GHIBLI AI TREND RISKS : ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಾಕಷ್ಟು ಸದ್ದು ಮಾಡುತ್ತಿರುವ ಘಿಬ್ಲಿ ಸದ್ದಿಲ್ಲದೇ ನಿಮ್ಮ ಮಾಹಿತಿ ಕಳುವು ಮಾಡುತ್ತಿದೆ. ಯಾವುದಕ್ಕೂ ಹುಷಾರ್ ಆಗಿರಿ!

ವಾರಾಣಸಿ, ಉತ್ತರಪ್ರದೇಶ: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಘಿಬ್ಲಿ ಶೈಲಿಯ ಫೋಟೋಗಳು ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿಸಿದ್ದು, ಸಾಮಾನ್ಯ ಜನರು, ಸೆಲಿಬ್ರಿಟಿಗಳು, ರಾಜಕಾರಣಿಗಳು ಕೂಡ ತಮ್ಮ ಫೋಟೋವನ್ನು ಎಐ ಮೂಲಕ ಘಿಬ್ಲಿ ಸ್ಟೈಲ್ಗೆ ರೂಪಾಂತರಿಸಿ, ಅದನ್ನು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ChatGPT ಯ ಹೊಸ GPT-4o ಇಮೇಜ್ ಜನರೇಷನ್ ಈ ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಇದಾದ ಬಳಿಕ ಇಂಟರ್ನೆಟ್ ವೈರಲ್ ಘಿಬ್ಲಿ ಟ್ರೆಂಡ್ಗೆ ಆಗಿದೆ. ಘಿಬ್ಲಿ ಸ್ಟುಡಿಯೋ ನಿರ್ಮಿಸಿದ ಹಯಾವೊ ಮಿಯಾಜಾಕಿಯ ಸಿಗ್ನೇಚರ್ ಅನಿಮೆ ಆರ್ಟ್ ಸ್ಟೈಲ್ ಹೆಚ್ಚಿನ ಘಿಬ್ಲಿ ಸ್ಟೈಲ್ ಮಾಡೋಕ್ಕೆ ಸಾಧ್ಯವಾಗಿಲ್ಲ. ಇನ್ನು ಎಲೋನ್ ಮಸ್ಕ್ ಒಡೆತನದ xAI ಗ್ರೋಕ್-3 ಚಾಟ್ಬಾಟ್ ಮೂಲಕ ಜನರು ಈ ಘಿಬ್ಲಿ ಸ್ಟೈಲ್ ಫೋಟೋಗಳಿಗೆ ಕನ್ವರ್ಟ್ ಮಾಡಬಹುದು. ಆದರೆ, ಈ ಘಿಬ್ಲಿ ಸ್ಟೈಲ್ ಫೋಟೋಗಳ ಹೇಗೆ ಅಪಾಯಾಕಾರಿ, ಇದು ಸುರಕ್ಷಿತವೇ ಎಂಬುದು ತಿಳಿದಿದ್ಯಾ? ಈ ಘಿಬ್ಲಿ ಟ್ರೆಂಡ್ ಮೂಲಕ ಎಐ ಟೂಲ್ಗಳು ನಿಮ್ಮ ಡೇಟಾ ಕಳವು ಮಾಡುತ್ತಿವೆ. ಇದೆ ಕಾರಣದಿಂದ ಕೆಲವೊಂದು ಸಲ ಫೇಸ್ ಸ್ವಾಪಿಂಗ್ ಘಟನೆಗಳು ವರದಿಯಾಗಿವೆ.

