AGNIVEER RECRUITMENT : ಭಾರತೀಯ ಭೂ ಸೇನೆಯಲ್ಲಿ ನಾಲ್ಕು ವರ್ಷಗಳ ಸೇವೆ ಸಲ್ಲಿಸುವ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು: ಅಗ್ನಿವೀರ್ ಸಾಮಾನ್ಯ ಕರ್ತವ್ಯ (ಮಹಿಳಾ ಮಿಲಿಟರಿ ಪೊಲೀಸ್) ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಭಾರತೀಯ ಸೇನೆ ಅರ್ಜಿ ಆಹ್ವಾನಿಸಿದೆ. ಇವು ಭೂ ಸೇನೆಯ ಅಗ್ನಿವೀರ್ ಹುದ್ದೆಗಳಾಗಿವೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ (joinindianvavy.gov.in)
ಹುದ್ದೆಗಳ ವಿವರ: ಅಗ್ನಿವೀರ್ (ಜನರಲ್ ಡ್ಯೂಟಿ), ಅಗ್ನಿವೀರ್ (ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್), ಅಗ್ನಿವೀರ್ ಟ್ರೇಡ್ಸ್ಮೆನ್.
ವಿದ್ಯಾರ್ಹತೆ: ಪಿಯುಸಿ, ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕನಿಷ್ಠ 17 ವರ್ಷ 6 ತಿಂಗಳು, ಗರಿಷ್ಠ 21 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್ಲಾ ಅಭ್ಯರ್ಥಿಗಳು ಜಿಎಸ್ಟಿ ಶುಲ್ಕದೊಂದಿಗೆ 250 ರೂ. ಪಾವತಿ ಮಾಡಬೇಕು.
ವೇತನ: ನಾಲ್ಕು ವರ್ಷದ ಸೇವಾವಧಿಯ ಹುದ್ದೆಗೆ ಮೊದಲ ವರ್ಷ 30,000 ರೂ. ಎರಡನೇ ವರ್ಷದಲ್ಲಿ 33,000 ರೂ. ಮೂರನೇ ವರ್ಷ 36,500 ರೂ. ಮತ್ತು ನಾಲ್ಕನೇ ವರ್ಷ 40,000 ರೂಪಾಯಿ ವೇತನ ಸಿಗಲಿದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ, ದೈಹಿಕ ಸಾಮರ್ಥ್ಯ ಸೇರಿದಂತೆ ಇನ್ನಿತರ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಜೂನ್ನಲ್ಲಿ ಆನ್ಲೈನ್ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 10 ಆಗಿದೆ. ಹೆಚ್ಚಿನ ಮಾಹಿತಿಗೆ joinindianvavy.gov.in ಅಥವಾ agniveernavy.cdac.in ಈ ಜಾಲತಾಣಕ್ಕೆ ಭೇಟಿ ನೀಡಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 84
Sushma Basayya Hiremath