ಬಿಜೆಪಿ ಕಚೇರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಪ್ಪ ನಮನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 14 : ಡಾ. ಬಿ.ಆರ್ ಅಂಬೇಡ್ಕರ್ ಅವರು ಭಾರತದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಮಾನವ ಘನತೆ ಮತ್ತು ಹಕ್ಕುಗಳಿಗಾಗಿ
ಸುಮಾರು ನಾಲ್ಕು ದಶಕಗಳ ಕಾಲ ಹೋರಾಡಿದ ಮಹಾನ್ ನಾಯಕ, ಅವರ ಚಿಂತನೆಗಳು ಜಗತ್ತಿನ ಮಾನವ ಕುಲಕ್ಕೆ ಸರ್ವಕಾಲಕ್ಕೂ ಪ್ರಸ್ತುತವಾದಂತಹವುಗಳಾಗಿವೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.

ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್ ಅಂಬೇಡ್ಕರ್
ಅವರು ೧೩೪ನೇ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದ
ಅವರು, ಅಂಬೇಡ್ಕರ್ ರವರು ಜೀವನದಲ್ಲಿ ತಮೆಗ ಆದ ಅವಮಾನ ಬೇರೆ ಯಾರಿಗೂ ಆಗಬಾರದೆಂದು ಸಂವಿಧಾನದಲ್ಲಿ ಎಲ್ಲರಿಗೂ
ಸಹಾ ಸಮಾನವಾದ ಅವರಕಾಶವನ್ನು ನೀಡಿದ್ದಾರೆ. ಇದರಿಂದಾಗಿ ಭಾರತದಲ್ಲಿ ಬಲಿಷ್ಠವಾದ ಸಂವಿಧಾನ ಇದೆ, ಇದರ ಮೂಲಕ
ಎಲ್ಲರಿಗೂ ನ್ಯಾಯ ಸಿಗುವಂತ ವಾತಾವರಣ ಸೃಷ್ಟಿಯಾಗಿದೆ. ಅಂಬೇಡ್ಕರ್ ರವರ ಜೀವನದಲ್ಲಿ ಕಾಂಗ್ರೆಸ್ ಬಹಳಷ್ಟು ಅನ್ಯಾಯವನ್ನು
ಮಾಡಿದೆ ಅವರು ಮರಣದಲ್ಲಿಯೂ ಸಹಾ ಕಾಂಗ್ರೆಸ್ ತಮ್ಮ ಬುದ್ದಿಯನ್ನು ತೋರಿಸಿದೆ. ಅವರ ಹೆಣವನ್ನು ಉಳಲು ಸಹಾ
ದೆಹಲಿಯಲ್ಲಿ ಜಾಗವನ್ನು ಅಂದಿನ ಕಾಂಗ್ರೆಸ್ ಸರ್ಕಾರ ನೀಡಲಿಲ್ಲ ಇದನ್ನು ದಲಿತರಿಗೆ ತಿಳಿಸುವಂತ ಕಾರ್ಯ ಬಿಜೆಪಿ
ಕಾರ್ಯಕರ್ತರಿಂದ ಆಗಬೇಕಿದೆ ಎಂದರು.

ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಅವರು ರಚನೆ ಮಾಡಿದ ಸಂವಿಧಾನದಿಂದ ಇಂದು ಎಲ್ಲರು ಉತ್ತಮವಾದ ಜೀವನವನ್ನು ನಡೆಸಲು ಸಾಧ್ಯವಾಗಿದೆ. ಅಂದಿನ ಕಾಲದಲ್ಲಿ ರಾಜರು ಆಡಳಿತವನ್ನು ನಡೆಸುತ್ತಿದ್ದು ಎಲ್ಲರನ್ನು ಒಟ್ಟುಗೂಡಿ ಒಂದು ದೇಶವನ್ನಾಗಿ ಮಾಡಬೇಕೆಂಬುದು ಅವರ ಕನಸಾಗಿತ್ತು ಅದನ್ನು ಸಂವಿಧಾನ ರಚನೆ ಮಾಡುವುದರ ಮೂಲಕ ಈಡೇರಿಸಿದ್ದಾರೆ. ಡಾ ಅಂಬೇಡ್ಕರರು ತಾವು ಸ್ವತಃ ಮೊದಲು ಭಾರತೀಯರು ಕೊನೆಗೂ ಭಾರತೀಯರೆಂದ ಭಾರತೀಯತ್ವಕ್ಕೆ ತಾಕದಂತೆ ಹೊರತು ಅಂಬೇಡ್ಕರ್ ರವರನ್ನು ನೋಡುವ ಪರಿಕಲ್ಪನೆ ಬದಲಾಗದು ಆದರೆ ಅದನ್ನು ಬದಲಿಸುವ ಶಕ್ತಿ ಇಂದಿನ ಯುವಕರಲಿದೆ ಮತ್ತು ಅಂಬೇಡ್ಕರ್ ಅವರ ಸೈದ್ಧಾಂತಿಕ ಮಾರ್ಗ ಅನುಸರಿಸುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ. ಎಂದರು.

