ಸಮಯದಲ್ಲಿ ಒಳ ಮೀಸಲಾತಿ ಸಮೀಕ್ಷೆಗೆ ಅಧಿಕಾರಿಗಳು ಊರಿಗೆ ಬಂದಾಗ ಬಂಚಾರ (ಲಂಬಾಣಿ) ಎಂದು ನಮೂದಿಸಬೇಕಾಗಿ ಜಯದೇವನಾಯ್ಕ್ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 3 ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯಾದ್ಯಂತ ಮೇ 05 ರಿಂದ 17ರವರೆಗೆ ಪರಿಶಿಷ್ಟ ಜಾತಿ, ಉಪಜಾತಿ ಸಮಸ್ಯೆ ಸಮೀಕ್ಷೆ ನಡೆಯಲಿದೆ ಈ ಸಮಯದಲ್ಲಿ ಒಳ ಮೀಸಲಾತಿ ಸಮೀಕ್ಷೆಗೆ ಅಧಿಕಾರಿಗಳು ಊರಿಗೆ ಬಂದಾಗ ಬಂಚಾರ
(ಲಂಬಾಣಿ) ಎಂದು ನಮೂದಿಸಬೇಕಾಗಿ ಸಮಾಜದ ಭಾಂಧವರಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ
ಜಯದೇವನಾಯ್ಕ್ ಮನವಿ ಮಾಡಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವರ್ಗೀಕರಣ ಆಯೋಗದ
ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ನೀಡಿರುವ ಮಧ್ಯಂತರ ವರದಿಯನ್ನು
ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿದಂತೆ ದತ್ತಾಂಶ (ಎಂಪಾರಿಕಲ್ ಡಾಟಾ) ಸಂಗ್ರಹಿಸಿ, ಅದರ ಆಧಾರದ ಮೇಲೆ ಮೀಸಲಾತಿ
ನಡೆಯುತ್ತದೆ. ಕರ್ನಾಟಕ ರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲಿ ಹಾಗೂ ತಾಲ್ಲೂಕುಗಳಲ್ಲಿ ಹೋಬಳಿ ಕೇಂದ್ರಗಳಲ್ಲಿ ಹಾಗೂ
ತಾಂಡಗಳಲ್ಲಿ, ಗ್ರಾಮಗಳಲ್ಲಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ನಡೆಯಲಿದ್ದು, ಸಮೀಕ್ಷೆ ತಂಡದ ಅಧಿಕಾರಿಗಳು ಆಯಾ
ಊರಿನಲ್ಲಿ ಸಮೀಕ್ಷೆ ಮಾಹಿತಿ ಪಡೆಯಲು ಬರುತ್ತಾರೆ. ಈ ಸಂದರ್ಭದಲ್ಲಿ ಊರಿನ ನಾಯಕ್, ಕಾರಬಾರಿ, ಡಾವೋ, ಗ್ರಾಮ
ಪಂಚಾಯ್ತಿ ಸದಸ್ಯರು, ವಿದ್ಯಾರ್ಥಿಗಳು, ಮಹಿಳೆಯರು, ಯುವ ನಾಯಕರು ಎಲ್ಲರೂ ಸೇರಿ ನಾವು ಪರಿಶಿಷ್ಟ ಜಾತಿಯಲ್ಲಿದ್ದೇವೆ. ನಮ್ಮ
ಉಪಜಾತಿ ಬಂಜಾರ (ಲಂಬಾಣಿ) ಎಂದು ನಮೂದಿಸಬೇಕು ಎಂದು ತಿಳಿಸಿದರು.

ಸಮೀಕ್ಷೆಯಲ್ಲಿ ಉಪಜಾತಿಗಳ ಜನಸಂಖ್ಯೆ, ಕುಟುಂಬಗಳ ಸಂಖ್ಯೆ ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ ಹೊಂದಿರುವ
ಸೌಲಭ್ಯಗಳು ಮುಂತಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಗಳು, ಸರ್ಕಾರಿ
ಉದ್ಯೋಗ, ಖಾಸಗಿ, ಉದ್ಯೋಗ, ಭೂಮಿಯ ಒಡೆತನ, ಆದಾಯ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳು, ರಾಜಕೀಯ
ಪ್ರಾತಿನಿಧ್ಯದ ಮಾಹಿತಿಯನ್ನು ನಮೂದಿಸಲಾಗುತ್ತದೆ. ಎಲ್ಲಾ ಜಾತಿಯನ್ನು ಹೋಲಿಸಿದರೆ ನಮ್ಮ ಜಾತಿ ತುಂಬಾ ಬಡತನದಲ್ಲಿರುವ
ಜಾತಿ. ಯಾವುದೇ ರಾಜಕೀಯ ಪ್ರಾತಿನಿಧ್ಯ ಇಲ್ಲದಿರುವ ಜಾತಿಯಾಗಿರುತ್ತದೆ. ನಮ್ಮ ಜನಸಂಖ್ಯೆ ಅತೀ ಹೆಚ್ಚು 35 ಲಕ್ಷ ಇರುತ್ತದೆ
ಎಂದಿದ್ದಾರೆ.

ಇದ್ದಲ್ಲದೆ ಈ ಸಮಯ ಮುಗಿದ ನಂತರವೂ ಸಹಾ ಗ್ರಾಮ ಪಂಚಾಯಿತಿಗೆ ಹೋಗಿ ಅಲ್ಲಿಂದಲೂ ಸಹಾ ತಮ್ಮ ಜಾತಿಯ ಬಗ್ಗೆ
ಬರೆಸಬಹುದಾಗಿದೆ. ಪಟ್ಟಣ ಪ್ರದೇಶದಲ್ಲಿ ಜಾತಿಯ ಬಗ್ಗೆ ಹೇಳಲು ಹಿಂಜರಿಯುತ್ತಾರೆ ಇದಕ್ಕಾಗಿ ಪ್ರದೇಶವನ್ನು ಗುರುತಿಸಲಾಗಿದ್ದು
ಅಲ್ಲಿ ಹೋಗುವುದರ ಮೂಲಕ ತಮ್ಮ ಜಾತಿಯ ಬಗ್ಗೆ ಬರೆಸಬಹುದಾಗಿದೆ ಎಂದು ಆಯೋಗ ತಿಳಿಸಿದೆ ಎಂದರು.
ಬಂಜಾರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ ಮಾತನಾಡಿ, ಸುಪ್ರಿಂ ಕೋರ್ಟ್ ಒಳ ಮೀಸಲಾತಿಯನ್ನು
ಇಂತಿಷ್ಟು ದಿನದಲ್ಲಿ ಜಾರಿ ಮಾಡಿ ಎಂದು ಎಲ್ಲೂ ಸಹಾ ಹೇಳಿಲ್ಲ, ಈಗ ಜಾತಿಗಣತಿಯ ಮೇಲೂ ಸಹಾ ಯಾವುದೋ ಒಂದು

ಜನಾಂಗದ ಒತ್ತಡ ಇದೆ ಈ ಹಿನ್ನಲೆಯಲ್ಲಿ ತುರಾತುರಿಯಾಗಿ ಜಾತಿ ಗಣತಿಯನ್ನು ಮಾಡಲು ಆಯೋಗವ ಹೊರಟ್ಟಿದೆ, ಇದು
ಸರಿಯಲ್ಲಿ ಜಾತಿ ಗಣತಿಯಾಗಬೇಕಾದರೆ ಸಮಯವನ್ನು ನಿಗಧಿ ಮಾಡಬಾರದು ಏಕೆಂದರೆ ಇದು ಆತುರವಾಗಿ ಆಗುವಂತ
ಕೆಲಸವಲ್ಲ ಈ ಹಿನ್ನಲೆಯಲ್ಲಿ ಆಯೋಗಕ್ಕೆ ಸಮಯವನ್ನು ನೀಡಬೇಕಿದೆ ಎಂದರು.

ಗೋಷ್ಟಿಯಲ್ಲಿ ಲಿಂಗಾನಾಯ್ಕ್, ಅರುಣ್ ಕುಮಾರ್, ಪ್ರತಾಪ್ ನಾಯ್ಕ್, ನಾಗರಾಜ್ ನಾಯ್ಕ್, ಆನಂತ ಮೂರ್ತಿ, ನಂಜಾನಾಯ್ಕ್,
ರಾಮನಾಯ್ಕ್, ಶ್ರೀನಿವಾಸ್ ನಾಯ್ಕ್, ತಿಪ್ಪೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *