Horoscope Today 09 May : ಈ ರಾಶಿಯವರು ಎಲ್ಲರ ದಾರಿಯಲ್ಲಿ ಹೋಗದೇ, ತಮ್ಮದೇ ದಾರಿಯಲ್ಲಿ ನಡೆಯುವರು.

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ, ಶುಕ್ರವಾರ ಆಸ್ತಿಗೆ ಸಂಬಂಧಿಸಿದಂತೆ ಕೋಲಾಹಲ, ಅಸ್ಪಷ್ಟ ಮಾಹಿತಿಯಿಂದ ನಿರ್ಧಾರ, ಸಂಘನಿರ್ಮಾಣಕ್ಕೆ ಒತ್ತು ಇದು ಈ ದಿನದ ವಿಶೇಷ.

Horoscope Today 09 May : ಈ ರಾಶಿಯವರು ಎಲ್ಲರ ದಾರಿಯಲ್ಲಿ ಹೋಗದೇ, ತಮ್ಮದೇ ದಾರಿಯಲ್ಲಿ ನಡೆಯುವರು

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ಹರ್ಷ, ಕರಣ : ಭದ್ರ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 50 pm, ಇಂದಿನ ಶುಭಾಶುಭಕಾಲ : ರಾಹು ಕಾಲ 10:54 – 12:29, ಯಮಘಂಡ ಕಾಲ 15:40 – 17:15, ಗುಳಿಕ ಕಾಲ 07:43 – 09:19

ಮೇಷ ರಾಶಿ: :ನಿಮಗೆ ಭವಿಷ್ಯದ ಬಗ್ಗೆ ಕಂಟಕದ ಭೀತಿ ಕಾಡಲಿದ್ದು, ದೈವ ಸಹಾಯಕ್ಕೆ ಪ್ರಯತ್ನವನ್ನು ಆರಂಭಿಸುವಿರಿ. ಆರ್ಥಿಕ ಸಮಸ್ಯೆಗಳು ಮತ್ತು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸುವುದು ಉತ್ತಮ. ಬರಬೇಕಾದ ಹಣ ಕೈಸೇರಲಿದೆ. ಆಸ್ತಿ ವಿವಾದ ಅನುಕೂಲಕರವಾಗಿ ಬಗೆಹರಿಯುತ್ತದೆ. ಪಾಲುದಾರರ ಬಗ್ಗೆ ಕಿವಿಕಚ್ಚುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರವು ತುಂಬಾ ಅನುಕೂಲಕರವಾಗಿ ಮುಂದುವರಿಯುತ್ತದೆ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ಮಕ್ಕಳನ್ನು ಸತ್ಕಾರ್ಯಕ್ಕೆ ತೊಡಗಿಸುವಿರಿ. ನಿಮ್ಮ ಅನನುಕೂಲತೆಯನ್ನು ಯಾರ ಬಳಿಯೂ ಹೇಳಲಾರಿರಿ. ವಾತಾವಣವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಶಾರೀರಿಕ ತೊಂದರೆಗಳನ್ನು ತೆಗೆದುಕೊಳ್ಳದೇ ನಾಜೂಕಿನಿಂದ ಕಾರ್ಯ ಮಾಡಿ.

