
ಮುಸ್ಲಿಮರಿಗೆ ಪವಿತ್ರ ಹಬ್ಬ ರಂಜಾನ್. ಒಂದು ತಿಂಗಳ ಕಟ್ಟುನಿಟ್ಟಾದ ಉಪವಾಸದ ಬಳಿಕ ಚಂದ್ರನನ್ನು ನೋಡುವುದರೊಂದಿಗೆ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿದಿನ ಉಪವಾಸ ಮಾಡುವ ಮುಸ್ಲಿಮರು ಈಗ ರಂಜಾನ್ ಯಾವಾಗ ಎಂದು ತಿಳಿಯಲು ಕಾತುರದಿಂದ ಕಾಯುತ್ತಿದ್ದಾರೆ.

ಚಂದ್ರನು ಕಾಣಿಸಿಕೊಂಡ ನಂತರ ಈ ಸಮಯವನ್ನು ನಿರ್ಧರಿಸಲಾಗುತ್ತದೆ. ಹಾಗಾದರೆ ರಂಜಾನ್ ಯಾವ ದಿನಾಂಕದಂದು ಆಚರಿಸಲಾಗುತ್ತದೆ ಎಲ್ಲವನ್ನೂ ಈಗ ತಿಳಿಯೋಣ.

ಈ ವರ್ಷ ಭಾರತದಲ್ಲಿ ರಂಜಾನ್ ಹಬ್ಬದ ಉಪವಾಸ ಮಾರ್ಚ್ 1ರ ಶನಿವಾರದಂದು ಪ್ರಾರಂಭವಾಯಿತು. ಶುಕ್ರವಾರ ಅಂದರೆ ಫೆಬ್ರವರಿ 28ರಂದು ಅಮಾವಾಸ್ಯೆ ಇತ್ತು. ಆದರೆ ಭಾರತದ ಹಲವೆಡೆ ಫೆಬ್ರವರಿ 28ರಿಂದಲೇ ಉಪವಾಸ ಆರಂಭವಾಗಿದೆ. ಹೀಗಾಗಿ ಭಾರತದಲ್ಲಿ ರಂಜಾನ್ ಅನ್ನು ಮಾರ್ಚ್ 31 ಅಥವಾ ಏಪ್ರಿಲ್ 1ರಂದು ಆಚರಿಸಬಹುದು. ಚಂದ್ರನ ದರ್ಶನವನ್ನು ಅವಲಂಬಿಸಿ ಈ ಎರಡು ದಿನಗಳಲ್ಲಿ ಒಂದು ದಿನ ರಂಜಾನ್ ಆಚರಿಸಲಾಗುತ್ತದೆ.

ರಂಜಾನ್ ದಿನಾಂಕವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಈದ್ ಉಲ್ ಫಿತರ್ ನ ನಿಖರವಾದ ದಿನಾಂಕವನ್ನು ಚಂದ್ರನನ್ನು ನೋಡಿದ ನಂತರವೇ ನಿರ್ಧರಿಸಲಾಗುತ್ತದೆ. ಮಾರ್ಚ್ 30ರ ಸಂಜೆ ಚಂದ್ರ ಗೋಚರಿಸಿದರೆ, ರಂಜಾನ್ ಮಾರ್ಚ್ 31ರಂದು ಇರುತ್ತದೆ. ಚಂದ್ರ ಕಾಣಿಸದಿದ್ದರೆ, ಏಪ್ರಿಲ್ 1 ರಂದು ರಂಜಾನ್ ಆಚರಿಸಲಾಗುತ್ತದೆ.

ಸೌದಿ ಅರೇಬಿಯಾದಲ್ಲೂ ಇದೇ ನಿಯಮ ಅನ್ವಯ
ಸೌದಿ ಅರೇಬಿಯಾದಲ್ಲೂ ಇದೇ ನಿಯಮ ಅನ್ವಯವಾಗಲಿದೆ. ಮಾರ್ಚ್ 29ರ ಸಂಜೆ ಚಂದ್ರ ಗೋಚರಿಸಿದರೆ, ಈದ್ ಮಾರ್ಚ್ 30ರಂದು ಬರಬಹುದು. ಚಂದ್ರ ಕಾಣಿಸದಿದ್ದರೆ, ಈದ್ ಮಾರ್ಚ್ 31 ರಂದು ಇರುತ್ತದೆ.