ಕಾರ್ಯದರ್ಶೀ ಮೋಹನ್ ಕುಮಾರ್ ಮಾತನಾಡಿ, ಅಂಬೇಡ್ಕರ್ ರವರು ಬಾಲ್ಯದಿಂದಲೇ ಕಷ್ಟಗಳನ್ನು ಅನುಭವಿಸುವುದರ ಮೂಲಕ
ಬೇರೆಯವರಯು ಸಹಾ ಇದನ್ನು ಅನುಭವಿಸಬಾರದೆಂದು ಸಂವಿಧಾನದಲ್ಲಿ ಎಲ್ಲರಿಗೂ ಸಹಾ ಅನುಕೂಲವಾಗುವಂತ ಕಾಯ್ದೆಗಳನ್ನು
ರೂಪಿಸಿದ್ದಾರೆ. ಭೇರೆಯವರು ಬರೀ ಮಾತಿನಲ್ಲಿ ಹೇಳಿದರೆ ಅಂಬೇಡ್ಕರ್ ರವರ ಲಿಖಿತವಾಗಿ ಕಾಯ್ದೆಯ ರೂಪದಲ್ಲಿ ಸೌಲಭ್ಯವನ್ನು
ನೀಡಿದ್ದಾರೆ. ಇವರು ಮಾಡಿದ ಕಾನೂನು ಎಲ್ಲರಿಗೂ ಸಹಾ ವರದಾನವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಮುರಳಿ ಮಾತನಾಡಿ, ಇಂತಹ ಮಹಾನ್ ಮಾನವತವಾದಿ, ದಾರ್ಶನಿಕ, ವಿಶ್ವರತ್ನ ಬಾಬಾ ಸಾಹೇಬ್
ಅಂಬೇಡ್ಕರ್ ರವರ ಜೀವನವು ಯುಗದ ಚರಿತ್ರೆಯಾಗಿದೆ ಹಾಗೂ ಸ್ಫೂರ್ತಿಯ ಚರಿತ್ರೆಯಾಗಿದೆ. ಅಂಬೇಡ್ಕರ್ ಭಾರತದ
ಸಾಮಾಜಿಕ, ರಾಜಕೀಯ, ಧಾರ್ಮಿಕ ಚಿಂತನಗಳ ಮೇಲೆ ಅಂಬೇಡ್ಕರ್ ಅವರ ವ್ಯಕ್ತಿತ್ವ ಕಾಣಬಹುದು. ಕಾಂಗ್ರೆಸ್ ಅಂಬೇಡ್ಕರ್
ರವರ ಬಗ್ಗೆ ಮೊಸೆಳೆ ಕಣ್ಣಿರನ್ನು ಹಾಕತ್ತಿದೆ ಚುನಾವಣೆ ಸಮಯದಲ್ಲಿ ಮಾತ್ರ ಅವರ ಹೆಸರನ್ನು ಬಳಕೆ ಮಾಡಿ ಮತವನ್ನ
ಪಡೆಯುತ್ತಿದೆ ತದ ನಂತರ ಅವರನ್ನು ಮರೆಯುತ್ತಿದೆ. ನೆಹರುರವರ ಕುಟುಂಬಕ್ಕೆ ಅನೂಕೂಲವಾಗಲೆಂದು ಸಂವಿಧಾನವನ್ನು ೭೬
ಬಾರಿ ತಿದ್ದುಪಡಿಯನ್ನು ಮಾಡಿದ್ದಾರೆ. ಅಂಬೇಡ್ಕರ್‌ರವರು ಯಾವ ಕಾರಣಕ್ಕೂ ಕೆಲವೊಂದು ತಿದ್ದುಪಡಿಯನ್ನು ಮಾಡಬಾರದೆಂದು
ಹೇಳಿದ್ದರೂ ಅದನ್ನೇ ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ತಿದ್ದುಪಡಿಯನ್ನು ಮಾಡಿದೆ ಇದನ್ನು ನಮ್ಮ ಕಾರ್ಯಕರ್ತರು ದಲಿತರಿಗೆ
ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಶ್ಯಾಮಲ ಶಿವಪ್ರಕಾಶ್, ಕೆ.ಮಲ್ಲಿಕಾರ್ಜನ್, ಶ್ರೀಮತಿ ಸೌಭಾಗ್ಯ
ಬಸವರಾಜನ್, ಲೋಕೇಶ್ ನಾಗರಾಜ್, ವೆಂಕಟೇಶ್ ಯಾದವ್, ನಂದಿನಾಗರಾಜ್, ಪರಶುರಾಮ್, ಪಾಂಡು, ಶಿವಣ್ಣಚಾರ್,
ಬಸಮ್ಮ, ಶಾಂತಮ್ಮ, ಗಾಯತ್ರಿ, ಅರುಣ್ ಕುಮಾರಿ, ಕಿರಣ, ಲಿಂಗರಾಜು, ಛಲವಾದಿ ತಿಪ್ಪೇಸ್ವಾಮಿ ದಗ್ಗೆ ಶಿವಪ್ರಕಾಶ್
ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *