
ಚಿತ್ರದುರ್ಗ ಮೇ: ದೇಶದ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ನುಡಿದಂತೆ ನಡೆದ ಮೋದಿ ಮತ್ತು ನಮ್ಮ ದೇಶದ ಸೈನಿಕರು ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಭಾರತದ ಕಾಶ್ಮೀರದ ಪೆಹಲ್ಗಾಂ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಅಮಾಯಕ
ಪ್ರವಾಸಿಗರನ್ನು ಧರ್ಮವನ್ನು ಕೇಳಿ ಅನೇಕ ಮುಗ್ಧ 27ಕ್ಕೂ ಹೆಚ್ಚು ಜನರನ್ನು ಕೊಂದು ದ್ವೇಷದ ಕೃತ್ಯ ನಡೆಸಿದ್ದು ದೇಶ ಅಲ್ಲದೆ
ಅಂತರಾಷ್ಟ್ರೀಯ ಸಮುದಾಯಗಳು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದವು
ಇಂದು ಬುಧವಾರ ಬೆಳಗಿನ ಪಾಕಿಸ್ತಾನದಲ್ಲಿರುವ ಸುಮಾರು 9 ಉಗ್ರಗಾಮಿಗಳ ಹಡಗು ತಾಣಗಳನ್ನು ಗುರಿಯಾಗಿಸಿಕೊಂಡು
ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮುಖಾಂತರ ಭಾರತದ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದರು.