲಿಗೆ ಮುನ್ನುಡಿ ಬರೆದರು. ಒಂದೆಡೆ ವಿಕೆಟ್ ಬೀಳ್ತಾ ಇದ್ರು ಇನ್ನೊಂದೆಡೆ ಏಕಾಂಗಿಯಾಗಿ ಇನ್ನಿಂಗ್ಸ್ ಕಟ್ಟಿದ ನಾಯಕ ಋತುರಾಜ್ ಗಾಯಕ್ವಾಡ್ ಚೆನ್ನೈ ಪರ ಅಬ್ಬರಿಸಿದರು. ನಂತರ ಅವರು 44 ಎಸೆತಗಳಲ್ಲಿ 63 ರನ್ ಸಿಡಿಸಿದರು. ಆದರೆ ಉಳಿದ ಯಾವುದೇ ಆಟಗಾರ ಗಾಯಕ್ವಾಡ್ ಅವರಿಗೆ ಸಾಥ್ ನೀಡಲಿಲ್ಲ.
ಹಸರಂಗ ಕಮಾಲ್.
ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಧೋನಿ ಹೋರಾಡಿದರೂ ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ರಾಜಸ್ಥಾನ ರಾಯಲ್ಸ್ ಪರ ವನಿಂದು ಹಸರಂಗ 4 ವಿಕೆಟ್ ಪಡೆದು ಮಿಂಚಿದರು.
Source:News18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1