ವೃಷಭ ರಾಶಿ: :ನವದಂಪತಿಗಳು ಪ್ರವಾಸ ಮಾಡುವ ಯೋಜನೆ ಮಾಡುವರು‌. ಹೊಸ ವಸ್ತುಗಳಾದರೂ ಅವಶ್ಯಕತೆ ಇದ್ದರೆ ಮಾತ್ರ ಖರೀದಿಸಿ. ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಕೆಲಸವನ್ನು ಮಾಡಲು ನೀವು ಒಂದು ಉತ್ತಮ ಮಾರ್ಗವನ್ನು ಕಂಡುಕೊಳ್ಳುವಿರಿ. ಅಂತಶ್ಶತ್ರುವಿನ ಬಗ್ಗೆ ಗಮನ ಕೊಡದೇ ನಿಮಗೆ ಸೋಲಾಗಬಹುದು. ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಕೆಲವು ವಿಶೇಷ ಕೆಲಸಗಳಿಗಾಗಿ ನೀವು ಮಾಡುತ್ತಿರುವ ಪ್ರಯತ್ನಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ಬಹಳ ದಿನದಿಂದ ಅಂದುಕೊಂಡ ಸ್ಥಳಕ್ಕೆ ಹೋಗುವಿರಿ. ಅಪರಿಚಿತರಿಂದ ನಿಮಗೆ ಉಪದೇಶ ಸಿಗಲಿದೆ‌ ಅದು ನಿಮಗೆ ಕಿರಿಕಿರಿ ಎನಿಸುವುದು. ಸಾಧಿಸಲಾಗದ ಕೆಲಸಕ್ಕೆ ಹೆಚ್ಚು ಶ್ರಮವನ್ನು ಹಾಕುವಿರಿ.‌ ಅಪರಿಚಿತರ ಜೊತೆಗಿನ ಮಾತುಗಳು ನಿಮಗೆ ಹಿತವೆನಿಸುವುದು. ನಿಮ್ಮ ಮಿತಿಯಲ್ಲಿ ಉಳಿತಾಯ ಮಾಡುವಿರಿ. ನಿಮ್ಮ ಅಸ್ತಿತ್ವವನ್ನು ಗುರುತಿಸಿಲ್ಲ ಎಂಬ ಬೇಸರ ಇರುವುದು.

ಮಿಥುನ ರಾಶಿ: ಪ್ರೇಮದ ಸೋಲಿನಿಂದ ತಡೆಯಲಾಗದ ದುಃಖವಾಗಲಿದೆ. ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಬರುವುದು. ಅದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗುವುದು ಅಥವಾ ಮೆಲ್ಲಗೆ ತಳ್ಳಿಹಾಕಬೇಕಾಗುವುದು. ವ್ಯವಹಾರದಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮೇಲುಗೈ ಸಾಧಿಸುತ್ತೀರಿ. ತಾರ್ಕಿಕ‌ ಅಂತ್ಯವನ್ನು ಸಂಬಂಧದಲ್ಲಿ ಮಾಡಿಕೊಳ್ಳುವಿರಿ. ಭಾವನೆಗಳನ್ನು ಬಂಧದಿಂದ ಬಿಡುಗಡೆ. ನಿಮಗೆ ಬೇಕಾಗಿರುವ ಹಣವು ಸಿಗಲು ಪ್ರಾರಂಭವಾಗುತ್ತದೆ. ಪ್ರಮುಖ ಕೆಲಸಗಳು ಪರಿಶ್ರಮದಿಂದ ಪೂರ್ಣಗೊಳ್ಳುತ್ತವೆ. ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. ಯಂತ್ರಗಳ ಬಳಕೆಯನ್ನು ನೀವು ಕಡಿಮೆ‌ ಮಾಡುವಿರಿ. ಒಂದೇ ವಿಚಾರಕ್ಕೆ ಮತ್ತೆ ಮತ್ತೆ ಬೇಸರಿಸುವ ಅವಶ್ಯಕತೆ ಇಲ್ಲ. ರಾಜಕೀಯದಿಂದ ಹೊರಬರಲು ಮನಸ್ಸಾಗುವುದು. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು.