ಈ ರೀತಿ ಎಐ ಟೂಲ್ ಮೂಲಕ ಫೋಟೋಗಳನ್ನು ಘಿಬ್ಲಿ ಆರ್ಟ್ಗೆ ಮಾಡುವಾಗ ನಮ್ಮ ಪ್ರೈವೇಸಿ, ಡೇಟಾ ಕಳ್ಳತನದ ಅಪಾಯವೂ ಇರುತ್ತದೆ. ಈ ಕಾರಣದಿಂದ ಇದನ್ನು ಬಳಕೆ ಮಾಡುವಾಗ ಎಚ್ಚರಿಕೆ ಇರಬೇಕು. ನಮ್ಮ ಫೋನ್ ಮಾಹಿತಿ ಹೇಗೆ ಸೈಬರ್ ವಂಚನೆಗೆ ಒಳಗಾಗಬಹುದು ಅನ್ನೋದನ್ನು ಸೈಬರ್ ತಜ್ಞರೇ ತಿಳಿಸಿದ್ದಾರೆ. ಈ ಘಿಬ್ಲಿ ಆರ್ಟ್ ಸಾಮಾನ್ಯ ಜನರು ಬಳಕೆ ಮಾಡುವಾಗ ಎದುರಾಗುವ ಸಮಸ್ಯೆ ಕುರಿತು ಬನಾರಸ್ ಮೂಲದ ಎಥಿಕಲ್ ಹ್ಯಾಕರ್ ಆಗಿರುವ ಮೃತ್ಯುಂಜಯ್ ಸಿಂಗ್ ತಿಳಿಸಿದ್ದಾರೆ.
ಎಐ ಘಿಬ್ಲಿ ವಂಚನೆ: ಎಐ ತಂತ್ರಜ್ಞಾನ ಪ್ರತಿಯೊಬ್ಬರಲ್ಲೂ ಸಣ್ಣ ಮಟ್ಟದ ಸಮಸ್ಯೆಗೆ ದೂಡುತ್ತದೆ. ನೀವು ಎಐ ಪ್ಲಾಟ್ಫಾರ್ಮ್ ಮೂಲಕ ಅಥವಾ ನಿಮ್ಮ ಫೋನ್ನಲ್ಲಿರುವ ಎಐ ಅಪ್ಲಿಕೇಷನ್ ಮೂಲಕ ನಿಮ್ಮ ಫೋಟೋ ಮಾತ್ರ ಹಂಚಿಕೊಳ್ಳಲ್ಲ. ಬದಲಾಗಿ ಡೇಟಾ ಕೂಡ ಕೊಡುತ್ತೀರಾ. ಇದು ದುರ್ಬಳಕೆ ಆಗಬಹುದು. ಈ ಹಿನ್ನೆಲೆ ನಿಮ್ಮ ಫೋನ್ನಲ್ಲಿ ಯಾವುದೇ ಅಪ್ಲಿಕೇಷನ್ ಸೌಲಭ್ಯ ನೀಡೋ ಮೊದಲು ಯೋಚಿಸಿ.

ಘಿಬ್ಲಿ ಬಳಸುವಾಗ ಇರಲಿ ಎಚ್ಚರಿಕೆ: ಮಾರುಕಟ್ಟೆಗೆ ಹೊಸ ಎಐ ಕಂಪನಿ ಬಂದಿದ್ದು, ಅದು ಬಳಕೆ ಮಾಡುತ್ತಿರುವ ವಿಭಿನ್ನ ವಿಧಾನ ಈಗ ಟ್ರೆಂಡ್ ಆಗಿದೆ. ಎಐನಲ್ಲಿ ಕೂಡ ಅದು ಟ್ರೆಂಡ್ ಆಗಿದ್ದು, ಇದು ಹಳೆ ಡೇಟಾ ಅಥವಾ ಹೊಸ ಡೇಟಾ ಬಳಕೆ ಮಾಡಬಹುದು. ಘಿಬ್ಲಿ ಕಂಪನಿಗಳು ನಟರ ಫೋಟೋಗಳನ್ನು ಎಐ ಟ್ರೆಂಡ್ಗೆ ಒಳಗಾಗಿಸುವಂತೆ ಮೊದಲು ಕೇಳತ್ತೆ. ಇದರಿಂದ ಸಾಮಾನ್ಯ ಜನ ಕೂಡ ಈ ಹೊಸ ಸ್ಟೈಲ್ ಅನುಸರಿಸುತ್ತಾರೆ. ಘಿಬ್ಲಿಯಲ್ಲಿ ಈಗಾಗಲೇ ಸಾಕಷ್ಟು ಫೋಟೋಗಳು ಟ್ರೆಂಡ್ ಆಗಿವೆ ಕೂಡಾ. ಇದು ಹಳೆ ಡೇಟಾವನ್ನು ಪಡೆದರೆ. ಇದು ಹೆಚ್ಚಿನ ಹಣ ಬಳಕೆ ಮಾಡಬೇಕಾಗುತ್ತದೆ . ಆದರೆ ಈ ಎಐ ಅನ್ನು ಫ್ರೀ ಯಾಗಿ ನೋಡುತ್ತಿರುವುದರಿಂದ ಲೆಕ್ಕಕ್ಕೆ ಸಿಗದಷ್ಟು ಫೋಟೋಗಳನ್ನು ಈಗಾಗಲೇ ಘಿಬ್ಲಿ ಸ್ಟೈಲ್ಗೆ ನೀಡಲಾಗಿದೆ. ಇದರಿಂದ ಕೆಲವು ಸಲ ಫೋಟೋ ಅದಲು ಬದಲಾಗುತ್ತಿರುವುದನ್ನೂ ನೀವು ಕಾಣಬಹುದಾಗಿದೆ.
ಡೇಟಾ ಕಳವು: ಸೈಬರ್ ತಜ್ಞರು ಹೇಳುವಂತೆ, ಇದು ಬೇಕಾದರೆ ನಿಮ್ಮ ಡೇಟಾನ ದುರ್ಬಳಕೆ ಮಾಡಿಕೊಳ್ಳಬಹುದಂತೆ . ಈ ರೀತಿ ಈ ಹಿಂದೆ ಕೂಡ ಅನೇಕ ಪ್ರಕರಣಗಳು ವರದಿ ಆಗಿವೆ. ಯಾವಾಗ ಹೊಸ ಎಐ ಕಂಪನಿ ಮಾರುಕಟ್ಟೆಗೆ ಬಂತೋ ಆಗ ಅಂತಹ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಎಐ ಕಂಪನಿಗಳು ಸಾಮಾಜಿಕ ಜಾಲತಾಣದಿಂದ ಅಥವಾ ಸುದ್ದಿ ಜಾಲತಾಣದಿಂದ ಯಾವುದೇ ಅನುಮತಿ ಇಲ್ಲದೇ ಮೂರು ಪಟ್ಟು ಫೋಟೋಗಳನ್ನು ಕದಿಯುತ್ತಿವೆ ಎಂದು ಹೇಳಲಾಗುತ್ತಿದೆ. ಅನೇಕ ಎಐಗಳು ಈ ಫೋಟೋಗಳನ್ನು ಅಧಿಕ ಹಣಕ್ಕೆ ಮತ್ತೊಂದು ಕಂಪನಿಗಳಿಗೆ ಮಾರಾಟ ಮಾಡಬಹುದು.
2024ರಲ್ಲಿ ಕೂಡ ಈ ರೀತಿಯ ಬಂದು ಡೇಟಾ ಲೀಕ್ ಆಗಿರೋ ಪ್ರಕರಣ ಬೆಳಕಿಗೆ ಬಂದಿತ್ತು. ಅದು ಸುಮಾರು 10 ಲಕ್ಷ ಜನರ ಮುಖ, ಡ್ರೈವಿಂಗ್ ಲೈಸೆನ್ಸ್ ಮತ್ತು ಗುರುತುಗಳನ್ನು ಸೋರಿಕೆ ಮಾಡಿತ್ತು. ಇದರಿಂದ ಲಕ್ಷಾಂತರ ಮಂದಿ ಸೈಬರ್ ವಂಚನೆಗೆ ಬಲಿಪಶು ಆಗಿದ್ದರು . ಇದೀಗ ಇದರಲ್ಲಿ ಆಗುತ್ತಿರುವ ದೊಡ್ಡ ತಪ್ಪು ಎಂದರೆ ಸ್ವಾಪಿಂಗ್. ಅಂದರೆ ತಪ್ಪು ವಿಡಿಯೋಗಳ ಮೂಲಕ ನಿಮ್ಮ ಫೋಟೋನ ದುರ್ಬಳಕೆ ಮಾಡಲಾಗುತ್ತಿದೆ.

ಗ್ಯಾಲರಿ ಲಭ್ಯತೆ ನೀಡುವ ಮೊದಲು ಇರಲಿ ಎಚ್ಚರ: ಸೈಬರ್ ತಜ್ಞರು ಹೇಳುವಂತೆ, ಎಐ ಘಿಬ್ಲಿ ಸ್ಟೈಲ್ ಮಾಡುವುದಕ್ಕೆ ಮುಂಚೆ ನಿಮ್ಮ ಗ್ಯಾಲರಿ ಅನುಮತಿ ಕೇಳುತ್ತದೆ. ನಿಮ್ಮ ಗ್ಯಾಲರಿಯಲ್ಲಿರುವ ಗೌಪ್ಯ ದಾಖಲಾತಿಗಳು, ಫೋಟೋಗಳನ್ನು ಅದು ಪಡೆಯಬಹುದು. ಅದರಲ್ಲಿ ನಿಮ್ಮ ಎಟಿಎಂ, ಅಕೌಂಟ್ ಮಾಹಿತಿ, ಕಂಪನಿ ಕೆಲವು ಪೇಪರ್ಸ್ನ ಫೋಟೋಗಳು ಸಹ ಇರಬಹುದು. ಈ ಹಿನ್ನೆಲೆಯಲ್ಲಿ ಈ ರೀತಿಯ ಅಪ್ಲಿಕೇಷನ್ ಅಕ್ಸೆಸ್ ಕೊಡುವ ಮೊದಲು ಇರಲಿ ಎಚ್ಚರ. ಗ್ಯಾಲರಿ ಬಳಕೆಗೆ ಅನುಮತಿ ಕೊಟ್ಟರೆ ಅದು ಬೇಕಾದಲ್ಲಿ ದುರ್ಬಳಕೆಯೂ ಆಗಬಹುದು.
ಈ ವಿಷಯಗಳು ಅವಶ್ಯವಾಗಿ ನಿಮ್ಮ ಗಮನದಲ್ಲಿ ಇರಲಿ
- ಮೊದಲಿಗೆ ಈ ರೀತಿ ಎಐಗೆ ಬಲಿಯಾಗದೇ ಇರಿ, ಎಲ್ಲಿ ಕೂಡ ನಿಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಬೇಡಿ.
- ನಿಮ್ಮ ಮುಖದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಳಕೆ ಮಾಡಬೇಡಿ. ಹಾಗೇ ನಿಮ್ಮ ನಿಮ್ಮ ಸಾಮಾಜಿಕ ಖಾತೆಗಳಲ್ಲಿ ಫೇಸ್ ಅನ್ಲಾಕ್ ಬದಲಾಗಿ ಬಲಿಷ್ಠವಾದ ಪಾಸ್ವರ್ಡ್, ಪಿನ್ ನೀಡಿ.
- ಅಪರಿಚಿತ ಆ್ಯಪ್ಗಳನ್ನು ಡೌನ್ಲೋಡ್ ಮಾಡಬೇಡಿ. ಆ್ಯಪ್ಗಳ ಪ್ರೈವಸಿ ಪಾಲಿಸಿನ ಚೆನ್ನಾಗಿ ಅರ್ಥ ಮಾಡಿಕೊಳ್ಳಿ.
ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1