
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 29 : ತಾಲೂಕು ತುರುವನೂರು ಹೋಬಳಿಯ ಕುನಬೇವು ಕಾರ್ಯಕ್ಷೇತ್ರದ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಳುಹಿಸಿದ
1,50,000/-ರೂ ಚಕ್ ಯನ್ನು ಚಿತ್ರದುರ್ಗ ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ ಹಾಗೂ ತಾಲೂಕಿನ ಯೋಜನಾಧಿಕಾರಿಗಳಾದ
ಚಂದ್ರಹಾಸ ರವರು ವಿತರಿಸಿದರು..
ಈ ಸಭೆಯಲ್ಲಿ ಗ್ರಾಮಭಿವೃದ್ಧಿ ಯೋಜನೆಯ ಚಿತ್ರದುರ್ಗ ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ ಮಾತನಾಡಿ, ಪೂಜ್ಯರು ಗ್ರಾಮಾಭಿವೃದ್ಧಿ
ಯೋಜನೆಯ ಮೂಲಕ ಹಲವಾರು ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿರ್ಗತಿಕರಿಗೆ ಪ್ರತಿ ತಿಂಗಳು
ಮಾಸಾಶನ,ಶಾಲೆಗಳಿಗೆ ಡೆಸ್ಕ್ ಬೆಂಚ್ ,ಶೌಚಾಲಯ ನಿರ್ಮಾಣ,ಕೆರೆ ಹೂಳು ಎತ್ತುವ ಕಾರ್ಯಕ್ರಮ,ವೃತ್ತಿಪರ ಶಿಕ್ಷಣ ಓದುವ
ಮಕ್ಕಳಿಗೆ ಸ್ಕಾಲರ್ಶಿಪ್, ರೈತರಿಗೆ ಕೃಷಿ ಕಾರ್ಯಕ್ರಮ ಹಾಗೂ ಮಹಿಳೆಯರಿಗೆ ಸ್ವ ಸಹಾಯ ಸಂಘ ಕಾರ್ಯಕ್ರಮ, ಸಂಘ ರಚಿಸಿ
ಬ್ಯಾಂಕ್ ಮೂಲಕ ಖಾತೆ ತೆರೆಸಿ ಬ್ಯಾಂಕಿನಿಂದ ನೇರವಾಗಿ ಸಂಘಕ್ಕೆ ಕಡಿಮೆ ಬಡ್ಡಿದರ ದರದಲ್ಲಿ ಸಾಲ ಸೌಲಭ್ಯ ಸಿಗುವಂತೆ
ವ್ಯವಸ್ಥೆಯನ್ನು ಮಾಡಲಾಗಿದೆ. ಈ ಅವಕಾಶವನ್ನು ಸಂಘದ ಸದಸ್ಯರು ಅತ್ಯಂತ ಶಿಸ್ತಿನಿಂದ ಸಾಲದ ಬಳಕೆ ಮಾಡಿಕೊಂಡು ಮನೆ
ರಚನೆ,ಮಕ್ಕಳ ಶಿಕ್ಷಣ, ಮದುವೆ,ಹೈನುಗಾರಿಕೆ,ವ್ಯಾಪಾರ ,ಕೃಷಿ ಅಭಿವೃದ್ಧಿಗೆ ಇತ್ಯಾದಿ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಉತ್ತಮ
ರೀತಿಯಲ್ಲಿ ಸಹಕಾರ ಪಡೆದುಕೊಳ್ಳುತ್ತಿದ್ದಾರೆ ಎಂದರು,
ಕುನಬೇವು ಗ್ರಾಮ ಪಂಚಾಯತ್ ಪಿಡಿಓ ಧನಂಜೆಯ ಮಾತನಾಡಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯು ಪೂಜ್ಯ ಡಾ. ಡಿ
ವೀರೇಂದ್ರ ಹೆಗಡೆ ಅವರ ಸನ್ಮಾರ್ಗದಲ್ಲಿ ಸರ್ಕಾರಕ್ಕೆ ಮತ್ತು ಜನಸಾಮಾನ್ಯರಿಗೆ ಬೆನ್ನೆಲುಬಾಗಿ ನಿಂತು ಆರ್ಥಿಕ ಸೌಲಭ್ಯವನ್ನು
ಒದಗಿಸುತ್ತಿರುವುದರಿಂದ ಬಡವರು ಅಭಿವೃದ್ದಿ ಆಗಿದ್ದರೆ ನಾನು ಶ್ರೀ ಮಂಜುನಾಥ ಸ್ವಾಮಿಯ ಭಕ್ತನಾಗಿದ್ದು, ಪೂಜ್ಯರು ಮಾಡುವಂತ
ದಾನ ಧರ್ಮದ ಕೆಲಸ ನಾನು ಕ್ಷೇತ್ರಕ್ಕೆ ಹೋದಾಗ ನೋಡಿದ್ದೇನೆ ನೂರಾರು ಜನ ಸರದಿಯಲ್ಲಿ ನಿಂತು ಪೂಜ್ಯರಲ್ಲಿ ಮಾತಾಡಿ
ಸಹಾಯ ಪಡೆದುಕೊಳ್ಳುತ್ತಿರುವುದು ನಿತ್ಯವೂ ನೆಡೆಯುತ್ತಿದೆ,ಈ ಕ್ಷೇತ್ರ ಜಗತ್ತಿನಲ್ಲಿ ದಾನ ಧರ್ಮ ಮಾಡುವ ಪುಣ್ಯ ಕ್ಷೇತ್ರವಾಗಿದೆ..
ಪೂಜ್ಯರು ಪ್ರತಿ ಊರಿನ ದೇವಸ್ಥಾನ ಅಭಿವೃದ್ದಿಗೆ ಅವರನ್ನು ಕೇಳಿದಾಗ ಸಹಾಯ ಕೊಡುತ್ತಿದ್ದಾರೆ, ನಮ್ಮ ಊರಿನ 5 ದೇವಸ್ಥಾನದ
ನಿರ್ಮಾಣಕ್ಕೆ ಸಹಾಯ ಸಿಕ್ಕಿದ್ದು ಎಂದರು
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ,ಒಕ್ಕೂಟದ ಅಧ್ಯಕ್ಷರಾದ ಪ್ರೇಮಕ್ಕ ಕಮಿಟಿಯ ಎಲ್ಲಾ
ಸದಸ್ಯರು,ವಲಯ ಮೇಲ್ವಿಚಾರಕ ಮಧು ,ಸೇವಾಪ್ರತಿನಿಧಿ ಸುಶೀಲಮ್ಮ,ಊರಿನ ಗಣ್ಯರು,ಮಹಿಳೆಯರು ಉಪಸ್ಥಿತರಿದ್ದರು.