UPSC CSE 2024 Result: ಶಕ್ತಿ ದುಬೆ’ಗೆ AIR 1, ಇಲ್ಲಿದೆ ಟಾಪರ್‌ಗಳ ಕಂಪ್ಲೀಟ್ ಪಟ್ಟಿ.

2024ನೇ ಸಾಲಿನ ಸಿವಿಲ್‌ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಇಂದು ಬಿಡುಗಡೆ ಆಗಿದೆ. ಈ ಪರೀಕ್ಷೆಯಿಂದ ಈಗ 1009 ಅಭ್ಯರ್ಥಿಗಳು ನಾಗರೀಕ ಸೇವೆಗಳಿಗೆ ಶಿಫಾರಸು ಪಡೆದಿದ್ದಾರೆ. ಈ ಸಾಲಿನ 10 ಟಾಪರ್‌ಗಳು ಯಾರು, ಫಲಿತಾಂಶ ಚೆಕ್‌ ಮಾಡುವುದು ಹೇಗೆ, ಇತರೆ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಟಗರಿವಾರು ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆಯನ್ನು ಇಲ್ಲಿ ಚೆಕ್‌ ಮಾಡಬಹುದು.

  • ಸಿಎಸ್‌ಇ 2024 ಅಂತಿಮ ಫಲಿತಾಂಶ ಪ್ರಕಟ.
  • ಶಕ್ತಿ ದುಬೆ ದೇಶದ ಮೊದಲ ಟಾಪರ್.
  • ದೇಶದ ಈ ಸಾಲಿನ 10 ಟಾಪರ್‌ಗಳ ಲಿಸ್ಟ್‌ ಇಲ್ಲಿದೆ.

ದೇಶದ ಲಕ್ಷಾಂತರ ಅಭ್ಯರ್ಥಿಗಳ ನಿರೀಕ್ಷಿತ ಯುಪಿಎಸ್‌ಸಿ ಸಿಎಸ್‌ಇ 2024 ಅಂತಿಮ ಫಲಿತಾಂಶ ಇದೀಗ ಬಿಡುಗಡೆ ಆಗಿದೆ. ಈ ಸಾಲಿನ ಸಿಎಸ್‌ಇ ಪರೀಕ್ಷೆಯಲ್ಲಿ ಅಖಿಲ ಭಾರತದ ಟಾಪ್ 1 Rank ನಲ್ಲಿ ಶಕ್ತಿ ದುಬೆ ಸ್ಥಾನ ಗಳಿಸಿದ್ದಾರೆ. ಎರಡನೇ ಟಾಪರ್‌ ಆಗಿ ಹರ್ಷಿತಾ ಗೋಯಲ್, ಮೂರನೇ ಟಾಪರ್‌ ಆಗಿ ಡೊಂಗ್ರಿ ಅರ್ಚಿತ್ ಪರಾಗ್‌ ಸ್ಥಾನ ಪಡೆದಿದ್ದಾರೆ.

ಯುಪಿಎಸ್‌ಸಿ ಸಿಎಸ್‌ಇ 2024 ಮೂಲಕ ಒಟ್ಟಾರೆ 1009 ಅಭ್ಯರ್ಥಿಗಳು ಅಖಿಲ ಭಾರತ ನಾಗರೀಕ ಸೇವೆಗಳಿಗೆ ಆಯ್ಕೆ ಆಗಿದ್ದಾರೆ. 241 ಅಭ್ಯರ್ಥಿಗಳನ್ನು ತಾತ್ಕಾಲಿಕ ಪಟ್ಟಿಯಲ್ಲಿ ಇರಿಸಲಾಗಿದೆ. ಒಬ್ಬ ಅಭ್ಯರ್ಥಿಯ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ಯುಪಿಎಸ್‌ಸಿ ಪ್ರಕಟಣೆ ಮೂಲಕ ತಿಳಿಸಿದೆ.

ನಾಗರೀಕ ಸೇವೆಗಳಿಗೆ ಪ್ರಸ್ತುತ ವರ್ಗಾವಾರು ಶಿಫಾರಸು ಮಾಡಲಾದ ಅಭ್ಯರ್ಥಿಗಳ ಸಂಖ್ಯೆಯನ್ನು ನೋಡುವುದಾದಲ್ಲಿ ಜೆನೆರಲ್‌ ಕೆಟಗರಿಯಲ್ಲಿ -335, ಆರ್ಥಿಕವಾಗಿ ಹಿಂದುಳಿದ ವರ್ಗ – 109, ಇತರೆ ಹಿಂದುಳಿದ ವರ್ಗ -318, ಪರಿಶಿಷ್ಟ ಜಾತಿ- 160, ಪರಿಶಿಷ್ಟ ಪಂಗಡ – 87 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ. .

ಒಟ್ಟಾರೆ 1009 ಅಭ್ಯರ್ಥಿಗಳ ಪೈಕಿ ಐಎಎಸ್‌ ಸೇವೆಗೆ 180, ಐಎಫ್‌ಎಸ್‌ ಸೇವೆಗೆ 55, ಐಪಿಎಸ್‌ ಸೇವೆಗೆ 147, ಗ್ರೂಪ್‌ ಎ ಸೇವೆಗಳಿಗೆ 605, ಗ್ರೂಪ್‌ ಬಿ ಸೇವೆಗಳಿಗೆ 142 ಅಭ್ಯರ್ಥಿಗಳನ್ನು ಈ ಫಲಿತಾಂಶದ ಮೂಲಕ ನೇಮಕ ಮಾಡಲು ಉದ್ದೇಶಿಸಲಾಗಿದೆ.

ಯುಪಿಎಸ್‌ಸಿ ಸಿಎಸ್‌ಇ 2024 ನೇ ಸಾಲಿನ 10 ಟಾಪರ್‌ಗಳ ಲಿಸ್ಟ್‌ ಕೆಳಗಿನಂತಿದೆ ನೋಡಿ

  1. ಶಕ್ತಿ ದುಬೆ
  2. ಹರ್ಷಿತಾ ಗೋಯಲ್
  3. ಡೊಂಗ್ರಿ ಅರ್ಚಿತ್ ಪರಾಗ್
  4. ಷಾಹ್‌ ಮಾರ್ಗಿ ಚಿರಾಗ್
  5. ಆಕಾಶ್ ಗಾರ್ಗ್‌
  6. ಕಮಲ್ ಪುನಿಯಾ
  7. ಆಯುಷ್ ಬನ್ಸಾಲ್
  8. ರಾಜ್ ಕೃಷ್ಣ ಝಾ
  9. ಆದಿತ್ಯಾ ವಿಕ್ರಮ್ ಅಗರ್‌ವಾಲ್
  10. ಮಯಾಂಕ್ ತ್ರಿಪಥಿ

ಸಿಎಸ್‌ಇ 2024 ಅಂತಿಮ ಫಲಿತಾಂಶ ಚೆಕ್‌ ಮಾಡುವುದು ಹೇಗೆ?

– ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿ.
– ಓಪನ್ ಆದ ವೆಬ್‌ಪೇಜ್‌ನಲ್ಲಿ ‘Latest News/ What’s New’ ಕಾಲಂನಲ್ಲಿ ಸ್ಕ್ರಾಲಿಂಗ್ ಆಗುತ್ತಿರುವ ಅಪ್‌ಡೇಟ್‌ಗಳನ್ನು ಗಮನಿಸಿ.
– ‘Final Result – Civil Services Examination 2024’ ಎಂದಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
– ಫಲಿತಾಂಶದ ಪಿಡಿಎಫ್‌ ವೆಬ್‌ಪೇಜ್‌ ಓಪನ್‌ ಆಗುತ್ತದೆ.
– ಈ ಪಿಡಿಎಫ್‌ ಪೇಜ್‌ನಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್‌ ನಂಬರ್ ಮತ್ತು ಹೆಸರು ಮೂಲಕ ರಿಸಲ್ಟ್‌ ಚೆಕ್‌ ಮಾಡಿಕೊಳ್ಳಬಹುದು.

ಯುಪಿಎಸ್‌ಸಿ ಸಿವಿಲ್‌ ಸೇವೆಗಳ 2024ನೇ ಸಾಲಿನ ಪೂರ್ವಭಾವಿ ಪರೀಕ್ಷೆಯನ್ನು 2024 ರ ಜೂನ್ 16 ರಂದು ನಡೆಸಲಾಗಿತ್ತು. ಇದರಲ್ಲಿ ಅರ್ಹತೆ ಪಡೆದವರಿಗೆ ಯುಪಿಎಸ್‌ಸಿ ಸಿಎಸ್‌ಇ ಮೇನ್ಸ್‌ ಪರೀಕ್ಷೆಯನ್ನು 2024 ರ ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 29 ರ ನಡುವೆ ನಡೆಸಲಾಗಿತ್ತು. ಅಂತಿಮ ಹಂತದ ವ್ಯಕ್ತಿತ್ವ ಪರೀಕ್ಷೆಯನ್ನು 2025 ರ ಜನವರಿ 7 ರಿಂದ ಏಪ್ರಿಲ್ 17, ರವರೆಗೆ ನಡೆಸಲಾಗಿತ್ತು.

Source: Vijayakarnataka

 ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *