ಇಂದು ಆಕಾಶದಲ್ಲಿ ನಕ್ಷತ್ರಗಳ ಸುರಿಮಳೆ: 1 ಗಂಟೆಯಲ್ಲಿ 20ಕ್ಕೂ ಹೆಚ್ಚು ಉಲ್ಕೆಗಳು ಗೋಚರ: ಏನಿದು ಖಗೋಳ ವಿಸ್ಮಯ?

SHOOTING STARS EVENT SKY : ಏಪ್ರಿಲ್ 22 ರ ಮಧ್ಯರಾತ್ರಿಯಿಂದ ಏಪ್ರಿಲ್ 23 ರ ಮುಂಜಾನೆಯವರೆಗೆ ಹಲವು ಉಲ್ಕೆಗಳನ್ನು ಏಕಕಾಲಕ್ಕೆ ಗೋಚರಿಸುತ್ತವೆ ಮತ್ತು ಬರಿಗಣ್ಣಿನಿಂದ ನೀವು ಅವುಗಳನ್ನು ನೋಡಿ ಆನಂದಿಸಬಹುದು.

ಏಪ್ರಿಲ್ 22ರ ರಾತ್ರಿ ಆಕಾಶದಲ್ಲಿ ಅದ್ಭುತ ಖಗೋಳ ವಿಸ್ಮಯವೊಂದು ಗೋಚರಿಸಲಿದೆ. ಅನೇಕ ಶೂಟಿಂಗ್ ಸ್ಟಾರ್‌ಗಳು ಏಕಕಾಲದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿಕೊಳ್ಳಲಿವೆ. ಒಂದು ಗಂಟೆಯವರೆಗೆ ಸುಮಾರು 10 ರಿಂದ 20 ಉಲ್ಕೆಗಳನ್ನು ಕಾಣಬಹುದಾಗಿದೆ. ಇದು ಮಂಗಳವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿ ಮತ್ತು ಏಪ್ರಿಲ್ 23ರ ಮುಂಜಾನೆಯವರೆಗೂ ಮುಂದುವರಿಯಬಹುದು.

ಈ ವಿಶೇಷ ದೃಶ್ಯವು ಜನರನ್ನು ರೋಮಾಂಚನಗೊಳಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ನಕ್ಷತ್ರಗಳ ಮಳೆ ಆಗುವುದು ಏಕೆ , ಅಂತಹ ಪರಿಸ್ಥಿತಿ ಯಾವಾಗ ಉಂಟಾಗುತ್ತದೆ, ಅವುಗಳನ್ನು ಹೇಗೆ ನೋಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

meteor shower Amazing astronomical event will be seen in sky Know how and when you will be able to see it Uttar Pradesh Gorakhpur Planetarium Astronomer Amar Pal Singh

ಗೋರಖ್‌ಪುರದ ವೀರ್ ಬಹದ್ದೂರ್ ಸಿಂಗ್ ತಾರಾಲಯದ (ಪ್ಲಾನೆಟೋರಿಯಂ) ಖಗೋಳಶಾಸ್ತ್ರಜ್ಞ ಅಮರ್ ಪಾಲ್ ಸಿಂಗ್ ಮಾತನಾಡಿ, ಸೌರವ್ಯೂಹದ ಗ್ರಹಗಳ ನಡುವಣ ನಿರ್ವಾತ ಪ್ರದೇಶದಲ್ಲಿ ಅಸಂಖ್ಯಾತ ಸಣ್ಣ ಸಣ್ಣ ಉಂಡೆಗಳಂತಹ ಕ್ಷುದ್ರಗ್ರಹಗಳಿವೆ. ಅಂತಹ ಯಾವುದೇ ಕಣವು ಭೂಮಿಯ ಗುರುತ್ವಾಕರ್ಷಣೆಯ ಅಡಿಯಲ್ಲಿ ಬಂದಾಗ ಮತ್ತು ಹೆಚ್ಚಿನ ವೇಗದಲ್ಲಿ ವಾತಾವರಣದ ಘರ್ಷಣೆಯಿಂದಾಗಿ ರಾತ್ರಿಯಲ್ಲಿ ಸ್ವಲ್ಪ ಸಮಯದವರೆಗೆ ಹೊಳೆಯುತ್ತಾ ಮಾಯವಾಗುತ್ತವೆ. ಈ ವಿದ್ಯಮಾನವನ್ನೇ ಉಲ್ಕೆ ಅಥವಾ ಶೂಟಿಂಗ್ ನಕ್ಷತ್ರ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದ್ದಾರೆ.

