Horoscope Today 23 April: ಈ ರಾಶಿಯವರಿಗೆ ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು.

Horoscope Today 23 April: ಈ ರಾಶಿಯವರು ಸಮ್ಮತವಿಲ್ಲದದ್ದರೂ ಕೆಲವು ಕಾರ್ಯವನ್ನು ಮಾಡುವರು

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶುಕ್ಲ, ಕರಣ: ವಣಿಜ, ಸೂರ್ಯೋದಯ – 06 : 15 am, ಸೂರ್ಯಾಸ್ತ – 06 : 46 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:31 – 14:05, ಯಮಘಂಡ ಕಾಲ 07:49 – 09:23, ಗುಳಿಕ ಕಾಲ 10:57 – 12:31

ಮೇಷ ರಾಶಿ: ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಪೂರ್ಣ ತೃಪ್ತಿ ಇರದು. ನಿಮ್ಮ ವಸ್ತುಗಳನ್ನು ಬಹಳ ಜತನದಿಂದ ಇಟ್ಟುಕೊಳ್ಳುವಿರಿ. ಶುಭಕಾರ್ಯಗಳಿಗೆ ಆಹ್ವಾನ ಬರಲಿದೆ. ಯಾರಾದರೂ ಹೊಗಳಿದರೆ ಹಿಗ್ಗಬೇಡಿ. ತಪ್ಪನ್ನು ಸುಲಭವಾಗಿ ಒಪ್ಪಿಕೊಳ್ಳಲಾರಿರಿ. ಮಂತ್ರಕ್ಕಿಂತ ಉಗುಳು ಹೆಚ್ಚಾಗಲಿದೆ. ಬೋಧಕರಾಗಿದ್ದರೆ ನಿಮ್ಮ ವಿದ್ಯಾರ್ಥಿಗಳಿಂದ ಉಡುಗೊರೆ ಸಿಗಬಹುದು. ತಂದೆಯು ನಿಮ್ಮ ಪ್ರಗತಿಯನ್ನು ನಿರೀಕ್ಷಿಸುವಿರಿ. ಬಂಧುಗಳ ಮನೆಯಲ್ಲಿ ಆತಿಥ್ಯ, ನೆಮ್ಮದಿಯಿಂದ ದಿನ ಮುಗಿಯಲಿದೆ. ಯೋಜನೆಯು ಮಸುಕಾಗಿದ್ದು ಮುಂದಿನ ದಾರಿ ಸರಿಯಾಗಿ ಗೊತ್ತಾಗದೇ ಇರಬಹುದು. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಯಂತ್ರಗಳ ದುರಸ್ತಿಯ ಬಗೆಗೆ ಆಲೋಚನೆ ಹೆಚ್ಚು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಜನಮನ್ನಣೆಯೂ ಅಪಾಯವೆನಿಸಬಹುದು. ನಿಮ್ಮ ಯೋಜನೆಯನ್ನು ನಿರ್ನಾಮ ಮಾಡಬಹುದು. ಮುಖಂಡರು ಸಂಘಟನೆಯಲ್ಲಿ ಆಸಕ್ತಿ ತೋರಿಸುವರು. ತಂತ್ರಜ್ಞಾನವನ್ನು ನೀವು ಅತಿಯಾಗಿ ಬಳಸುವಿರಿ.

