2 ವರ್ಷದ ಬಳಿಕ ಚೆನ್ನೈ ತಂಡವನ್ನು ಧೋನಿ ಮುನ್ನಡೆಸಿದರು. ಆದ್ರೂ ಕೂಡ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ. ಮಾತ್ರವಲ್ಲ ಸಿಎಸ್ಕೆ ಇಂದಿನ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ಮಾಡಿರದ ಕಳಪೆ ಸಾಧನೆ ಮಾಡಿದೆ.

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ ಆವೃತ್ತಿಯ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕೀಂಗ್ಸ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು. ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಕೆಕೆಆರ್ 3ನೇ ಸ್ಥಾನಕ್ಕೆ ಏರಿಕೆ ಕಂಡಿತು. ಇಂದಿನ ಪಂದ್ಯದಲ್ಲಿ ಬರೋಬ್ಬರಿ 2 ವರ್ಷದ ಬಳಿಕ ಚೆನ್ನೈ ತಂಡವನ್ನು ಧೋನಿ ಮುನ್ನಡೆಸಿದರು. ಆದ್ರೂ ಕೂಡ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ. ಮಾತ್ರವಲ್ಲ ಸಿಎಸ್ಕೆ ಇಂದಿನ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ಮಾಡಿರದ ಕಳಪೆ ಸಾಧನೆ ಮಾಡಿದೆ.
8 ವಿಕೆಟ್ಗಳ ಸುಲಭ ಜಯ
ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿದ ಕೆಕೆಆರ್ 8 ವಿಕೆಟ್‌ಗಳ ಭಾರಿ ಅಂತರದಿಂದ ಗೆದ್ದಿತು. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳಲಿದೆ ಎಂದುಕೊಂಡು ಚೆಪಾಕ್‌ನಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಕೊನೆಗೂ ನಿರಾಶೆಗೊಂಡರು.
ಸತತ ಐದು ಸೋಲು
ಇಂದಿನ ಪಂದ್ಯದಲ್ಲಿ ಸೋಲುವ ಮೂಲಕ ಸಿಎಸ್‌ಕ್ ತಂಡ ಐಪಿಎಲ್ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ಸತತ 5 ಪಂದ್ಯಗಳನ್ನು ಸೋತ ಕಳಪೆ ಸಾಧನೆ ಮಾಡಿತು. ಮಾತ್ರವಲ್ಲ, ಚೆನ್ನೈನ ಚೆಪಾಕ್ ಅಂಗಳದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸುವ ಮೂಲಕ ಇದೇ ಮೊದಲ ಬಾರಿಗೆ ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಬೇಡದ ದಾಖಲೆ ಮಾಡಿತು.

ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದ ಚೆನ್ನೈ
ಚೆಪಾಕ್‌ನಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ, ಕೆಕೆಆರ್ ನಾಯಕ ರಹಾನೆ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ರುತುರಾಜ್ ಬದಲಿಗೆ ತ್ರಿಪಾಠಿ ಮತ್ತು ಮುಖೇಶ್ ಚೌಧರಿ ಬದಲಿಗೆ ಅನ್ಶುಲ್ ಕಾಂಬೋಜ್ ಅವರನ್ನು ಸಿಎಸ್‌ಕೆ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಸಿಎಸ್‌ಕೆ ಪರ ಆರಂಭಿಕರಾಗಿ ರಾಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಕಣಕ್ಕಿಳಿದರು.
1 ರನ್‌ಗೆ ವಿಕೆಟ್ ಒಪ್ಪಿಸಿದ ಧೋನಿ
ಇಂದಾದ್ರೂ ಗೆಲುವು ಸಾಧಿಸುತ್ತೇವೆ ಎಂದು ಭಾವಿಸಿದ್ದ ಸಿಎಸ್‌ಕೆ, ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಆಘಾತಕ್ಕೊಳಗಾಯಿತು. ಸಿಎಸ್‌ಕೆ 72 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ, ನಾಯಕ ಮಹೇಂದ್ರ ಸಿಂಗ್ ಧೋನಿ 9 ನೇ ಆಟಗಾರನಾಗಿ ಮೈದಾನಕ್ಕೆ ಕಾಲಿಟ್ಟರು. ಧೋನಿ ಕನಿಷ್ಠ ಒಂದು ಅಥವಾ ಎರಡು ಬೌಂಡರಿಗಳನ್ನು ಬಾರಿಸಿ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ತರುತ್ತಾರೆ ಎಂದು ಅವರು ಆಶಿಸುತ್ತಿದ್ದರು. ಆದರೆ ಧೋನಿ 4 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಸುನಿಲ್ ನರೈನ್ ಎಸೆತದಲ್ಲಿ ಔಟಾಗಿ ಪೆವಿಲಿಯನ್‌ಗೆ ಮರಳಿದರು.
10.1 ಓವರ್‌ಗೆ ಗೆಲುವಿನ ನಗೆ ಬೀರಿದ ಕೆಕೆಆರ್
ಅಂತಿಮವಾಗಿ, ಸಿಎಸ್‌ಕೆ ತಂಡವು ಕಠಿಣ ಹೋರಾಟ ನಡೆಸಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 103 ರನ್ ಗಳಿಸಿತು. ನಂತರ ಗೆಲ್ಲಲು 104 ರನ್ ಗಳ ಸರಳ ಗುರಿಯೊಂದಿಗೆ ಮೈದಾನಕ್ಕೆ ಇಳಿದ ಕೋಲ್ಕತ್ತಾ ತಂಡಕ್ಕೆ ಸಿಎಸ್ ಕೆ ಬೌಲರ್ ಗಳು ಯಾವುದೇ ತೊಂದರೆ ನೀಡಲಿಲ್ಲ. ಚೆಪಾಕ್ ಮೈದಾನದಲ್ಲಿ ಕೆಕೆಆರ್ ಅದ್ಭುತ ಆಟವಾಡಿತು ಮತ್ತು 10.1 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು. ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಸತತ 5 ಸೋಲುಗಳನ್ನು ಅನುಭವಿಸಿದ್ದು ಇದೇ ಮೊದಲು. ಚೆಪಾಕ್ ತಂಡವು ಸರಣಿ ಸೋಲುಗಳನ್ನು ಅನುಭವಿಸುತ್ತಿರುವುದು ಇದೇ ಮೊದಲು ಎಂಬುದು ಗಮನಿಸಬೇಕಾದ ಸಂಗತಿ.
News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1