ಸಮಾಜದಲ್ಲಿ ನಾವುಗಳು ನೆಮ್ಮದಿ, ಸುಖ ಶಾಂತಿಯಿಂದ ಇದ್ದೆವೆ ಎಂದರೆ ಅದಕ್ಕೆ ನಮ್ಮ ಪೋಲಿಸರು ಕಾರಣ : ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 02 ಸಮಾಜದಲ್ಲಿ ನಾವುಗಳು ನೆಮ್ಮದಿ, ಸುಖ ಶಾಂತಿಯಿಂದ ಇದ್ದೆವೆ ಎಂದರೆ ಅದಕ್ಕೆ ನಮ್ಮ ಪೋಲಿಸರು ಕಾರಣರಾಗಿದ್ದಾರೆ, ಅವರ ತ್ಯಾಗ ಕರ್ತವ್ಯ ಪಜ್ಞೆಯಿಂದ ನಾವು ರಾತ್ರಿ ನೆಮ್ಮದಿಯಿಂದ ನಿದ್ದೆಯನ್ನು ಮಾಡುತ್ತಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ ತಿಳಿಸಿದರು.


ಚಿತ್ರದುರ್ಗ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ವತಿಯಿಂದ ನಗರದ ಡಿ.ಎ.ಆರ್. ಪೋಲಿಸ್ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪೋಲಿಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಡಿ ಪ್ರದೇಶದಲ್ಲಿನ ಶಾಂತಿ ನೆಮ್ಮದಿಗೆ ಯಾವ ರೀತಿ ನಮ್ಮ ಸೈನಿಕರು ಕಾರಣರಾಗಿದ್ದರೂ ಅದೇ ರೀತಿ ನಗರದಲ್ಲಿ ಶಾಂತಿ ನೆಮ್ಮದಿಗೆ ನಮ್ಮ ಪೋಲಿಸರು ಕಾರಣರಾಗಿದ್ದಾರೆ, ನಾವು ವಿವಿಧ ರೀತಿಯ ಹಬ್ಬ, ಹರಿದಿನಗಳನ್ನು ಆಚರಣೆ ಮಾಡುತ್ತಿದ್ದರೆ ನಮ್ಮ ಪೋಲಿಸರು ನಮ್ಮ ಬಂದೂಬಸ್ತ್ ಮಾಡುವಲ್ಲಿ ನಿರಂತರಾಗಿರುತ್ತಾರೆ ಇಂತಹವರ ತ್ಯಾಗವನ್ನು ನಾವುಗಳು ಗುರುತಿಸಿ ಪ್ರಶಂಸೆ ಮಾಡಬೇಕಿದೆ ಎಂದರು.