ಕರ್ಕಾಟಕ ರಾಶಿ: :ಗಾಯವನ್ನು ಕೆರೆದು ಹುಣ್ಣುಮಾಡಿಕೊಳ್ಳುವಿರಿ. ಇಂದು ನಿಮ್ಮ ಉದ್ಯಮದಲ್ಲು ಉತ್ತಮ ಗಳಿಕೆಗೆ ಅವಕಾಶಗಳು ತೆರದುಕೊಳ್ಳುವುವು. ಹಳೆಯ ಹೂಡಿಕೆಯಿಂದ ಉಪಯೋಗವಾಗಲಿದೆ. ವಾಹನದ ದುರಸ್ತಿಯನ್ನು ಮಾಡಬೇಕಾಗಿಬರಬಹುದು. ಪ್ರಮುಖ ವಿಷಯಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಧಾರ್ಮಿಕ ಕಾರ್ಯಕ್ಕೆ ಆಸಕ್ತಿ ಇರಲಿದ್ದು ತೊಡಕು ನಿವಾರಣೆ ಮಾಡದೇ ಸಾಧ್ಯವಾಗದು. ವಾಹನ ಖರೀದಯ ಪ್ರಯತ್ನ ಕೈಗೂಡಲಿವೆ. ಸಬಲರ ಜೊತೆ ಗೊತ್ತಿಲ್ಲದೇ ದ್ವೇಷವನ್ನು ಸಾಧಿಸುವಿರಿ. ಸರ್ಕಾರಿ ನೌಕರರು ಅಧಿಕಾರಿಗಳಿಂದ ಸಮಸ್ಯೆಯನ್ನು ಎದುರಿಸಬೇಕಾದೀತು. ನಿಮ್ಮ ಪ್ರಾಮಾಣಿಕ ಪ್ರಯತ್ನವನ್ನು ಬಿಡದೇ ಮುಂದುವರಿಯಲಿ. ವ್ಯವಹಾರಗಳಲ್ಲಿ ಲಾಭ ಗಮನಾರ್ಹವಾಗಿ ಹೆಚ್ಚಾಗುತ್ತದೆ. ನಿಮ್ಮನ್ನು ನಿರ್ಲಕ್ಷಿಸಿ ಏನನ್ನಾದರೂ ಮಾಡಬಹುದು. ಪ್ರೀತಿಯು ಸುಖಾಂತ್ಯ ಕಾಣಬಹುದು. ವ್ಯಾಪಾರಸ್ಥರು ಶ್ರಮದಾಯಕ ಲಾಭವನ್ನು ಮಾಡಿಕೊಳ್ಳುವರು. ಹೊಸ ಯಂತ್ರಗಳನ್ನು ಸ್ವೀಕರಿಸುವಿರಿ. ನಿರ್ಲಕ್ಷ್ಯವು ನಿಮ್ಮ ಸ್ವಭಾವವಾದರೂ ಕೆಲವು ಸಂದರ್ಭಗಳಲ್ಲಿ ಅದನ್ನ ಬದಲಿಸಿಕೊಳ್ಳುವುದು ಉತ್ತಮ. ಯಾರನ್ನೂ ನೀವು ಕೇವಲವಾಗಿ ನೋಡುವುದು ಬೇಡ.

ಸಿಂಹ ರಾಶಿ: :ಸಂಗಾತಿಗೆ ಗೊತ್ತಿಲ್ಲದೇ ಮೋಜಿನಲ್ಲಿ ನಷ್ಟವಾಗಿದ್ದು ಭಯಗೊಳ್ಳುವಿರಿ. ಇಂದು ಆಪ್ತರಿಂದ ಹಣವನ್ನು ಸಾಲವಾಗಿ ಪಡೆಯಬೇಕಾಗಬಹುದು. ನಿಮಗೆ ಉನ್ನತ ಸ್ಥಾನವನ್ನು ನೀಡುವ ಕುರಿತು ಚರ್ಚೆಗಳು ನಡೆಯುವುದು. ಕುಟುಂಬದಿಂದ ಅನರಿಕ್ಷಿತ ಸುದ್ದಿ, ಬೇಸರವಾಗಲಿದೆ. ವ್ಯವಹಾರದಲ್ಲಿನ ಚಟುವಟಿಕೆಗಳು ಬಹಳವಾಗಿ ಬೆಳೆಯುತ್ತವೆ. ಕುಟುಂಬ ಜೀವನವು ಶಾಂತಿಯುತವಾಗಿ ಮುಂದುವರಿಯುತ್ತದೆ. ಕೆಲಸದ ಎಲ್ಲಾ ಅಂಶಗಳು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಎಚ್ಚರಿಕೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ. ಅಳುಕಿನಿಂದ ಇರುವಿರಿ. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ತೃಪ್ತಿ ಸಿಗದು. ಎಲ್ಲವನ್ನೂ ಬಲ್ಲವರಂತೆ ತೋರಿಸಿಕೊಳ್ಳುವಿರಿ. ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗಮಾಡಬಹುದು. ಮಕ್ಕಳ ಜೊತೆ ಎಲ್ಲಿಗಾದರೂ ಸುತ್ತಾಡಲು ಹೋಗುವಿರಿ. ವ್ಯವಹಾರಗಳು ಲಾಭದಾಯಕವಾಗುತ್ತವೆ. ಇದು ನಿಮ್ಮ ಚಿಂತೆಗೆ ಕಾರಣವಾಗಲಿದೆ. ಅನಿರೀಕ್ಷಿತ ವೆಚ್ಚವನ್ನು ಮಾಡಬೇಕಾಗಬಹುದು. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಸಾಕ್ಷಿಯು ಸಿಗದೇಹೋಗಬಹುದು. ಪ್ರಯಾಣದಲ್ಲಿ ತೊಂದರೆಗಳು ಬಂದರೂ ತಲುಪಬೇಕಾದ ಸ್ಥಳಕ್ಕೆ ಹೋಗುವಿರಿ.

