ಕರ್ನಾಟಕ ಜಾತಿ ಗಣತಿಯ ಪ್ರವರ್ಗವಾರು ಲೆಕ್ಕಚಾರ – 1ಎ, 1ಬಿ, 2ಎ, 2ಬಿ, 3ಎ, 3ಬಿ ಜನಸಂಖ್ಯೆ ಎಷ್ಟಿದೆ? ಜನರಲ್, ಎಸ್ಸಿ – ಎಸ್ಟಿ ಎಷ್ಟು?

Highlights of Karnataka Caste based Census – ಕರ್ನಾಟಕ ಸರ್ಕಾರ ನಡೆಸಿರುವ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಗಣತಿ) ವರದಿಯ ಮತ್ತಷ್ಟು ಅಂಶಗಳು ಬಯಲಿಗೆ ಬಂದಿವೆ. ಅದರಂತೆ, ಪ್ರವರ್ಗ 1ಎ, 1ಬಿ, 2ಎ, 2ಬಿ, 3ಎ, 3ಬಿ ಗಳಲ್ಲಿ ಎಷ್ಟೆಷ್ಟು ಜನಸಂಖ್ಯೆಯಿದೆ ಎಂಬುದರ ವರದಿ ಸಿಕ್ಕಿದೆ. ಅದರಂತೆ, ಸಾಮಾನ್ಯ ವರ್ಗದ ಜನಸಂಖ್ಯೆ ಎಷ್ಟಿದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಎಷ್ಟಿದೆ ಎಂಬ ಅಂಕಿ-ಅಂಶಗಳೂ ಲಭ್ಯವಾಗಿವೆ.

  • ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಗಣತಿ) ವರದಿ ಬಹಿರಂಗ.
  • ಪ್ರವರ್ಗವಾರು ಜನಸಂಖ್ಯೆಯ ಪಟ್ಟಿ ಲಭ್ಯ. ಒಟ್ಟು ಪ್ರವರ್ಗಗಳ ಜನಸಂಖ್ಯೆ 4 ಕೋಟಿ 16 ಲಕ್ಷದ ಮೂವರತ್ತು ಸಾವಿರದ ನೂರಾ ಐವತ್ತ ಮೂರು.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗಗಳ ಜನಸಂಖ್ಯೆಯೂ ಲಭ್ಯ.

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಗಣತಿ) ವರದಿಯಲ್ಲಿರುವ ಮತ್ತಷ್ಟು ಅಂಶಗಳು ಬೆಳಕಿಗೆ ಬಂದಿವೆ. ಅದರಂತೆ, ಪ್ರವರ್ಗವಾರು ಜನಸಂಖ್ಯೆ ಎಷ್ಟಿದೆ ಎಂಬುದರ ಸಂಪೂರ್ಣ ವಿವರ ಲಭ್ಯವಾಗಿದೆ.

ವರದಿಯ ಪ್ರಕಾರ, ಎಲ್ಲಾ ಪ್ರವರ್ಗಗಳಡಿ ಒಟ್ಟು ಜನಸಂಖ್ಯೆ ನಾಲ್ಕು ಕೋಟಿ ಹದಿನಾರು ಲಕ್ಷದ ಮೂವತ್ತು ಸಾವಿರದಷ್ಟು (4,16,36,153) ಇದೆ ಇವುಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಒಂದು ಕೋಟಿ ಒಂಭತ್ತು ಲಕ್ಷದ ಇಪ್ಪತ್ತೊಂಭತ್ತು ಸಾವಿರದ ಮುನ್ನೂರ ನಲವತ್ತೇಳು (9,29,347) ಇದೆ. ಪರಿಶಿಷ್ಟ ಪಂಗಡದ ಒಟ್ಟು ಜನಸಂಖ್ಯೆ ನಲವತ್ತೆರಡು ಲಕ್ಷದ ಎಂಭತ್ತೊಂದು ಸಾವಿರದ ಇನ್ನೂರ ಎಂಭತ್ತೊಂಭತ್ತು (42,81,289) ಇದೆ. ಇನ್ನು, ಸಾಮಾನ್ಯ ವರ್ಗದ ಜನಸಂಖ್ಯೆ ಇಪ್ಪತ್ತೊಂಭತ್ತು ಲಕ್ಷದ ಎಪ್ಪತ್ತನಾಲ್ಕು ಸಾವಿರದ ನೂರಾ ಐವತ್ತ ಮೂರು (29,74,153) ಇದೆ.