ವೃಷಭ ರಾಶಿ: ಯೋಚಿಸದೇ ಮಾಡುವ ಯೋಜನೆಯಿಂದ ಇತರರು ಅಪಹಾಸ್ಯ ಮಾಡಬಹುದು. ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ದೀರ್ಘ ಪ್ರಯಾಣವನ್ನು ಇಚ್ಛಿಸುವ ನೀವು ಆರೋಗ್ಯದ ಮೇಲೂ ಗಮನವಿರಿಕೊಳ್ಳಿ. ಪುನಶ್ಚೇತನಕ್ಕೆ ಅನ್ಯರ ಸಹಕಾರ ಅಗತ್ಯ. ಯಾರದ್ದೋ ಮಾತನ್ನು ಕೇಳಿ ಕೆಲಸಗಳನ್ನು ಮಾಡಬೇಡಿ. ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಹಿರಿಯರಿಂದ ಸಂಪತ್ತು ಸಿಗಬಹುದು ಅಥವಾ ಉತ್ತಮಮಾರ್ಗದಿಂದ ಬರುವ ಸಂಪತ್ತು ನಿಮ್ಮನ್ನು ಖುಷಿಯಾಗಿಡಲಿದೆ. ನೂತನ ಉದ್ಯೋಗದ ಅನ್ವೇಷಣೆಯನ್ನು ನೀವು ಮಾಡಬೇಕಾಗುವುದು. ಸಾಲವನ್ನು ದಿನದ ಮೊದಲೇ ತೀರಿಸಿ ಪ್ರಶಂಸೆ ಗಳಿಸುವಿರಿ. ಗ್ರಾಹಕರ ಜೊತೆ ಸಂಯಮದ ವರ್ತನೆ ಬೇಕು. ಎರಡೆರಡು ಕಾರ್ಯವನ್ನು ಮಾಡುವ ಸಂದರ್ಭವು ಬರಬಹುದು. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.

ಮಿಥುನ ರಾಶಿ: ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಲಿದೆ. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಬಿಡುವತ್ತ ಯೋಜನೆಗಳನ್ನು ರೂಪಿಸಿಕೊಳ್ಳುವಿರಿ. ನಿಜವನ್ನು ಹೇಳಲಾಗದೇ ಉಳಿಸಿಕೊಳ್ಳಲಾಗದೇ ಕಷ್ಟ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಸಮಾಧಾನದಿಂದ ಅವರಿಗೆ ಉತ್ತರಕೊಟ್ಟು ಕೆಲವು ದಿನಗಳ ಅನಂತರ ಪಾವತಿಸುವೆನು ಎಂದು ಹೇಳಿ. ಆಮೆಯ ಗತಿ ಸಾಗುವ ಬದುಕನ್ನು ಕಂಡು ನಿರಾಶರಾಗುವುದು ಬೇಡ. ಮಂದಗತಿ, ಶೀಘ್ರಗತಿ ಬದುಕಿನಲ್ಲಿ ಸಾಮಾನ್ಯವೆಂದು ತಿಳಿಯಿರಿ. ಭೂಮಿಯ ವ್ಯವಹಾರದಲ್ಲಿ ಅನುಭವಿಗಳನ್ನು ಜೊತೆಯಲ್ಲಿ ಇರಿಸಿಕೊಳ್ಳಿ. ಯಾವುದಾದರೂ ಹೊಸ ವೃತ್ತಿಯನ್ನು ಆದಾಯದ ಭಾಗವಾಗಿಸಿಕೊಳ್ಳುವಿರಿ. ಆಹಾರದಿಂದ ಆರೋಗ್ಯವು ಕೆಡಲಿದೆ. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ಅಮೂಲ್ಯವಾದ ಉಡುಗೊರೆಯನ್ನು ಕೊಡುವಿರಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು.

ಕರ್ಕಾಟಕ ರಾಶಿ: ಆಪತ್ಕಾಲದಲ್ಲಿ ವಿಚಲಿತರಾಗುವುದು ಅಧಿಕ. ಅದನ್ನು ನಿಗ್ರಹಿಸಿದರೆ ಸರಿಯಾದ ತೀರವನ್ನು ಸೇರಬಹುದು. ಆತುರದ ನಿರ್ಧಾರಕ್ಕೆ ಹೋಗಬೇಡಿ. ಸಮಯಕ್ಕಾಗಿ ಕಾಯಿರಿ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಸಂಗಾತಿಯೇ ನಿಮಗೆ ದೊಡ್ಡ ಅಡ್ಡಿ ಎನಿಸಬಹುದು. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಮಾಡುತ್ತಿರುವ ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ಓದಿನೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರಿ. ಅನ್ಯಾಯ ಜೊತೆ ಸೇರಿಕೊಳ್ಳಬೇಕಾಗಬಹುದು. ನಿಮ್ಮ ವಿಚಾರವನ್ನು ಇತರರ ಮುಂದೆ ಬಹಿರಂಗವಾಗಿ ಇರಿಸಿ. ನೀವು ನಿಮ್ಮವರನ್ನು ಗ್ರಹಿಸುತ್ತ ಇರುವಿರಿ. ಅತಿವೇಗದ ಮಾತು ಇತರರಿಗೆ ಸ್ಪಷ್ಟವಾಗದೇ ಹೋಗಬಹುದು. ಯಾರ ಒಪ್ಪಿಗೆಯೂ ಇಲ್ಲದೇ ಏಕಮುಖ ನಿರ್ಧಾರ ಬೇಡ. ನಿಮ್ಮ ಅದೃಷ್ಟದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ತಾಯಿಯ ಮೇಲೆ ನಿಮ್ಮ ಕೋಪವನ್ನು ತೋರಿಸುವಿರಿ. ಇಕ್ಕಟ್ಟಿನಿಂದ ಹೊರಬರಲು ಮನಸ್ಸು ಮಾಡುವಿರಿ.

ಸಿಂಹ ರಾಶಿ: ನಿಮ್ಮ ಆದಾಯದ ಮೇಲೆ ಅಪ್ತರ ಕಣ್ಣೇ ಬೀಳಬಹುದು. ಇದರಿಂದ ನೀವು ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ಜಾಗರೂಕರಾಗಿ ಇರಿ. ಹೇಳಬೇಕಾದುದನ್ನು ಹೇಳುವಲ್ಲಿ, ಹೇಳುವ ರೀತಿಯಲ್ಲಿ‌ಹೇಳಿ. ಸಾಲವನ್ನು ಕೊಟ್ಟವರು ಇಂದು ಪೀಡಿಸಲಿದ್ದಾರೆ. ವ್ಯವಸ್ಥಾಪಕರಾಗಿದ್ದರೆ ನಿಮ್ಮ ಕೆಲಸವು ಮೇಲಧಿಕಾರಿಗಳಿಗೆ ಸಂತಸ ನೀಡುವುದು. ಹೊಸ ವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡಿ. ಸಮಯ ನೋಡಿ ಪ್ರೇಮವಿವಾಹದ ಪ್ರಸ್ತಾಪ ಮಾಡಿ. ಮನೆಯಿಂದ ನಿಮಗೆ ಅನುಮೋದನೆ ಸಿಕ್ಕೀತು. ಇನ್ನೊಬ್ಬರಿಗೆ ತೊಂದರೆಯನ್ನು ಕೊಡುವ ವಿಧಾನವನ್ನು ಚಿಂತಿಸುವಿರಿ. ನೀವು ಯಾವುದಕ್ಕೂ ವಿಚಲಿತರಾಗದೇ ಮುಂದುವರಿಯುವುದು ಉತ್ತಮ. ಸಹೋದರನ ಕುಟುಂಬದಲ್ಲಿ ನಿಮ್ಮ ಮಧ್ಯಪ್ರವೇಶವು ಆಗಬೇಕಾಗಬಹುದು. ಧಾರ್ಮಿಕ ಕಾರ್ಯದಲ್ಲಿ ನಿಮ್ಮ ತೊಡಗುವಿಕೆ ಹೆಚ್ಚಿರುವುದು. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ನಿಮ್ಮ ಸುರಕ್ಷಿತ ತಾಣವನ್ನು ನೀವೇ ಆರಿಸಿಕೊಳ್ಳಿ. ಸಾಲದ ಕಾರಣಕ್ಕೆ ತಲೆ ಮರೆಸಿಕೊಳ್ಳಬಹುದು.

ಕನ್ಯಾ ರಾಶಿ: ನಿಮ್ಮ ಸಂತೋಷವು ಇತರ ಬೇಸರಕ್ಕೆ ಕಾರಣವಾಗಬಹುದು. ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಸ್ಥಳದ ವಿಚಾರದಲ್ಲಿ ಕಲಹವನ್ನು ಮಾಡಿಕೊಳ್ಳಲಿದ್ದೀರಿ. ಚೆನ್ನಾಗಿ ಮಾತನಾಡುತ್ತೇನೆಂದು ಏನನ್ನಾದರೂ ಹೇಳಿ ಬೇರೆಯವರಿಗೆ ನೋವನ್ನು ಕೊಡಬೇಡಿ. ಬಾಯಿಯ ಚಪಲಕ್ಕೆ ಬೇರೆಯವರು ನೋವುಣ್ಣುವರು. ಸದಾ ನಗುಮುಖದಿಂದ ಇರಿ. ವ್ಯಾಪರ ಸುಗಮವಾಗಿ ಸಾಗುವುದು. ವ್ಯಾವಹಾರಿಕ ಭಾರವನ್ನು ಪಕ್ಕದಲ್ಲಿಟ್ಟು ನಿಶ್ಚಿಂತೆಯಿಂದ ನಿದ್ರಿಸಬಹುದು. ನಾಳೆಯದನ್ನು ಹಂಬಲಿಸಿ ಇಂದು ಹಾಗೂ ನಾಳೆಯನ್ನು ಹಾಳು ಮಾಡಿಕೊಳ್ಳಬೇಡಿ. ಶ್ರಮದಷ್ಟು ಫಲ ಸಿಗುತ್ತದೆ. ಕಠಿಣ ಪರಿಶ್ರಮದ ಕಡೆ ನಿಮ್ಮ ಮನಸ್ಸು ತಯಾರಿರುವುದು. ಆಕರ್ಷಣೆಯು ನಿಮ್ಮ ದಾರಿಯನ್ನು ತಪ್ಪಿಸುವುದು. ದೇವರ ಕೃಪೆಯನ್ನು ಬೇಡಿ ಇಂದು ನೀವು ಮಾಡುವ ಕೆಲಸಕ್ಕೆ ಕೇಳಿಕೊಳ್ಳಿ. ಹೊಸ ವ್ಯವಹಾರವನ್ನು ಪ್ರಾರಂಭಿಸಿವರು ಉತ್ಸಾಹದ ಕಾರಣ ಉತ್ತಮ ಲಾಭವನ್ನು ಪಡೆಯಬಹುದು. ವಕೀಲವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿತಿರುವಿರಿ.

ತುಲಾ ರಾಶಿ: ಯಾರನ್ನೂ ಒಪ್ಪಿಸುವುದು ಸುಲಭವಾಗದು. ನಿಮಗೆ ನಿಮ್ಮವರು ಸಹಾಯ ಮಾಡುವವರಿದ್ದಾರೆ. ಕಛೇರಿಯ ಕಾರ್ಯಕ್ಕೆಂದು ದೂರದ ಊರಿಗೆ ಹೋಗುವವರಿದ್ದೀರಿ‌. ವಾಹನದಿಂದ ತೊಂದರೆ ಇರಲಿದೆ. ಸ್ನೇಹಿತರು ಮಾಡಿದ ಕೆಟ್ಟ ಕೆಲಸದಿಂದ ನಿಮಗೆ ಕಂಟಕವು ಬರಬಹುದು. ಭೂಮಿಯ ವ್ಯವಹಾರದಲ್ಲಿ ಹೊಂದಾಣಿಕೆ ಕಷ್ಟ. ಲೇವಾದೇವಿಯ ವ್ಯವಹಾರದಿಂದ ತೊಂದರೆ ಹಾಗೂ ನಷ್ಟ. ವಿದ್ಯಾಭ್ಯಾಸಕ್ಕೆಂದು ಪರ ಊರಿಗೆ ಹೋಗುವವರಿದ್ದೀರಿ. ಹಣದ ಉಳಿತಾಯವು ಸಾಕೆಂದು ಅನ್ನಿಸದು. ನೀವು ಮಾಡುವ ಕೆಲಸದಲ್ಲಿ ಜಾಣ್ಮೆಯು ಅವಶ್ಯಕವಾಗಿರುವುದು. ಸಂತಾನದಿಂದ ಸಂತೋಷವಿದ್ದರೂ ಅಲ್ಪಮಟ್ಟಿನ ಅಸಂತೋಷವೂ ಇರುವುದು. ಹಿತಮಿತವಾದ ಮಾತುಗಾರಿಕೆಯಿಂದ ಎಲ್ಲರಿಗೂ ಹಿತವಾಗುವುದು. ಯಾರ ಜೊತೆಗೂ ಹುಡುಗಾಟವನ್ನು ಮಾಡುವುದು ಬೇಡ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ. ಮಂದಗತಿಯಲ್ಲಿ ಸಾಗುವ ನಿಮ್ಮ ಕೆಲಸದಿಂದ ಸಹೋದ್ಯೋಗಿಗಳು ಆಡಿಕೊಳ್ಳುವರು.

ವೃಶ್ಚಿಕ ರಾಶಿ: ಏನೋ ಮಾಡಲು ಹೋಗಿ ಮತ್ತೇನೋ ಆಗುವುದು. ಇನ್ನೊಬ್ಬರನ್ನು ಹಾಳು ಮಾಡಲು ಹೋಗಿ ನಿಮ್ಮ ವ್ಯಕ್ತಿತ್ವವೇ ಹಾಳಾಗುವುದು. ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಕಾರಣಾಂತರಗಳಿಂದ ಖರ್ಚು ಹೆಚ್ಚಾಗಬಹುದು. ಹಿತಶತ್ರುಗಳು ಕತ್ತಿಯನ್ನು ಮಸೆಯುತ್ತಲೇ ಇದ್ದಾರು. ಕುಟುಂಬದಲ್ಲಿ ಮಾತಿನ ಚಕಮಕಿ ನಡೆಯಬಹುದು. ದಾಂಪತ್ಯದ ನಡುವೆ ವಿರಸಭಾವವು ಕೆಲವು ಸಮಯವಿದ್ದು ಶಾಂತವಾಗುವುದು. ಮನಸ್ಸು ಹೇಳಿದಂತೆ ಕೇಳದೇ ಸಮಾಧಾನದಿಂದ ಇರಿ. ಮನಸ್ತರಂಗ ನಿಸ್ತರಂಗವಾಗುವುದು. ಇಂದಿನ ಕಾರ್ಯವನ್ನು ಮಾಡಲು ಹಣವು ಬೇಕಾದೀತು. ಅನೇಕ ರೀತಿಯ ಫಲಗಳನ್ನು ನೀವು ಪಡೆಯಲಿದ್ದು ಕೋಪ ನಿಯಂತ್ರಿಸಬೇಖಾಗುವುದು. ಮುಕ್ತ ಮಾತುಕತೆಗೆ ನಿಮಗೆ ಅವಕಾಶ ದೊರೆಯದೇಹೋದೀತು. ಪ್ರವಾಸದಲ್ಲಿ ಇರುವವರಿಗೆ ಆಹಾರದ ವ್ಯತ್ಯಾಸದಿಂದ ಕಷ್ಟವಾಗುವುದು. ಸಂಶೋಧನೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯದಲ್ಲಿ ಪ್ರವೃತ್ತರಾಗುವರು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಯಶಸ್ಸು ಸಿಗುವುದು. ನಿಮ್ಮನ್ನು ಅನುಕರಣೆ ಮಾಡಬಹುದು.

ಧನು ರಾಶಿ: ರಾಜಕೀಯ ತಂತ್ರದಿಂದ ಅಧಿಕಾರವನ್ನು ಪಡೆದಂತೆ ಅನ್ನಿಸುವುದು. ಕ್ರಿಯಾತ್ಮಕ ಗೊಳಿಸಿದಾಗ ಅದರ ಸತ್ಯಾಸತ್ಯತೆ ಗೊತ್ತಾಗುವುದು. ನೀವು ಹಾಕಿಕೊಂಡ ಯೋಜನೆಗಳಿಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ಭೂಮಿಯ ಕ್ರಯ ಮತ್ತು ವಿಕ್ರಯಗಳ ವಿಷಯದಲ್ಲಿ ಲಾಭವನ್ನು ಕಾಣಬಹುದಾಗಿದೆ. ಸಹೋದರರ ನಡುವೆ ಭಿನ್ನಾಭಿಪ್ರಾಯಗಳು ನಡೆಯಬಹುದು. ಸಾಲದ ಭಾರವನ್ನು ಕಡಿಮೆ ಮಾಡಿಕೊಳ್ಳಲಾಗದು. ನೀವಿಂದು ದೇವರೇ ನೀನೇ ಗತಿ ಎಂಬ ಅನನ್ಯ ಭಾವವಿರುವುದು. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಲ್ಲಿ ತೊಡಗುತ್ತದೆ. ತಂದೆಯ ಜೊತೆ ವೈಮನಸ್ಯವಾಗಿದ್ದು ಇಂದು ಸಂಬಂಧವು ಸುಧಾರಿಸುವುದು. ಹೊಸ ಜೀವನದಲ್ಲಿ ಪ್ರೀತಿ ಹೆಚ್ಚಾಗಿರುವುದು. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ನಿಮ್ಮ ಜವಾಬ್ದಾರಿ ಹೆಚ್ಚಾಗುವುದು. ಭೂಮಿಯ ವ್ಯವಹಾರವು ಪಾಲುದಾರರ ಸಹಕಾರದಿಂದ ಸುಗಮವಾಗಿ ಸಾಗಲಿದೆ.

ಮಕರ ರಾಶಿ: ಅಕಾರಣ ಪ್ರೀತಿಯು ಅಳಿಯದೇ ಉಳಿಯಲು ಕಾರಣವನ್ನು ಹುಡುಕಬಹುದು. ನಿಮ್ಮ ಆಲೋಚನಗಳಿಗೆ ಇಳ್ಳೆಯ ಪ್ರತಿಕ್ರಿಯೆ ಸಿಗಲಿದೆ. ದೇಶಗಳಿಗೆ ವಸ್ತುಗಳನ್ನು ಕಳುಹಿಸುವ ಉದ್ಯೋಗವನ್ನು ಮಾಡುತ್ತಿದ್ದರೆ ಅವರಿಗೆ ಲಾಭವಿದೆ. ಕಾರ್ಯದ ನಿಮಿತ್ತ ಅನ್ಯಸ್ಥಳಕ್ಕೆ ಹೋಗಬೇಕಾಗಿ ಬರಬಹುದು. ಅಲ್ಲಿಯೇ ಇಂದಿನ ನಿಮ್ಮ ವಾಸವಾಗಲಿದೆ. ನಿಮ್ಮ ಸಾಧನೆಯೇ ಮಾತನಾಡುವಂತೆ ಆದರೆ ಒಳ್ಳೆಯದು. ಅಪರಿತರು ನಿಮಗೆ ಸಹಾಯವನ್ನು ಮಾಡಲಿದ್ದಾರೆ. ಇಂದು ವ್ಯಾಪಾರಿಗಳಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದೆ. ಕಚೇರಿಯಲ್ಲಿ ಉತ್ತಮವಾದ ವಾತಾವರಣದ ಉತ್ಸಾಹದಿಂದ ಇರುವಿರಿ. ನಿಮ್ಮ ಬೇಡಿಕೆಯನ್ನು ಸರಿಯಾಗಿ ಬಳಸಿಕೊಳ್ಳುವಿರಿ‌ ಜಾಣ್ಮೆಯಿಂದ ಮಾಡಿದ ವ್ಯವಹಾರಕ್ಕೆ ಪ್ರಶಂಸೆ ಸಿಗಲಿದೆ. ಬಯಸಿದ್ದನ್ನು ಪಡೆದುಕೊಳ್ಳುವ ಅರ್ಹತೆ ನಿಮಗೆ ಬರಲಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ವ್ಯವಹಾರದಿಂದ ನಿಮಗೆ ಪ್ರಶಂಸೆಯೂ ಸಿಗುವುದು.

ಕುಂಭ ರಾಶಿ: ಅನೇಕ‌ ಕಡೆಗಳಲ್ಲಿ ಉದ್ಯೋಗಕ್ಕೆ ಅವಕಾಶವಿದ್ದು ಗೊಂದಲ ಅಧಿಕವಾಗಬಹುದು. ಇಂದಿನ ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿರುವಂತೆ ಕಾಣಬಹುದು. ಕೃಷಿಯನ್ನು ಅವಲಂಬಿಸಿ ಬದುಕುವವರಿಗೆ ಅಲ್ಪ ಲಾಭವೂ ಸಿಗಲಿದೆ‌. ವಿದ್ಯಾರ್ಥಿಗಳು ಹತ್ತಾರು ಗೊಂದಲಗಳನ್ನು ಇಟ್ಟುಕೊಳ್ಳಲಿದ್ದಾರೆ. ಹೂಡಿಕೆಯಿಂದ ಬರುವ ಆದಾಯದಿಂದ ಅಚ್ಚರಿಯಾಗಲಿದೆ. ಎಂದೂ ಇರುವ ಶತ್ರುಗಳು ಇಂದು ನಿಮಗೆ ಏನಾನ್ನಾದರೂ ಮಾಡಬೇಕು ಎನ್ನುವ ಹೊಂಚನ್ನು ಹಾಕಬಹುದು. ಇನ್ನೊಬ್ಬರ ಸಹಾಯವನ್ನು ಪಡೆದು ಅಪಾಯದಿಂದ ಪಾರಾಗುವಿರಿ. ಅವಿಶ್ರಾಂತ ಕೆಲಸವು ನಿಮಗೆ ಆಯಾಸವನ್ನು ನೀಡುವುದು. ಧಾರ್ಮಿಕವಾಗಿ ಹಣವನ್ನು ವ್ಯಯಿಸಲಿದ್ದೀರಿ. ಕುಟುಂಬದಲ್ಲಿ ನಿಮ್ಮ ವಿವಾಹದ ಕುರಿತು ಚರ್ಚೆಯಾಗುವುದು. ನಿಮಗಾಗಿ ಅನುಕೂಲಕರ ವಾತಾವರಣವನ್ನು ಸಿದ್ಧ ಮಾಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು. ಇಂದು ನಡೆಯುವ ತಪ್ಪಿಗೆ ನೀವೇ ಕಾರಣರಾಗುವಿರಿ.

ಮೀನ ರಾಶಿ: ಎಲ್ಲಿಗೂ ಹೋಗಲು ಸಾಧ್ಯವಾಗದು, ಹಾಗೆಂದು ಹೋಗದೇ ಸುಮ್ಮನಿರಲೂ ಮನಸ್ಸು ಒಪ್ಪದು. ಇಂದು ಉದ್ಯಮವು ನಿಮಗೆ ಲಾಭವನ್ನು ತರಲಿದೆ. ಇಂದು ಯಾರಿಗಾದರೂ ಮಾತುಕೊಡಲು ಹಲವು ಬಾರಿ ಯೋಚಿಸುವಿರಿ. ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಕಿರಿಕಿರಿಯನ್ನು ಅನುಭವಿಸುತ್ತಿರುವ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಇರುವುದು. ವಿದ್ಯಾಭ್ಯಾಸಕ್ಕೆ ವಿದೇಶ ಗಮನ ನಿಶ್ಚಯ ಆಗಬಹುದು. ನಿಮ್ಮ ಕಾರ್ಯದಕ್ಷತೆಯನ್ನು ಕಂಡು ಉದ್ಯೋಗದಲ್ಲಿ ಉನ್ನತಸ್ಥಾನವನ್ನು ನೀಡಬಹುದು. ಕುಟುಂಬದಿಂದ ನಿರೀಕ್ಷಿಸುವ ವಸ್ತುವು ನಿಮಗೆ ಸಿಗಲಿದೆ. ಪ್ರೇಮ ನಿವೇದನೆಯನ್ನು ಮಾಡಿ ನಿಮ್ಮೊಳಗೆ ಇರುವ ಗೊಂದಲಕ್ಕೆ ಪೂರ್ಣವಿರಾಮ ಕೊಡುವಿರಿ. ಹೊಸ ಉದ್ಯೋಗದಿಂದ ನೀವು ಸಾಕಷ್ಟು ಯಶಸ್ಸನ್ನು ಪಡೆಯುತ್ತೀರಿ. ಹಿರಿಯರ ಆರೋಗ್ಯವೂ ಚೇತರಿಕೆ ಕಾಣುವುದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸವನ್ನು ಕೊಡಲು ಸಾಲ ಮಾಡಬೇಕಾದೀತು. ಆದಾಯದ ಮೂಲವು ಬದಲಾಗಬಹುದು.

Source : TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *