
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 6 : ಭಾರತೀಯ ಜನತಾ ಪಾರ್ಟಿಯ 46ನೇ ಸಂಸ್ಥಾಪನ ದಿನವನ್ನು ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಭಾವುಟವನ್ನು ಹಾರಿಸುವುದರ ಮೂಲಕ ಆಚರಣೆ ಮಾಡಲಾಯಿತು.

ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಎ.ಮುರಳಿ ರವರು ಭಾವುಟವನ್ನು ಹಾರಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು 1980 ಏ. 6 ರಂದು ಬಿಜೆಪಿ ಸ್ಥಾಪನೆಯಾಯಿತು ಈ ಹಿನ್ನಲೆಯಲ್ಲಿ ಇಂದು ದೇಶದದ್ಯಾಂತ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅಂದಿನ ಸಮಯದಲ್ಲಿ ದೇಶವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಬಿಜೆಪಿ ಪ್ರಾರಂಭವಾಯಿತು. ಪ್ರಾರಂಭದಲ್ಲಿ ದೇಶದಲ್ಲಿ ಲೋಕಸಭೆಗೆ ಕೇವಲ 4 ಜನ ಮಾತ್ರ ಆಯ್ಕೆಯಾಗುತ್ತಿದ್ದರು ಬರು-ಬರುತ್ತಾ
ಪಕ್ಷ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡು ಈಗ ಮೂರು ಭಾರಿ ಪೂರ್ಣ ಪ್ರಮಾಣದ ಬಹುಮತವನ್ನು ಪಡೆಯುವುದರ ಮೂಲಕ
ಆಧಿಕಾರವನ್ನು ನಡೆಸುತ್ತಿದೆ, ಇದು ನಮ್ಮ ಪಕ್ಷದ ಕಾರ್ಯಕರ್ತರ ಶ್ರಮದಿಂದ ಇಂದು ನಮ್ಮ ಪಕ್ಷ ಅಧಿಕಾರವನ್ನು ಹಿಡಿದಿದೆ.

ಅಂತ್ಯೋದಯ ಸಿದ್ದಾಂತವನ್ನು ಅಳವಡಿಸಿಕೊಂಡು ಸೇವೆಯೇ ಸಂಘಟನೆಯ ಮಂತ್ರ ಎಂಬ ದ್ಯೇಯ ವಾಕ್ಯದೊಂದಿಗೆ ಸದಾ
ಮುಂದಾಳತ್ವ ವಹಿಸುತ್ತಿರುವ ಲಕ್ಷಾಂತರ ಕಾರ್ಯಕರ್ತರನ್ನು ಬಿಜೆಪಿ ಹೊಂದಿದೆ ನಮ್ಮ ಪಕ್ಷದ ಮೂಲ ಧೇಯ ದೇಶ ಮೊದಲು ತದ ನಂತರ ಬೇರೆಯದ್ದು, ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತನು ಸಹಾ ದೇಶದ ಉನ್ನತವಾದ ಹುದ್ದೆಗೆ ಏರಬಹುದೆಂದು ನರೇಂದ್ರ ಮೋದಿಯವರು ತೊರಿಸಿಕೊಟ್ಟಿದ್ದಾರೆ ಒಂದು ಕಾಲದಲ್ಲಿ ಪಕ್ಷದ ಸಾಮಾನ್ಯ ಕಾಯಕರ್ತರಾಗಿದ್ದ ಮೋದಿಯವರು ಮುಖ್ಯಮಂತ್ರಿಗಳಾಗಿ ಮೂರು ಬಾರಿ ಪ್ರಧಾನ ಮಂತ್ರಿಗಳಾಗಿದ್ದಾರೆ. ಇದು ಬೇರೆ ಪಕ್ಷಗಳಲ್ಲಿ ಇಲ್ಲವಾಗಿದೆ ಎಂದ ಅವರು, ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಮೂರು ದಿನಗಳ ಕಾಲ ಬೂತ್ ಮಟ್ಟದಲ್ಲಿ ಹಾಗೂ ಪ್ರತಿಯೊಬ್ಬ ಕಾರ್ಯಕರ್ತನ ಮನೆಯ ಮೇಲೂ ಸಹಾ ಧ್ವಜಗಳನ್ನು ಹಾರಿಸುವುದರ ಮೂಲಕ ದಿನಾಚರಣೆಯನ್ನು ಆಚರಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್, ನಗರಾಧ್ಯಕ್ಷ ಲೋಕೇಶ್, ಜಿಲ್ಲಾ ಉಪಾಧ್ಯಕ್ಷ
ಕಲ್ಲೇಶಯ್ಯ, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ,
ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಾಂಡುರಂಗ, ನಂದಿನಾಗರಾಜ್, ಸುಮಾ, ಚಿತ್ರದುರ್ಗ ಗ್ರಾಮಾಂತರ ಅಧ್ಯಕ್ಷ ನಾಗರಾಜ್,
ನವೀನ್ ಚಾಲುಕ್ಯ, ಲಿಂಗರಾಜು ಚಂದ್ರು, ಮಹಾಂತಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರಶಾಂತ ನಗರದಲ್ಲಿನ ಶಾಸಕರಾದ ಎಂ ಚಂದ್ರಪ್ಪರವರ ನಿವಾಸದ ಮೇಲೂ ಸಹಾ ಬಿಜೆಪಿ ಸಂಸ್ಥಾಪನಾ
ದಿನಾಚರಣೆಯ ಅಂಗವಾಗಿ ಬಿಜೆಪಿ ಧ್ವಜವನ್ನು ಹಾರಿಸಲಾಯಿತು. ನಂತರ ಸಿಹಿಯನ್ನು ಹಂಚಲಾಯಿತು. ಈ ಸಮಯದಲ್ಲಿ
ಶಾಸಕರಾದ ಎಂ ಚಂದ್ರಪ್ಪ, ಸಿದ್ದಾಮಣ್ಣ, ಬಸಣ್ಣ,ತಿಪ್ಪೇಸ್ವಾಮಿ ಭಾಗವಹಿಸಿದ್ದರು.

ನಗರದ ದಾವಣಗೆರೆ ರಸ್ತೆಯಲ್ಲಿನ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿಯವರ ನಿವಾಸದ ಮೇಲೂ ಸಹಾ ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬಿಜೆಪಿ ಭಾವುಟವನ್ನು ಹಾರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ
ಜಿ.ಎಚ್.ತಿಪ್ಪಾರೆಡ್ಡಿ, ಮಲ್ಲಿಕಾರ್ಜನ್, ನವೀನ್ ಚಾಲುಕ್ಯ, ವೆಂಕೆಟೇಶ್ ಯಾದವ್ ಲಿಂಗರಾಜು, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1