ಕನ್ಯಾ ರಾಶಿ: :ಅಪರಿಚಿತ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿ, ಪುಣ್ಯದಿಂದ ಅಪಾಯವಿಲ್ಲದೇ ಸುರಕ್ಷಿತವಾಗಿ ವಾಪಾಸಾಗಲಿರುವಿರಿ. ಇಂದು ನಿಮ್ಮ ಆರ್ಥಿಕ ವ್ಯವಹಾರವನ್ನು ಉತ್ತಮ‌ ರೀತಿಯಲ್ಲಿ ನಿರ್ವಹಿಸುವಿರಿ. ಸ್ಪರ್ಧಾತ್ಮಕವಾಗಿ ಸೋಲುವ ಸಂಭವವಿದೆ. ಉದ್ಯೋಗದಲ್ಲಿ ಇರುವವರಿಗೆ ಕೆಲವು ಆಯ್ಕೆಗಳನ್ನು ಯಾರಾದರೂ ಕೊಡಬಹುದು. ಕೆಲವು ಸಂಬಂಧಿಕರಿಂದಾಗಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಪ್ರಮುಖ ಉಪಕರಣವನ್ನು ಮರೆತು ಕೆಲಸಕ್ಕೆ ಹೋಗುವಿರಿ. ಕೆಲಸದಲ್ಲಿ ಕೆಲಸದ ಹೊರೆ ಸ್ವಲ್ಪ ಹೆಚ್ಚಾಗುವುದನ್ನು ಹೊರತುಪಡಿಸಿ, ಯಾವುದೇ ಪ್ರಮುಖ ಸಮಸ್ಯೆಗಳು ಇಲ್ಲದಿರಬಹುದು. ಇಂದಿನ ಆಹಾರವು ಆರೋಗ್ಯವನ್ನು ಕೆಡಿಸಬಹುದು. ಅಲ್ಪರ ಸಹವಾಸದಿಂದ ಅಭಿಮಾನಕ್ಕೆ ತೊಂದರೆಯಾಗುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಮಕ್ಕಳ ಖರ್ಚಿಗೆ ಹಣವನ್ನು ಕೊಡುವಿರಿ. ಮನೆಯ ಸ್ಥಳವನ್ನು ಬದಲಾಯಿಸಬೇಕಾಗಬಹುದು. ನಿಮ್ಮ ವಸ್ತುಗಳು ಕಳ್ಳತನವಾಗಬಹುದು. ನಿಮ್ಮ ನಿಯಮಗಳನ್ನು ನೀವೇ ಭಂಗ ಮಾಡಿಕೊಳ್ಳುವಿರಿ.