ಇಂದಿನ ದಿನಮಾನದಲ್ಲಿ ಅಪರಾಧಗಳು ಸಹಾ ವಿವಿಧ ರೀತಿಯಲ್ಲಿ ನಡೆಯುತ್ತಿವೆ ಹಿಂದಿನ ರೀತಿಯಲ್ಲಿ ದರೋಡೆಗಳು ಇಂದಿನ
ದಿನಮಾನದಲ್ಲಿ ಸೈಬರ್ ಕ್ರೈಂ ರೀತಿಯಲ್ಲಿ ನಡೆಯುತ್ತಿವೆ ಅಪರಾಧಿಗಳು ಸಹಾ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ
ಜನರಿಂದ ಹಣವನ್ನು ದೋಚುತ್ತಿದ್ದಾರೆ. ಇದರ ಬಗ್ಗೆ ಪೋಲಿಸ್ ಇಲಾಖೆ ಗಮನ ನೀಡುವುದರ ಮೂಲಕ ಅಪರಾಧಿಗಳನ್ನು ಪತ್ತೇ
ಮಾಡಿ ಅವರಿಗೆ ತಕ್ಕ ಶಿಕ್ಷೆಯನ್ನು ಕೂಡಿಸಬೇಕಿದೆ. ತಮ್ಮ ಕರ್ತವ್ಯದ ಜೊತೆಗೆ ತಮ್ಮ ಕುಟುಂಬ ಹಾಗೂ ಆರೋಗ್ಯದ ಕಡೆಗೆ ಗಮನ ನೀಡುವುದನ್ನು ಮರೆಯಬಾರದು ಕರ್ತವ್ಯ ಹಾಗೂ ಕುಟುಂಬವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ
ಕುಮಾರಸ್ವಾಮಿ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪೋಲಿಸ್ ಸಬ್ ಇನ್ಸ್‍ಪೆಕ್ಟರ್ ಜ್ಞಾನ ಮೂರ್ತಿ ಮಾತನಾಡಿ,
ಪೋಲಿಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರುವುದೇ ಪುಣ್ಯದ ಕೆಲಸವಾಗಿದೆ ಇಲ್ಲಿ ಕೆಲಸ ಸಿಕ್ಕರೆ ಅದರಿಂದ ಸಮಾಜದ ಸೇವೆಯನ್ನು
ಮಾಡಲು ಸಾಧ್ಯವಾಗುತ್ತದೆ, ನನ್ನ ಅವಧಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡಿದ ತೃಪ್ತಿ ನನಗೆ ಇದೆ, ಇದೇ ರೀತಿ ಪೋಲಿಸ್
ಕೆಲಸದಲ್ಲಿ ಇರುವವರು ತಮ್ಮ ಅವಧಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡುವುದರ ಮೂಲಕ ಜನತೆಯಿಂದ ಗೌರವಕ್ಕೆ
ಪಾತ್ರರಾಗಿ ರಾಜ್ಯ ಸರ್ಕಾರದ ಸೇವೆಗಳಲ್ಲಿ ಇತರೆ ಇಲಾಖೆಗಳಿಗಿಂತಲೂ ಪೊಲೀಸ್ ಇಲಾಖೆಯ ಕಾರ್ಯ ಮಹತ್ವದ್ದಾಗಿದೆ.
ಇಲಾಖೆಯಲ್ಲಿ ಶ್ರದ್ಧೆ, ಪರಿಶ್ರಮ, ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸಿದರೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಲಿದೆ ಎಂದು
ಕಿವಿಮಾತು ಹೇಳಿದರು.

ಜಿಲ್ಲಾ ರಕ್ಷಣಾಧಿಕಾರಿಗಳಾದ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ನಮ್ಮ ಇಲಾಖೆವತಿಯಿಂದ ನಿವೃತ್ತ ನೌಕರರಿಗೆ ಉತ್ತಮವಾದ ಸೌಲಭ್ಯವನ್ನು ನೀಡಲಾಗುತ್ತಿದೆ ಇವರಿಗಾಗಿ 2000ರಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಲಾಗಿತ್ತು ಇದರಲ್ಲಿ ವಿವಾಹವಾಗುವ ಪೋಲಿಸ್ ಮಕ್ಕಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಇದ್ದಲ್ಲದೆ ಪೋಲಿಸರಿಗೆ ಮತ್ತು ಅವರ ಮಕ್ಕಳಿಗೆ ಓದಲು ವಾಚನಾಲಯವನ್ನು ತರೆಯಲಾಗಿದೆ ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಪೊಲೀಸರ ಜೀವನಮಟ್ಟವನ್ನು ಸುಧಾರಿಸುವ ಅವಶ್ಯಕತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ನಿವೃತ್ತರಾಗಿರುವ ಹಾಗೂ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಿತಚಿಂತನೆ ಮತ್ತು ಕ್ಷೇಮಾಭಿವೃದ್ಧಿಗಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿ ಅಡಿಯಲ್ಲಿ ನಿಧಿ ಸಂಗ್ರಹಿಸಿ, ಈ ರೀತಿಯಾಗಿ ಕ್ರೂಢೀಕರಣಗೊಂಡ ಹಣದಲ್ಲಿ ವಿವಿಧ ರೀತಿಯ ಸಹಾಯ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮ್ಮಿಕೊಂಡು ಬರಲಾಗುತ್ತಿದೆ. ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಅವರ ಕುಟುಂಬ ವರ್ಗದವರ ಸಲುವಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿಯಿಂದ ಈಗಾಗಲೇ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

2024ರ ಏಪ್ರಿಲ್ 01 ರಿಂದ 2025ರ ಮಾರ್ಚ್ 31 ರವರೆಗೆ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ
ವರ್ಗದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಉಪವಿಭಾಗ ಡಿವೈಎಸ್‍ಪಿ ದಿನಕರ್,
ಚಳ್ಳಕೆರೆ ಡಿವೈಎಸ್‍ಪಿ ರಾಜಣ್ಣ, ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಮ ಪಾಟೀಲ್, ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ
ಭೀಮಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *