ಸರ್ಕಾರ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕದ ಮುಖಾಂತರ ಬಸವಣ್ಣನವರ ವಚನದ ಬಗ್ಗೆ ಅರಿವು ನೀಡಬೇಕು : ಟಿ. ಬಿ ಕುಮಾರಸ್ವಾಮಿ.

ವರದಿ ಮತ್ತು ಪೋಟೋ ಕೃಪೆ: ವೇದಾ ಮೂರ್ತಿ, ಭೀಮ ಸಮುದ್ರ

ಬಸವಣ್ಣನವರ ತತ್ವವನ್ನು ಸರ್ಕಾರ ,ರಾಜಕೀಯ ಪಕ್ಷಗಳು ದೂರವಿಟ್ಟಿವೆ ಆದ್ದರಿಂದ ಎಲ್ಲಾ ಶಾಲೆಗಳಿಗೂ ಬಸವಣ್ಣನವರ ಪಠ್ಯಪುಸ್ತಕ ನೀಡಿ ಭಾವಚಿತ್ರವನ್ನು ಇಡಬೇಕು ಟಿ ಬಿ ಕುಮಾರಸ್ವಾಮಿ ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕರು ಭೀಮಸಮುದ್ರ.

ಬಸವ ಜಯಂತಿಯ ಪ್ರಯುಕ್ತ ಇಂದು ಬಸವಣ್ಣನವರ ಭಾವಚಿತ್ರ ಇಟ್ಟು ಜೀಪಿನ ಮೇಲೆ ದಗ್ಗೆ ಗ್ರಾಮದಿಂದ ನಲ್ಲೇನೂರು ತೊಡರ್ ನಾಳು ನಿಂಗದಳ್ಳಿ ತಿರುಮಲಾಪುರ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ದೇವಸ್ಥಾನದವರೆಗೆ ಬೈಕ್ ರಾಲಿ ಮುಖಾಂತರ ಆಗಮಿಸಿ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ಸುಮಾರು 1000ಕ್ಕೂ ಹೆಚ್ಚು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು ತದನಂತರ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿ ಬಸವಣ್ಣನವರ ಬಗ್ಗೆ ಮಾತನಾಡಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕರಾದ ಟಿಬಿ ಕುಮಾರ್ ಸ್ವಾಮಿ ಮಾತನಾಡಿ. ಬಸವಣ್ಣನವರ ಬಗ್ಗೆ ಹಾಗೂ ಅವರು ಮಾಡಿದ ವಚನದ ಬಗ್ಗೆ ಸರ್ಕಾರಗಳು ಗಮನ ಕೊಡುತ್ತಿಲ್ಲ ಯಾವುದೇ ಸರ್ಕಾರಗಳಾಗಲಿ ರಾಜ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕದ ಮುಖಾಂತರ ಸಂದೇಶ ನೀಡಬೇಕು ಈಗಿನ ಪೀಳಿಗೆಗೆ ಮಕ್ಕಳಿಗೆ ಬಸವಣ್ಣನವರ ಬಗ್ಗೆ ತಿಳಿಸಬೇಕು ಮುಂದಿನ ತಿಂಗಳು19 ತಾರೀಕು ನಂದು ಹೊಳಲ್ಕೆರೆ ತಾಲೂಕಿನ ವೀರಶೈವ ಮಹಾಸಭಾ ಮೂಲಕ ಬಸವ ಜಯಂತಿಯನ್ನು ಆಚರಣೆ ಮಾಡುತ್ತೇವೆ ಎಂದು ಹೇಳಿದರು ಗ್ರಾಮದ ಮುಖಂಡರುಗಳಾದ ದಿವಾಕರ್ ಎಸ್ ಎಲ್ ತೊಡರ್ನಾಳು ಶಿವಕುಮಾರ್ ಟಿ ನುಲೇನೂರು ದಗ್ಗೆ ಶಶಿಕುಮಾರ್ ಬೀಜಿಹಳ್ಳಿ ದಿವಾಕರ್ ವಿಜಿ ಕುಮಾರ್ ನಾಗರಾಜ್ ರಾಜಣ್ಣ ತಿರುಮಲಾಪುರ ಹಾಗೂ ಎಲ್ಲಾ ಗ್ರಾಮದ ಮುಖಂಡರುಗಳು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *