
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ರವರ “ಭೀಮ ಹೆಜ್ಜೆ “ಭೀಮ ರಥಯಾತ್ರೆ ನಿಮಿತ್ತ ಟಿ ಶರ್ಟ್ ಬಿಡುಗಡೆ.
ಚಿತ್ರದುರ್ಗ ಏ. 12 : ಚಿತ್ರದುರ್ಗದ ನಗರಕ್ಕೆ ಆಗಮಿಸಿದ ಭೀಮ ಹೆಜ್ಜೆ ರಥಯಾತ್ರೆಯ ಜೊತೆಗೆ ಆಗಮಿಸಿದ ನಾಯಕರುಗಳು ಏ. 12ರ ಬೆಳಿಗ್ಗೆ ಮದಕರಿ ನಾಯಕ ವೃತ್ತದಲ್ಲಿನ ವೀರಮದಕರಿ ನಾಯಕ ಪ್ರತಿಮೆಗೆ ಪುಷ್ಪ ನಮನ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭೀಮ ಹೆಜ್ಜೆ ರಥಯಾತ್ರೆಯ ಅಂಗವಾಗಿ ಭೀಮ ಹೆಜ್ಜೆಯ ” ಟೀ ಶರ್ಟ್ “ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೋಲಾರದ ಮಾಜಿ ಸಂಸದರಾದ ಮುನಿಸ್ವಾಮಿ ಹಾಗೂ ಎಂಎಲ್ಸಿ ಕೆ ಎಸ್ ನವೀನ್ ಎಸ್ ಸಿ ಮೋರ್ಚಾ
ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಕಾರಜೋಳ್ ಹಾಗೂ ಮಹೇಂದ್ರ ಜಿಲ್ಲಾ ಅಧ್ಯಕ್ಷರಾದ ಮುರಳಿ ಎಸ್ ಸಿ
ಮೋರ್ಚಾ ಮುಖಂಡರಾದ ದೀಪ ಶ್ರೀನಿವಾಸ್, ಲೋಹಿತ್ ,ಭಾರ್ಗವಿ ದ್ರಾವಿಡ್, ಶ್ರೀನಿವಾಸ್ ಮತ್ತು ಮೋಹನ್ ಉಪಸ್ಥಿತರಿದ್ದರು.
