ಚೆನ್ನೈ ಸೂಪರ್ ಕಿಂಗ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ. ಧೋನಿ 11 ಎಸೆತಗಳಲ್ಲಿ 26 ರನ್ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಜಯದ ಹಾದಿಗೆ ಮರಳಿದೆ. ಲಖನೌದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2ನೇ ಗೆಲುವು ಪಡೆದಿದೆ. ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 167ರನ್ಗಳ ಸಾಧಾರಣ ಗುರಿಯನ್ನ ಚೆನ್ನೈ ಸೂಪರ್ ಕಿಂಗ್ ಪ್ರಯಾಸದಿಂದ ಕೊನೆಯ ಓವರ್ನಲ್ಲಿ ತಲುಪಿತು. ನಾಯಕ ಧೋನಿ ಕೊನೆಯಲ್ಲಿ ಅಬ್ಬರಿಸಿ ಕೈತಪ್ಪುತ್ತಿದ್ದ ಗೆಲುವನ್ನ ಸಿಎಸ್ಕೆ ಕಡೆಗೆ ತಿರುಗಿಸಿದರು. 19. 3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಧೋನಿ ಕೇವಲ 11 ಎಸೆತಗಳಲ್ಲಿ26 ರನ್ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
167ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಸಿಎಸ್ಕೆ ಉತ್ತಮ ಆರಂಭ ಪಡೆದುಕೊಂಡಿತು. ಇಂದೆ ತಂಡದಲ್ಲಿ ಅವಕಾಶ ಪಡೆದಿದ್ದ ಶೇಖ್ ರಶೀದ್ ಉತ್ತಮ ಆರಂಭ ಒದಗಿಸಿಕೊಟ್ಟರು. ರಚಿನ್ ರವೀಂದ್ರ ಜೊತೆಗೆ ಮೊದಲ ವಿಕೆಟ್ಗೆ 4.5 ಓವರ್ಗಳಲ್ಲಿ52 ರನ್ ಕಲೆಯಾಕಿ ಭದ್ರ ಬುನಾದಿಯಾಕಿದರು. 19 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 27 ರನ್ಗಳಿಸಿ ಔಟ್ ಆದರು. ಮೊದಲ ವಿಕೆಟ್ ಬಳಿಕ ಸಿಎಸ್ಕೆ ಪವರ್ ಪ್ಲೇನಲ್ಲಿ ಸಿಕ್ಕಂತಹ ಆರಂಭವನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ತ್ರಿಪಾಠಿ 10 ಎಸೆತಗಳಲ್ಲಿ ಕೇವಲ 9 ರನ್ಗಳಿಸಿದರೆ, ರವೀಂದ್ರ ಜೇಡೇಜಾ ದುಬೆಗಿಂತ ಮೇಲಿನ ಕ್ರಮಾಂಕಕ್ಕೆ ಬಡ್ತಿ ಪಡೆದರೂ ಕೇವಲ 7 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ವಿಜಯ್ ಶಂಕರ್ ಆಟ 9ಕ್ಕೆ ಸೀಮಿತವಾಯಿತು.
ಗೆಲುವಿನ ಗಡಿ ದಾಟಿಸಿದ ಧೋನಿ-ದುಬೆ
ಧೋನಿ ಬರುವವರೆಗೂ ರನ್ಗಳಿಸಲು ಪರದಾಡುತ್ತಿದ್ದ ದುಬೆ ಧೋನಿ ಬಂದ ನಂತರ ಲಯಕ್ಕೆ ಮರಳಿದರು. ಧೋನಿ ಕೇವಲ 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 26 ರನ್ಗಳಿಸಿದರೆ, ದುಬೆ 37 ಎಸೆಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 43 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಸತತ 5 ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಇಂದು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ಗೆ ಇಳಿದ ಲಖನೌ ತಂಡ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿರು. ಉತ್ತಮ ಫಾರ್ಮ್ನಲ್ಲಿದ್ದ ಐಡೆನ್ ಮಾರ್ಕ್ರಮ್ (6) ಹಾಗೂ ನಿಕೋಲಸ್ ಪೂರನ್ (8) ಕ್ರಮವಾಗಿ ಖಲೀಲ್ ಅಹ್ಮದ್ ಹಾಗೂ ಕಾಂಬೋಜ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ನಂತರ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್ 33 ಎಸೆತಗಳಲ್ಲಿ 50 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಇಂದು ತಮ್ಮ ನೈಜ ಆಟವನ್ನು ಆಡಲು ವಿಫಲರಾದ ಮಾರ್ಷ್ 25 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 30 ರನ್ಗಳಿಸಿ ಜಡೇಜಾ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಬದೋನಿ ನಾಯಕನ ಜೊತೆ ಸೇರಿ 32 ರನ್ ಸೇರಿಸಿದರು. ಬದೋನಿ 17 ಎಸೆತಗಳಲ್ಲಿ 1 ಬೌಂಡರಿ, ಸಿಕ್ಸರ್ ಸಹಿತ 22 ರನ್ಗಳಿಗೆ ಸೀಮಿತವಾದರು.

5ನೇ ವಿಕೆಟ್ಗೆ ಪಂತ್ ಜೊತೆಗೂಡಿ ಅಬ್ದುಲ್ ಸಮದ್ ಅಜೇಯ ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ 170ಕ್ಕೆ ಹೆಚ್ಚಿಸಿದರು. ರಿಷಭ್ ಪಂತ್ ಎಸೆತಗಳಲ್ಲಿ 5 ಬೌಂಡರಿ, 5ಸಿಕ್ಸರ್ಗಳ ಸಹಿತ ಅಜೇಯ 70 ರನ್ಗಳಿಸಿದರೆ, ಸಮದ್ ಎಸೆತಗಳಲ್ಲಿ 3 ಸಿಕ್ಸರ್ಗಳ ಸಹಿತ ಅಜೇಯ 30 ರನ್ಗಳಿಸಿದರು.
ಸಿಎಸ್ಕೆ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಎಲ್ಎಸ್ಜಿ ಒಂದು ಬದಲಾವಣೆ ಮಾಡಲಿದೆ. ಸಿಎಸ್ಕೆ ತಂಡ ಆರ್ ಅಶ್ವಿನ್ ಮತ್ತು ಡೆವೊನ್ ಕಾನ್ವೇ ಅವರನ್ನು ಕೈಬಿಟ್ಟಿದೆ. ಅವರ ಸ್ಥಾನದಲ್ಲಿ ಜೇಮೀ ಓವರ್ಟನ್ ಮತ್ತು ಶೇಖ್ ರಶೀದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
Source : News18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1