ಪರಿಶಿಷ್ಟರುಜನಸಂಖ್ಯೆ
ಪರಿಶಿಷ್ಟ ಜಾತಿ (SC)9,29,347
ಪರಿಶಿಷ್ಟ ಪಂಗಡ (ST)42,81,289
ಸಾಮಾನ್ಯ ವರ್ಗ29,74,153
ಒಟ್ಟು ಜನಸಂಖ್ಯೆ4,16,36,153

ಪ್ರವರ್ಗವಾರು ಜನಸಂಖ್ಯೆ

ಇನ್ನು ಪ್ರವರ್ಗ 1ಎ ಅಡಿಯಲ್ಲಿನ ಜನಸಂಖ್ಯೆ 34 ಲಕ್ಷದ 96 ಸಾವಿರದ 638 ಇದ್ದರೆ, ಪ್ರವರ್ಗ 1 ಬಿ ಜನಸಂಖ್ಯೆ 73 ಲಕ್ಷದ 92 ಸಾವಿರದ 313 ಇದೆ. ಅತ್ತ, ಪ್ರವರ್ಗ 2ಎ ಜನಸಂಖ್ಯೆ 77 ಲಕ್ಷದ 78 ಸಾವಿರದ ಇನ್ನೂರ ಒಂಭತ್ತು ಇದ್ದರೆ, ಪ್ರವರ್ಗ 2ಬಿ ಜನಸಂಖ್ಯೆ 75 ಲಕ್ಷದ 25 ಸಾವಿರದ 809 (75,25,880) ಇದೆ.

ಪ್ರವರ್ಗ 3 ಎ ಜನಸಂಖ್ಯೆಯು ಎಪ್ಪತ್ತೆರಡು ಲಕ್ಷದ ತೊಂಭತ್ತೊಂಭತ್ತು ಸಾವಿರದ ಐದು ನೂರಾ ಎಪ್ಪತ್ತೇಳು (72,99,577) ಇದ್ದರೆ, ಪ್ರವರ್ಗ 3 ಬಿ ಜನಸಂಖ್ಯೆಯು ಎಂಬತ್ತೊಂದು ಲಕ್ಷದ ಮೂವತ್ತೇಳು ಸಾವಿರದ ಐದು ನೂರಾ ಮೂವತ್ತಾರು (81,37,536) ಇದೆ.

ಪ್ರವರ್ಗವಾರು ಜನಸಂಖ್ಯಾ ಪಟ್ಟಿ

ಪ್ರವರ್ಗಗಳುಜನಸಂಖ್ಯೆ
ಪ್ರವರ್ಗ 1ಎ34,96,638
ಪ್ರವರ್ಗ 1ಬಿ73,92,313
ಪ್ರವರ್ಗ 2ಎ77,78,209
ಪ್ರವರ್ಗ 2ಬಿ75,25,880
ಪ್ರವರ್ಗ 3ಎ72,99,577
ಪ್ರವರ್ಗ 3ಬಿ81,37,536

ಮುಸ್ಲಿಮರು, ಲಿಂಗಾಯತರು, ಒಕ್ಕಲಿಗರು ಹಾಗೂ ಇತರರ ಜನಸಂಖ್ಯೆ:

ಸಮುದಾಯದ ಹೆಸರುಅಂದಾಜು ಜನಸಂಖ್ಯೆ
ಮುಸ್ಲಿಂ70 ಲಕ್ಷ
ಲಿಂಗಾಯತರು65 ಲಕ್ಷ
ಒಕ್ಕಲಿಗರು60 ಲಕ್ಷ
ಕುರುಬರು45 ಲಕ್ಷ
ಈಡಿಗರು15 ಲಕ್ಷ
ಪರಿಶಿಷ್ಟ ಪಂಗಡ40.45 ಲಕ್ಷ
ವಿಶ್ವಕರ್ಮ15 ಲಕ್ಷ
ಬೆಸ್ತರು15 ಲಕ್ಷ
ಬ್ರಾಹ್ಮಣ14 ಲಕ್ಷ
ಗೊಲ್ಲ10 ಲಕ್ಷ
ಮಡಿವಾಳ6 ಲಕ್ಷ
ಕುಂಬಾರ5 ಲಕ್ಷ
ಸವಿತಾ ಸಮಾಜ5 ಲಕ್ಷ

Source : Vijayakarnataka

 ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 9

Leave a Reply

Your email address will not be published. Required fields are marked *