ತುಲಾ ರಾಶಿ: :ಅಲಂಕಾರಿಕ ವಸ್ತುಗಳ ಬಗ್ಗೆ ಅಧಿಕ ಆಸಕ್ತಿ. ಆರ್ಥಿಕ ತೊಂದರೆ ಇದ್ದರೂ ಸ್ನೇಹಿತರಿಂದ ಪಡೆದು ಖರೀದಿ. ಇಂದು ವ್ಯಾಪಾರದ ಪೈಪೋಟಿಯು ನಿಮ್ಮ ನೆಮ್ಮದಿಯನ್ನು ಕೆಣಕಬಹುದು. ಪರರ ಬಗ್ಗೆ ಇರುವ ಅಸಮಾಧಾನವನ್ನು ಹೇಳಿಕೊಂಡು ಕಳೆಯುವಿರಿ. ವ್ಯವಹಾರದಲ್ಲಿನ ಹಳೆಯ ನಷ್ಟಗಳಿಂದ ಚೇತರಿಸಿಕೊಳ್ಳುವ ಕೆಲಸ ಪ್ರಾರಂಭವಾಗಬಹುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಸಂಗಾತಿಯ ಬೆಂಬಲವು ಸಿಗದೇಹೋಗಬಹುದು. ನಿಮ್ಮವರ ಜೊತೆಗಿನ ಒಡನಾಟವು ಮಿತಿಯಲ್ಲಿ ಇರಲಿ. ಬುದ್ಧಿವಂತಿಕೆಯಿಂದ ಮತ್ತು ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ಸಂಜೆ ಕೆಲಸದಲ್ಲಿ ವೇಗ ಇರುತ್ತದೆ. ಕುಟುಂಬದಿಂದ ಬೆಂಬಲ ಸಿಗಲಿದೆ. ದುಡುಕಿ ಮಾತನಾಡಿ ಸತ್ಯವನ್ನು ಹೇಳುವಿರಿ. ದೈವಭಕ್ತಿಯಿಂದ ಮನಸ್ಸಿನ ಗೊಂದಲವನ್ನು ಪರಿಹರಿಸಿಕೊಂಡು ಸ್ಥೈರ್ಯವನ್ನು ತಂದುಕೊಳ್ಳುಬಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸುವಿರಿ.

ವೃಶ್ಚಿಕ ರಾಶಿ: :ನಟನೆ, ಪ್ರತಿಭಾ ಪ್ರದರ್ಶನಕ್ಕೆ ಸಿಗುವ ಅವಕಾಶವನ್ನು ಬಳಸಿಕೊಳ್ಳುವಿರಿ. ಎಲ್ಲವನ್ನೂ ದೈವಾನುಕೂಲದಂತೆ ಆಗುತ್ತದೆ ಎಂದು ಸುಮ್ಮನಿರದೇ ನಿಮ್ಮ ಪ್ರಯತ್ನವನ್ನೂ ಮಾಡಿ. ವೃತ್ತಿಯಲ್ಲಿ ಕೆಲವು ಅನಿರೀಕ್ಷಿತ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾಗಿಬರಬಹುದು. ಸ್ವಂತವಾಗಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ‌ ಇರುಬುದು. ಉದ್ಯಮದಲ್ಲಿ ಸ್ವಲ್ಪಮಟ್ಟಿನ ಒತ್ತಡ ಕಾಣಿಸುವುದು. ಹಿಂದಿನ ತಪ್ಪುಗಳಿಂದ ಕಲಿಯುವುದು ಮತ್ತು ನಿಮ್ಮ ಕೆಲಸದ ವಿಧಾನವನ್ನು ಸುಧಾರಿಸುವುದು ಯಶಸ್ಸನ್ನು ತರುತ್ತದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸಿದ ನಂತರ ನಿಮ್ಮ ದಿನಚರಿ ಚೆನ್ನಾಗಿ ನಡೆಯುತ್ತದೆ. ಗೃಹ ನಿರ್ಮಾಣದ ಬಗ್ಗೆ ಯೋಗ್ಯ ವ್ಯಕ್ತಿಗಳ ಜೊತೆ ಸಂವಹನ‌ ನಡೆಸಿ. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವ ಇಚ್ಛೆ ಇರಲಿದೆ. ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ಅಂದುಕೊಂಡಿದ್ದನ್ನು ಸಾಧಿಸಲು ಅಪರಿಚಿತರ ಸಹಾಯವೂ ಲಭ್ಯವಾಗುವುದು.