ರಂಜಾನ್ ಆಚರಿಸಲು ಚಂದ್ರನನ್ನು ನೋಡುವುದು ಏಕೆ ಮುಖ್ಯ?
ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನನ್ನು ಆಧರಿಸಿದೆ. ಪ್ರತಿ ರಂಜಾನ್ ತಿಂಗಳ ಆರಂಭವನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ. ಈದ್ ಉಲ್ ಫಿತರ್ (ಈದ್ ಉಲ್ ಫಿತರ್ 2025) ಅನ್ನು ಇಸ್ಲಾಮಿಕ್ ತಿಂಗಳ ಶವ್ವಾಲ್ನ ಮೊದಲ ದಿನಾಂಕದಂದು ಆಚರಿಸಲಾಗುತ್ತದೆ. ಚಂದ್ರಮಾನ ತಿಂಗಳುಗಳು 29 ಅಥವಾ 30 ದಿನಗಳು ದೀರ್ಘವಾಗಿರುವುದರಿಂದ ಈದ್ ಹಬ್ಬದ ದಿನಾಂಕವು ಪ್ರತಿ ವರ್ಷ ಬದಲಾಗುತ್ತದೆ. ಇಸ್ಲಾಂ ವಿದ್ವಾಂಸರು ಚಂದ್ರನನ್ನು ನೋಡುವ ಮೂಲಕ ಇದನ್ನು ದೃಢಪಡಿಸುತ್ತಾರೆ.
ರಂಜಾನ್ ಮಹತ್ವ
ಈದ್ ಉಲ್ ಫಿತರ್ ಎಂದರೆ ಉಪವಾಸ ಮುರಿಯುವ ಹಬ್ಬ. ಇದು ರಂಜಾನ್ ಮಾಸದ ಪೂರ್ಣಗೊಳ್ಳುವಿಕೆಯ ಆಚರಣೆಯಾಗಿದೆ. ಇದು ಪೂಜೆ, ದಾನ ಮತ್ತು ತನ್ನನ್ನು ತಾನು ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ತಿಂಗಳಾಗಿರುತ್ತದೆ. ಇದನ್ನು ಇಸ್ಲಾಂನ ಐದು ಪ್ರಮುಖ ಬೋಧನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಲ್ಲದೆ ಇದನ್ನು ಕೃತಜ್ಞತೆ, ಪ್ರತಿಫಲ ಮತ್ತು ಸಂತೋಷದ ಸಂಕೇತವಾಗಿ ಆಚರಿಸಲಾಗುತ್ತದೆ.

ರಮ್ದಾನ್ ಅಥವಾ ರಂಜಾನ್ ಪದದ ಅರ್ಥ:
ರಮ್ದ್ ಎಂದರೆ ಅರಬ್ ಭಾಷೆಯಲ್ಲಿ ‘ಅತಿಯಾದ ಶಾಖ’ ಎಂದರ್ಥ. ಈ ಪದದಿಂದ ಹುಟ್ಟಿದ ರಮ್ದಾನ್ ನ ಅರ್ಥವೂ ಕೂಡ ಭಿನ್ನವಾಗಿದೆ. ರಮ್ದಾನ್ ಎಂದರೆ ‘ಬಿಸಿಲಿಗೆ ಕಾದ ಮರಳು’ ಎಂಬರ್ಥವನ್ನು ಹೊಂದಿದೆ. ಬಿಸಿಲಿನ ಶಾಖ ನೆಲವನ್ನು ಸುಡುವಂತೆ ಮನುಷ್ಯನಲ್ಲಿ ಉದ್ಭವಿಸುವ ಹಸುವಿನ ಶಾಖ ಮಾನವನಲ್ಲಿನ ಕೆಟ್ಟ ಆಲೋಚನೆಗಳನ್ನು ಸುಟ್ಟು ಹಾಕುತ್ತದೆ ಎಂಬ ನಂಬಿಕೆ ಮುಸ್ಲೀಂರದ್ದು. ಈ ಹಬ್ಬ ಕೇವಲ ಉಪವಾಸವಲ್ಲ, ಇದೊಂದು ಮುಸ್ಲೀಂ ಬಾಂಧವರ ತಪಸ್ಸು ಅಂತಾನೇ ಹೇಳಬಹುದು.
source: oneindia.com
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1