meteor shower Amazing astronomical event will be seen in sky Know how and when you will be able to see it Uttar Pradesh Gorakhpur Planetarium Astronomer Amar Pal Singh

ಏನಿದು ಉಲ್ಕಾಪಾತ; ಖಗೋಳಶಾಸ್ತ್ರಜ್ಞರು ಉಲ್ಕಾಪಾತವು ಯಾವುದಾದರೂ ಧೂಮಕೇತು ಅಥವಾ ಕ್ಷುದ್ರ ಗ್ರಹಗಳಿಗೆ ಸಂಬಂಧಿಸಿದೆ ಎಂದು ಹೇಳಿದರು. ಧೂಮಕೇತುಗಳು ಧೂಳಿನ ಕಣಗಳಾಗಿದ್ದು ಮಂಜುಗಡ್ಡೆಯಿಂದ ಮಾಡಿದ ಅನಿಲಗಳ ರಚನೆಗಳಾಗಿವೆ. ಇವುಗಳು ದೀರ್ಘ ಅಂಡಾಕಾರದ ಕಕ್ಷೆಗಳಲ್ಲಿ ಸೂರ್ಯನ ಸುತ್ತ ಪ್ರದಕ್ಷಣೆ ಹಾಕುತ್ತಿರುತ್ತವೆ. ಅವುಗಳಿಂದ ಹೊರಸೂಸಲ್ಪಟ್ಟ ಕಣಗಳು ಅವುಗಳ ಕಕ್ಷೆಯಲ್ಲಿ ಸುತ್ತುತ್ತಲೇ ಇರುತ್ತವೆ. ಭೂಮಿಯು ತನ್ನ ವಾರ್ಷಿಕ ಚಲನೆಯ ಸಮಯದಲ್ಲಿ ಧೂಮಕೇತುವಿನ ಹಾದಿಯಲ್ಲಿ ಹಾದುಹೋದಾಗ, ಧೂಮಕೇತುವಿನ ಆ ಕಣಗಳು ಭೂಮಿಯ ವಾತಾವರಣದಲ್ಲಿನ ಘರ್ಷಣೆಯಿಂದಾಗಿ ಉರಿಯಲು ಪ್ರಾರಂಭಿಸುತ್ತವೆ. ಇದರಿಂದಾಗಿ ಅವು ಉಲ್ಕೆಗಳಂತೆ ಹೊಳೆಯುತ್ತಿರುತ್ತವೆ.

meteor shower Amazing astronomical event will be seen in sky Know how and when you will be able to see it Uttar Pradesh Gorakhpur Planetarium Astronomer Amar Pal Singh

ಈ ವಿದ್ಯಮಾನವನ್ನು ಖಗೋಳಶಾಸ್ತ್ರದ ಭಾಷೆಯಲ್ಲಿ ಉಲ್ಕಾಪಾತ ಅಥವಾ ಕೇತುವರ್ಷ ಎಂದು ಕರೆಯಲಾಗುತ್ತದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ. ಸಾಮಾನ್ಯ ಜನರು ಇದನ್ನು ನಕ್ಷತ್ರಗಳು ಬೀಳುವ ವಿದ್ಯಮಾನ ಎಂದು ತಿಳಿದಿದ್ದು ಅದನ್ನು ನೋಡಬಾರದು ಎಂದು ಹೇಳುತ್ತಾರೆ.

meteor shower Amazing astronomical event will be seen in sky Know how and when you will be able to see it Uttar Pradesh Gorakhpur Planetarium Astronomer Amar Pal Singh

ಲಿರಿಡ್ ಉಲ್ಕಾಪಾತ ಎಂದರೇನು: ಖಗೋಳಶಾಸ್ತ್ರಜ್ಞರು ಲಿರಿಡ್ ಉಲ್ಕಾಪಾತವು ಖಗೋಳ ವಿದ್ಯಮಾನವಾಗಿದೆ ಎಂದು ಹೇಳಿದ್ದಾರೆ. ಇದು ಪ್ರತಿ ವರ್ಷ ಏಪ್ರಿಲ್ ಕೊನೆಯಲ್ಲಿ ಸಂಭವಿಸುತ್ತದೆ. ಈ ಉಲ್ಕಾಪಾತವು ಭೂಮಿಯ ವಾತಾವರಣದಲ್ಲಿರುವ ಕಾಮೆಟ್ ಥ್ಯಾಚರ್ (C/1861G1) ಅವಶೇಷಗಳ ಕಣಗಳಿಂದ ಉಂಟಾಗುತ್ತದೆ. ಧೂಮಕೇತು ಥ್ಯಾಚರ್ 415 ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಸುತ್ತುತ್ತದೆ. ಈ ಧೂಮಕೇತು 2276 ರಲ್ಲಿ ಮತ್ತೆ ಭೂಮಿಯ ಮೇಲೆ ಗೋಚರಿಸಲಿದೆ.