ಧನು ರಾಶಿ: ಸಿ :ಗುಪ್ತವಾಗಿ ಸಾಧಿಸುವ ತಂತ್ರ ಹೂಡಿದ್ದರೆ ಅದು ವ್ಯರ್ಥ. ಇಂದು ಉದ್ಯಮಿಗಳು ಬಹಳ ಓಡಾಟದಿಂದ ಲಾಭವನ್ನು ಪಡೆಯುವಿರಿ. ಸರ್ಕಾರಿ ಉದ್ಯೋಗವು ಕಿರಿಕಿರಿ ಎನಿಸುವಂತೆ ಮಾಡಿದರೂ ನೀವು ಅದನ್ನು ಬಿಡಲಾರಿರಿ. ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ನಿಮ್ಮ ಖರ್ಚುಗಳನ್ನು ಸಹ ನಿಯಂತ್ರಣದಲ್ಲಿಡಿ. ಮಹಿಳೆಯರ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ. ಆದಾಯವು ಉತ್ತಮವಾಗಿ ಉಳಿಯುತ್ತದೆ. ಸಂಜೆಯ ವೇಳೆಗೆ ಸಮಸ್ಯೆಗಳು ಬಗೆಹರಿಯುತ್ತವೆ. ಕೆಲಸದಲ್ಲಿ ವೇಗವಿರುತ್ತದೆ ಮತ್ತು ಆದಾಯ ಹೆಚ್ಚಾಗುತ್ತದೆ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಿ ಹುಡುಕಾಟ ಮಾಡುವಿರಿ. ಎಲ್ಲರಿಂದ ಪ್ರೀತಿ ಕಡಿಮೆಯಾದಂತೆ ತೋರುವುದು. ಮಂಗಲ ಕಾರ್ಯಗಳಿಂದ ನೆಮ್ಮದಿ ಇರುವುದು. ಸ್ಥಿರಾಸ್ತಿಯನ್ನು ವ್ಯವಹಾರ‌ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಯುಕ್ತಿಯಿಂದ ಕೆಲಸ ಮಾಡುವುದು ಒಳಿತು. ಮಿತ್ರರ ಮನಸ್ತಾಪವನ್ನು ನೀವು ಬಗೆಹರಿಸಿಕೊಳ್ಳುವಿರಿ. ಬಂಧುಗಳ ನಡುವೆ ಪರಸ್ಪರ ಸೌಹಾರ್ದವು ಬೆಳೆಯಬಹುದು. ಭೂಮಿಯ ಖರೀದಿಸಲು ಸಂಗಾತಿಯ ಜೊತೆ ಆರಂಭಿಕ ಚರ್ಚೆ ನಡೆಸುವಿರಿ.

ಮಕರ ರಾಶಿ: :ಆಧುನಿಕ ಯಂತ್ರಗಳ ಬಳಕೆ ಅಧಿಕ. ಇಂದು ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ತೊಂದರೆಗಳು ಎದುರಾಗದೇ ಕಾರ್ಯಗಳು ಮುಗಿಯುವುದು. ಯಾರಿಂದಲಾದರೂ ಪ್ರಶ‌ಂಸೆಯನ್ನು ನಿರೀಕ್ಷಿಸುವಿರಿ. ಸ್ವಚ್ಛತೆ ಸರಿಯಾಗಿ ಆಗಿಲ್ಲ ಎಂದು ಅನ್ನಿಸಬಹುದು. ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಸರಿಯಾದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ, ಶಾಂತ ಮನಸ್ಸಿನಿಂದ ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸಿ. ಮನೆಯಲ್ಲಿ ಆಗದೇ ಇರುವ ಕಾರ್ಯಗಳ ಬಗ್ಗೆ ಗಮನ ಹೆಚರಚಾಗುವುದು. ನಿಮ್ಮ ಅನುಭವದಿಂದ ಕಲಿಯುವುದು ನಿಮಗೆ ಪ್ರಯೋಜನಕಾರಿಯಾಗಿದೆ. ನ್ಯಾಯಾಲಯದ ವಿಷಯದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ನಿಮ್ಮ ಸರಿಯಾದ ಕೆಲಸವನ್ನು ಮಾಡಿ. ಹಳೆಯ ಮನೆಯ ದುರಸ್ತಿ ಕಾರ್ಯವು ಜರುಗಲಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಇಂದಿನ‌ ಹೆಚ್ಚಿನ ವಿಚಾರಗಳನ್ನು ನಕರಾತ್ಮಕವಾಗಿಯೇ ಚಿಂತಿಸುವಿರಿ. ದಾಂಪತ್ಯಕ್ಕೆ ಹೆಚ್ಚು ಒತ್ತು ಕೊಡುವಿರಿ.

