IPL 2025 – ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ಸೋಲಿನ ಕಹಿಯುಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ಹಳಿಗ ಮರಳಿದೆ. ಜೊತೆಗೆ ಅಂಕಪಟ್ಟಿಯಲ್ಲೂ 5ನೇ ಸ್ಥಾನದಿಂದ 3ನೇ ಸ್ಥಾನಕ್ಕೇರಿದೆ. ಬೌಲರ್ ಗಳ ಸಾಂಘಿಕ ಪ್ರದರ್ಶನದಿಂದಾಗಿ ಎದುರಾಳಿ ತಂಡವನ್ನು 174 ರನ್ ಗಳಿಗೆ ನಿಯಂತ್ರಿಸಿದ ರಜತ್ ಪಾಟೀದಾರ್ ಪಡೆ ಈ ಮೊತ್ತವನ್ನು ನಿರಾಯಾಸವಾಗಿ ತಲುಪಿತು. ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟವಾಡುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನ ಅವಕಾಶಗಳವನ್ನು ಕಸಿದುಕೊಂಡರು.

ಹೈಲೈಟ್ಸ್:
- ರಾಜಸ್ಥಾನ ತಂಡವನ್ನು 9 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್ ನಿಂದ ಆರ್ ಸಿಬಿಗೆ ಗೆಲುವಿಗೆ 174 ರನ್ ಗುರಿ
- ಫಿಲ್ ಸಾಲ್ಟ್- ವಿರಾಟ್ ಕೊಹ್ಲಿ ಅವರ ಉತ್ತಮ ಜೊತೆಯಾಟದ ನೆರವಿನಿಂದ ಜಯಭೇರಿ ಬಾರಿಸಿದ ಪಾಟೀದಾರ್ ಪಡೆ
ಬೌಲರ್ ಗಳ ಬಿಗು ದಾಳಿ ಜೊತೆಗೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಉತ್ತಮ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ಅನ್ನು 9 ವಿಕೆಟ್ ಗಳಿಂದ ಸೋಲಿಸಿದೆ. ಈ ಗೆಲುವಿನ ಮೂಲಕ ರಜತ್ ಪಾಟೀದಾರ್ ಬಳಗ ಅಂಕಪಟ್ಟಿಯಲ್ಲಿ 5 ನೇ ಸ್ಥಾನದಿಂದ ಮತ್ತೆ 3ನೇ ಸ್ಥಾನಕ್ಕೆ ಜಿಗಿದಿದೆ. ಜೊತೆಗೆ ಕಳೆದ 14 ವರ್ಷಗಳಲ್ಲಿ ಹಸಿರು ಜೆರ್ಸಿ ತೊಟ್ಟು ಆರ್ ಸಿಬಿ ಗೆದ್ದ ಐದನೇ ಗೆಲುವು ಇದಾಗಿದೆ.
ಜೈಪುರದ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 174 ರನ್ ಗಳ ಗುರಿ ಪಡೆದ ರಾಯಲ್ ಚಾಲೆಂಜರ್ಸ್ ಕೇವಲ 1 ವಿಕೆಟ್ ಕಳೆದುಕೊಂಡು ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಜಯಶಾಲಿಯಾಯಿತು. ರಾಯಲ್ ಚಾಲೆಂಜರ್ಸ್ ಪರ ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅವರು 92 ರನ್ ಗಳ ಜೊತೆಯಾಟವಾಡಿದ್ದು ಮಹತ್ವದ್ದಾಯಿತು.
ಸಾಲ್ಟ್- ವಿರಾಟ್ ಉತ್ತಮ ಆರಂಭ
ಫಿಲ್ ಸಾಲ್ಟ್ ಅವರು ಕೇವಲ 33 ಎಸೆತಗಳಿಂದ 5 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದ 62 ರನ್ ಗಳಿಸಿದರು. ವಿರಾಟ್ ಕೊಹ್ಲಿ ಅವರು 45 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ ಅಜೇಯ 62 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್ ಗೆ ಕೇವಲ 8.4 ಓವರ್ ಗಳಲ್ಲಿ 92 ರನ್ ಜೊತೆಯಾಟವಾಡಿದರು. ಹೀಗಾಗಿ ಎದುರಾಳಿ ಬೌಲರ್ ಗಳಿಗೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಫಿಲ್ ಸಾಲ್ಟ್ ವಿಕೆಟ್ ಪತನದ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಟವಾಡಿದ ಕರ್ನಾಟಕದ ದೇವದತ್ ಪಡಿಕ್ಕಲ್ ಅವರು ಅಜೇಯ 40 ರನ್ ಗಳಿಸಿ ಉಪಯುಕ್ತ ಯೋಗದಾನ ನೀಡಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೌಲರ್ ಗಳು 173 ರನ್ ಗಳಿಗೆ ನಿಯಂತ್ರಿಸಿದರು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಸ್ಫೋಟಕ ಅರ್ಧಶತಕ ಗಳಿಸಿದರು. ಕೇವಲ 47 ಎಸೆತಗಳಿಂದ 10 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 75 ರನ್ ಗಳಿಸಿದರು. ಆದರೆ ಅವರು ಒದಗಿಸಿಕೊಟ್ಟ ಉತ್ತಮ ಆರಂಭವನ್ನು ಉಳಿದ ಆಟಗಾರರು ಮುಂದುವರಿಸುವಲ್ಲಿ ವಿಫಲರಾದರು. ರಿಯಾನ್ ಪರಾಗ್ (30) ಮತ್ತು ಧ್ರುವ್ ಜ್ಯುರೆಲ್ (35) ಸರ್ವ ಪ್ರಯತ್ನ ನಡೆಸಿದರೂ ತಂಡವನ್ನು ದೊಡ್ಡ ಮೊತ್ತದಡೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿಲ್ಲ. ಆರ್ ಸಿಬಿ ಪರ ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್ವುಡ್ ಮತ್ತು ಕೃನಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
- ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 173/4, ಯಶಸ್ವಿ ಜೈಸ್ವಾಲ್ 75, ಧ್ರುವ್ ಜ್ಯುರೆಲ್ 35, ರಿಯಾನ್ ಪರಾಗ್ 30, ಜೋಶ್ ಹ್ಯಾಜಲ್ವುಡ್ 32ಕ್ಕೆ 1, ಕೃನಾಲ್ ಪಾಂಡ್ಯ 29ಕ್ಕೆ 1
- ರಾಯಲ್ ಚಾಲೆಂಜರ್ಸ್ 17.3 ಓವರ್ ಗಳಲ್ಲಿ 175/1, ಫಿಲ್ ಸಾಲ್ಟ್ 65, ವಿರಾಟ್ ಕೊಹ್ಲಿ ಅಜೇಯ 62, ದೇವದತ್ ಪಡಿಕ್ಕಲ್ ಅಜೇಯ 40, ಕುಮಾರ್ ಕಾರ್ತಿಕೇಯ 25ಕ್ಕೆ 1.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1