meteor shower Amazing astronomical event will be seen in sky Know how and when you will be able to see it Uttar Pradesh Gorakhpur Planetarium Astronomer Amar Pal Singh

ವಾಸ್ತವವಾಗಿ ಈ ಉಲ್ಕಾಪಾತವು ಪ್ರತಿ ವರ್ಷ ಏಪ್ರಿಲ್ 16 ರಿಂದ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 25 ರಿಂದ 30 ರವರೆಗೆ ಗೋಚರಿಸುತ್ತದೆ. ಈ ಬಾರಿ ಏಪ್ರಿಲ್ 22ರ ಮಧ್ಯರಾತ್ರಿಯಿಂದ ಏಪ್ರಿಲ್ 23 ರ ಮುಂಜಾನೆಯವರೆಗೆ ಉತ್ತುಂಗದಲ್ಲಿರುತ್ತದೆ. ಈ ಸಮಯದಲ್ಲಿ ಸುಮಾರು 10 ರಿಂದ 20 ಉಲ್ಕೆಗಳು ಒಂದು ಗಂಟೆಯವರೆಗೆ ಗೋಚರಿಸುತ್ತವೆ. ಲಿರಿಡ್ ಉಲ್ಕಾಪಾತವು ತುಂಬಾ ಪ್ರಕಾಶಮಾನವಾದ ಉಲ್ಕಾಪಾತವಲ್ಲ. ಆದ್ದರಿಂದ, ಅದನ್ನು ವೀಕ್ಷಿಸಲು ಸ್ವಲ್ಪ ಎಚ್ಚರಿಕೆಯ ಅಗತ್ಯವಿದೆ.

meteor shower Amazing astronomical event will be seen in sky Know how and when you will be able to see it Uttar Pradesh Gorakhpur Planetarium Astronomer Amar Pal Singh

ಪ್ರಕಾಶಮಾನವಾದ ನಕ್ಷತ್ರ ವೇಗಾ: ಪ್ರತಿ ವರ್ಷ ಏಪ್ರಿಲ್‌ನಲ್ಲಿ ಸಂಭವಿಸುವ ಲಿರಿಡ್ ಉಲ್ಕಾಪಾತವನ್ನು ಲೈರಾ ನಕ್ಷತ್ರಪುಂಜ ಎಂದೂ ಕರೆಯಲಾಗುತ್ತದೆ. ಹಿಂದಿಯಲ್ಲಿ ಇದನ್ನು ವೀಣಾ ನಕ್ಷತ್ರಪುಂಜ ಎಂದು ಕರೆಯಲಾಗುತ್ತದೆ. ಇದು ಚಿಕ್ಕದಾದ ಆದರೆ ಗುರುತಿಸಬಹುದಾದ ನಕ್ಷತ್ರಪುಂಜವಾಗಿದೆ. ಆಕಾಶವು ಶುಭ್ರವಾಗಿರುವ ಮಧ್ಯರಾತ್ರಿಯಲ್ಲಿ ಆಕಾಶದ ಈಶಾನ್ಯ ದಿಕ್ಕಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಪ್ರಕಾಶಮಾನವಾದ ನಕ್ಷತ್ರವೇ ಈ ವೆಗಾ. ಇದು ಆಕಾಶದಲ್ಲಿ ಐದನೇ ಪ್ರಕಾಶಮಾನವಾದ ನಕ್ಷತ್ರವಾಗಿದೆ. ಈ ಉಲ್ಕಾಪಾತವು ಅದೇ ಲೈರಾ ನಕ್ಷತ್ರಪುಂಜದಿಂದ ಬರಲಿದೆ. ಅದಕ್ಕಾಗಿಯೇ ಈ ಉಲ್ಕಾಪಾತವನ್ನು ಲಿರಿಡ್ ಉಲ್ಕಾಪಾತ ಎಂದು ಕರೆಯಲಾಗುತ್ತದೆ. ಅದು ಬರುವ ನಕ್ಷತ್ರಪುಂಜವನ್ನು ಆಕಾಶದಲ್ಲಿ ವಿಕಿರಣ ಬಿಂದು ಎಂದೂ ಸಹ ಕರೆಯಲಾಗುತ್ತದೆ.

meteor shower Amazing astronomical event will be seen in sky Know how and when you will be able to see it Uttar Pradesh Gorakhpur Planetarium Astronomer Amar Pal Singh

ಯಾವ ದಿಕ್ಕಿನಿಂದ ಈ ವಿದ್ಯಮಾನ ನೋಡಬಹುದು?: ಈ ವಿದ್ಯಮಾನದ ಭಾಗವಾಗಿ ನೀವು ಒಂದು ಗಂಟೆಯಲ್ಲಿ ಕನಿಷ್ಠ 10 ರಿಂದ 20 ಉಲ್ಕೆಗಳನ್ನು ನೋಡಬಹುದು. ಇವುಗಳು ಸೆಕೆಂಡಿಗೆ 47 ಕಿಲೋಮೀಟರ್ ವೇಗದಲ್ಲಿ ಭೂಮಿಯ ಮೇಲ್ಮೈಯಿಂದ ಸುಮಾರು 100 ಕಿಲೋಮೀಟರ್ ಎತ್ತರದಲ್ಲಿ ಹೊಳೆಯುವುದನ್ನು ಕಾಣಬಹುದು. ಈ ಏಪ್ರಿಲ್‌ನ ಉಲ್ಕಾಪಾತಕ್ಕೆ ಪ್ರಮುಖ ಕಾರಣ ಕಾಮೆಟ್ ಥ್ಯಾಚರ್ (C/1861G1).

ಬೀಳುವ ನಕ್ಷತ್ರಗಳನ್ನು ನೀವು ಹೀಗೆ ನೋಡಬಹುದು: ಉಲ್ಕಾಪಾತವನ್ನು ನೋಡಲು ಯಾವುದೇ ವಿಶೇಷ ಅಥವಾ ಹೆಚ್ಚುವರಿ ರೀತಿಯ ದೂರದರ್ಶಕ ಅಥವಾ ಇತರ ಉಪಕರಣಗಳ ಅಗತ್ಯವಿಲ್ಲ. ರಾತ್ರಿಯಲ್ಲಿ ನಿಮ್ಮ ಮನೆಯಿಂದಲೇ ನೀವು ಅದನ್ನು ನಿಮ್ಮ ಬರಿಗಣ್ಣಿನಿಂದ ನೇರವಾಗಿ ನೋಡಬಹುದು. ಇದಕ್ಕಾಗಿ ಹೆಚ್ಚು ಬೆಳಕಿನ ಮಾಲಿನ್ಯವಿಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು

meteor shower Amazing astronomical event will be seen in sky Know how and when you will be able to see it Uttar Pradesh Gorakhpur Planetarium Astronomer Amar Pal Singh

ಈ ಅದ್ಭುತ ವಿದ್ಯಮಾನವನ್ನು ವೀಕ್ಷಿಸಲು ಸುರಕ್ಷಿತ ಮತ್ತು ಸ್ವಚ್ಛವಾದ ಸ್ಥಳವನ್ನು ಆಯ್ಕೆಮಾಡಿ. ಮಲಗಿ ಆಕಾಶದ ಕಡೆಗೆ ನೋಡಿ. ಹೇಗಾದರೂ, ಸಂಜೆ ಸಮೀಪಿಸುತ್ತಿದ್ದಂತೆ ನೀವು ಉಲ್ಕಾಪಾತಗಳು / ಶೂಟಿಂಗ್ ನಕ್ಷತ್ರಗಳನ್ನು ನೋಡಬಹುದಾಗಿದೆ. ಇದು ಏಪ್ರಿಲ್ 22 ರ ಮಧ್ಯರಾತ್ರಿಯಿಂದ ಏಪ್ರಿಲ್ 23 ರ ಬೆಳಗ್ಗೆ ತನಕ ಉತ್ತುಂಗದಲ್ಲಿರುತ್ತದೆ.

meteor shower Amazing astronomical event will be seen in sky Know how and when you will be able to see it Uttar Pradesh Gorakhpur Planetarium Astronomer Amar Pal Singh

Leave a Reply

Your email address will not be published. Required fields are marked *