ಕುಂಭ ರಾಶಿ: : ಉದ್ಯೋಗದಲ್ಲಿ ಸಹೋದ್ಯೋಗಿಯಿಂದ ಕಿರಿಕಿರಿಯಾಗಿ ಸ್ನೇಹಿತರ ಸಹಾಯದಿಂದ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವಿರಿ. ಇಂದು ನಿಮ್ಮ ಚೌಕಟ್ಟನ್ನು ಮೀರಿ ವರ್ತಿಸಬೇಕಾಗುವುದು. ಸುತ್ತಲಿನ ಪರಿಸ್ಥಿತಿಯನ್ನು ಗಮನಿಸಿಕೊಂಡು ವ್ಯವಹರಿಸಿ. ಕೆಲವು ಸಮಯದಿಂದ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಸಂತೋಷ, ತೃಪ್ತಿ ವಾತಾವರಣ ಇರುತ್ತದೆ. ನೀವು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಸ್ಥಾನ ಅಥವಾ ಯಶಸ್ಸನ್ನು ಈಗ ಸಾಧಿಸಬಹುದು. ಬಡ್ತಿ ಅಥವಾ ಅಪೇಕ್ಷಿತ ಉದ್ಯೋಗ ಸಿಗುವ ಸಾಧ್ಯತೆ ಇದೆ. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ಕಛೇರಿಯಲ್ಲಿ ಅನಗತ್ಯವಾಗಿ ಮಾತನಾಡಿ ಸುಮ್ಮನೇ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳುವುದು ಬೇಡ. ಯಾರಾದರೂ ವ್ಯಕ್ತಿತ್ವನ್ನು ಅನುಸರಿಸುವ ಮೊದಲು ನಿಮ್ಮ ಬಗ್ಗೆ ಅರಿವು ಇರಲಿ. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗುವಿರಿ. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು.

ಮೀನ ರಾಶಿ: :ಸಂಕಷ್ಟದಿಂದ ದೈವಕ್ಕೆ ಶರಣಾಗುವ ಮನಸ್ಸಾಗಲಿದೆ. ಇಂದು ನಿಮ್ಮ ವ್ಯಾಪಾರದಲ್ಲಿ ವೆಚ್ಚಗಳು ಕಡಿಮೆ ಹಾಗೂ ಆದಾಯವು ಅಧಿಕವೂ ಆಗಲಿದೆ. ಪರರಿಂದ ತೊಂದರೆಯ ಆಗಿರುವ ಭೀತಿ ಕಾಡಲಿದೆ. ಸ್ವಂತ ಉದ್ಯಮಿಗಳು ಹೆಚ್ಚಿನ ಲಾಭವನ್ನೂ ಪಡೆಯುವರು. ಪ್ರಮುಖ ಕೆಲಸಗಳು ಪೂರ್ಣಗೊಳ್ಳಲಿವೆ. ಗಳಿಕೆಯ ಮಾರ್ಗಗಳು ಹೆಚ್ಚಾಗುತ್ತವೆ. ಶಾಂತವಾಗಿ ಕೆಲಸ ಮಾಡುವುದರಿಂದ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತದೆ. ಕೆಲಸದ ಸ್ಥಳದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಸಂಜೆಯ ವೇಳೆಗೆ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ಇಂದು ನಿಮಗೆ ಮಾತಿನಿಂದಾಗಿ ತೊಂದರೆಗಳು ಬರಬಹುದು. ಎಲ್ಲರ ಜೊತೆಗೂ ವಾಗ್ವಾದಕ್ಕೆ ಹೋಗುವುದು ಬೇಡ. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ಕಳೆದುಕೊಂಡ ವಸ್ತುವನ್ನು ಬೇರೆ ರೀತಿಯಲ್ಲಿ ಪಡೆದುಕೊಳ್ಳುವಿರಿ. ಯಾರನ್ನೂ ಅವಲಂಬಿಸುವುದು ನಿಮಗೆ ಇಷ್ಟವಾಗದು. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ವಿದ್ಯಾಭ್ಯಾಸದ ಬಗ್ಗೆ ಅನಾದರ ಬರಬಹುದು.

TV9Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *