ಎನ್‍ಎಸ್‍ಯುಐ ಕರ್ನಾಟಕದ ವಿದ್ಯಾರ್ಥಿ ನ್ಯಾಯ ಯಾತ್ರೆ’ ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳ ಚರ್ಚೆ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಮೇ. 04ಎನ್‍ಎಸ್‍ಯುಐ ಕರ್ನಾಟಕ ಆಯೋಜಿಸಿರುವ ವಿದ್ಯಾರ್ಥಿ ನ್ಯಾಯ ಯಾತ್ರೆ ಇದು ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಗಂಭೀರ ಪ್ರಯತ್ನವಾಗಿದೆ. ಮಾರ್ಚ್ 17 ರಂದು ಆರಂಭವಾದ ಈ ಯಾತ್ರೆ ಇಂದು ಚಿತ್ರದುರ್ಗ ಜಿಲ್ಲೆಗೆ ತಲುಪಿದ್ದು, ಈ ಸಂದರ್ಭದಲ್ಲಿ ವಿವಿಧ ಕಾಲೇಜುಗಳ ಪ್ರಾಧ್ಯಾಪಕರೊಂದಿಗೆ ಸಭೆ ನಡೆಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಎನ್‍ಎಸ್‍ಯುಐ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅನ್ವಿತ್ ಕಟೀಲ್ ಯುಯುಸಿಎಮ್‍ಎಸ್ ಪೋರ್ಟಲ್ ಸಂಬಂಧಿತ ತಾಂತ್ರಿಕ ಸಮಸ್ಯೆಗಳುಶೈಕ್ಷಣಿಕ ಅಡೆತಡೆಗಳು ಹಾಗೂ ಪಠ್ಯಕ್ರಮದ ತೊಂದರೆಗಳುಮೇಕಪ್ ಪರೀಕ್ಷೆಗಳ ನಿರ್ವಹಣೆಯಲ್ಲಿನ ಅಸಮರ್ಪಕತೆ ಮಾಕ್ರ್ಸ್ ಕಾರ್ಡ್ ವಿತರಣೆಯಲ್ಲಿನ ವಿಳಂಬಮೌಲ್ಯಮಾಪನದ ದೋಷಗಳು ಒನ್ ಟೈಮ್ ಎಕ್ಸಿಟ್ ಸ್ಕೀಮ್ ಕುರಿತು ಸ್ಪಷ್ಟತೆ ಹಾಗೂ ಜೊತೆಗೆ ವಿದ್ಯಾರ್ಥಿ ವೇತನದ ವಿಳಂಬ, ಹಾಸ್ಟೆಲ್ ಸೌಲಭ್ಯಗಳ ಕೊರತೆ ಮತ್ತು ಶೈಕ್ಷಣಿಕ ಮೂಲಸೌಕರ್ಯಗಳ ಕೊರತೆಯಂತಹ ವಿಷಯಗಳೂ ಈ ಸಂದರ್ಭದಲ್ಲಿ ಪ್ರಸ್ತಾಪಿಸಲ್ಪಟ್ಟವು.

ವಿದ್ಯಾರ್ಥಿ ನ್ಯಾಯ ಯಾತ್ರೆಯಲ್ಲಿ ಶೈಕ್ಷಣಿಕ ಸುಧಾರಣೆಗಳಿಗೆ ಒತ್ತಾಯ,ಸಮಯಕ್ಕೆ ಸರಿಯಾದ ವಿದ್ಯಾರ್ಥಿ ವೇತನ,ಉತ್ತಮ ಹಾಸ್ಟೆಲ್ ಹಾಗೂ ಆಧುನಿಕ ಸೌಲಭ್ಯಗಳು,ವೃತ್ತಿ ಮಾರ್ಗದರ್ಶನ ಮತ್ತು ಕೌಶಲ್ಯ ಅಭಿವೃದ್ಧಿ,ಉದ್ಯೋಗಾವಕಾಶಗಳ ಸೃಷಿ,ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಸುಧಾರಣೆ ಬಗ್ಗೆ ಮುಖ್ಯವಾಗಿ ಗಮನ ನೀಡಲಾಗುವುದು ಎಂದರು. 

ಈ ಯಾತ್ರೆ ಈಗಾಗಲೇ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಮುಂದಿನ 11 ಜಿಲ್ಲೆಗಳ ಪ್ರವಾಸ ಮಾಡುವುದರ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಈ ಚಳವಳಿಗೆ ರಾಜ್ಯದಾದ್ಯಂತ ವಿದ್ಯಾರ್ಥಿಗಳಿಂದ ಭಾರೀ ಬೆಂಬಲ ಸಿಕ್ಕಿದೆ ಎಂದರು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಯೋಜಕರಾದ ಹೃತಿಕ್ ರವಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮನೀಷ್ ಜಿ. ರಾಜ್ ರಾಜ್ಯ ಸಂಯೋಜಕ ಶಿವಕುಮಾರ್ ಜಿಲ್ಲಾ ಪದಾಧಿಕಾರಿಗಳಾದ ವಿಶ್ವ ಮತ್ತು ಇತರರುಪಾಲ್ಗೊಂಡಿದ್ದರು

Views: 9

Leave a Reply

Your email address will not be published. Required fields are marked *