
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 12 : ನಗರದ ಹೊಳಲ್ಕೆರೆ ರಸ್ತೆಯ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿನ ವೀರಶೈವ ಸಮಾಜ (ರಿ.) ದವತಿಯಿಂದ ಶನಿವಾರ ಶ್ರೀ ವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡ ಕಾರ್ಯಕ್ರಮವನ್ನು ವಿಭೃಂಭಣೆ ಯಿಂದ ನಡೆಸಲಾಯಿತು.

ನಗರದ ರಂಗಯ್ಯನ ಬಾಗಿಲ ಬಳಿಯಲ್ಲಿನ ಉಜ್ಜಯಿನಿ ಮಠದಲ್ಲಿ ಗಂಗಾಪೂಜೆಯ ನಂತರ ಗುಗ್ಗುಳದ ಮೆರವಣಿಗೆಯು
ರಂಗಯ್ಯನಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ ವೃತ್ತದ ಮುಖಾಂತರವಾಗಿ ಶ್ರೀ
ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಾಣ ಮಾಡಲಾದ ಅಗ್ನಿಕುಂಡ ಹಾಯುವುದರ ಮೂಲಕ ಸಮಾಪ್ತಿ
ಮಾಡಿ ವೀರಭದ್ರ ಸ್ವಾಮಿಗೆ ಮಹಾಮಂಗಳಾರತಿಯ ನಂತರ ಮೆರವಣಿಗೆಯ ಮೂಲಕ ಆಗಮಿಸಿದ ಭಕ್ತರಿಗೆ ದಾಸೋಹ
ಏರ್ಪಡಿಸಲಾಗಿತ್ತು.

ಗುಗ್ಗಳದ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಹರಪನಹಳ್ಳಿ ಪಟ್ಟಣದ ಮೇಗಳಪೇಟೆ ಶ್ರೀ ಗುಗ್ಗುಳ ವೀರಭದ್ರೇಶ್ವರ ದೇವಸ್ಥಾನ
ಸಮಿತಿಯವರು ವೀರಭದ್ರನ ಪರಾಕ್ರಮದ ಬಗ್ಗೆ ಒಡಪುಗಳನ್ನು ಅಲಲ್ಲಿ ಹೇಳುವುದರ ಮೂಲಕ ಭಕ್ತರಿಗೆ ವೀರಭದ್ರನ ಸಾಹದ
ಕಥೆಗಳನ್ನು ಪರಿಚಯ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಶಿವಸಿಂಪಿ ಮಹಿಳಾ ಘಟಕದ ಪದಾಧಿಕಾರಿಗಳು ಕೆಂಪು
ಸೀರೆಯನ್ನು ಧರಿಸಿ ತಲೆಯ ಮೇಲೆ ಕುಂಭವನ್ನು ಇಟ್ಟುಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.
ಗುಗ್ಗುಳ ಮೆರವಣಿಗೆ ಬರುವ ದಾರಿಯಲ್ಲಿನ ಭಕ್ತರ ಮನೆಗಳ ಮುಂದೆ ರಸ್ತೆಯನ್ನು ಗುಡಿಸಿ ನೀರನ್ನು ಹಾಕಿ ರಂಗೋಲಿಯನ್ನು ಬಿಡಿಸಿ
ಗುಗ್ಗಳವನ್ನು ಸ್ವಾಗತಿಸಿದರು ಇದ್ದಲ್ಲದೆ ಕೆಲವು ಭಕ್ತರು ತಮ್ಮ ಮನೆಗಳ ಮುಂದೆ ಗುಗ್ಗಳದಲ್ಲಿ ಆಗಮಿಸಿದವರು ಮಜ್ಜಿಗೆ, ನೀರು,
ಪಾನಕವನ್ನು ನೀಡಿದರು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಪದಾಧಿಕಾರಿಗಳು ಸಮಾಜದ ಮುಖಂಡರು ಮಹಿಳೆಯರು
ಮಕ್ಕಳು ಭಾಗವಹಿಸಿದ್ದರು. ದಾರಿಯಲ್ಲಿ ಮಹಿಳೆಯರು, ಮಕ್ಕಳು ಸರದಿ ಸಾಲಿನಲ್ಲಿ ಕುಳಿತು ಅವರ ತಲೆಯ ಮೇಲೆ ವೀರಭದ್ರ
ಸ್ವಾಮಿಯ ಅಗ್ನಿಕುಂಡವನ್ನು ಹಾಯುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.