ಜಯ ಸುವರ್ಣಪುರದಲ್ಲಿ ಜಯಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಹೊಸದುರ್ಗ / ಚಿತ್ರದುರ್ಗ, ಮೇ 9 .ಹೊಸದುರ್ಗ ತಾಲೂಕಿನ ಜಯಸುವರ್ಣಪುರ ಗ್ರಾಮಕ್ಕೆ ಈ ಹೆಸರು ಬರಲು ಐತಿಹ್ಯವಿದೆ. ಅದೇನೆಂದರೆ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅಂದಿನ ಪೀಠಾಧಿಪತಿಗಳಾದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಈ ಗ್ರಾಮದಲಿ ತಲೆದೋರಿದ್ದ ಯಾವುದೋ ಸಮಸ್ಯೆ ಅಂದು ಜಾಡ್ಯವೋ ಬಾಣಂತಿ ಶಿಶುಮರಣ, ವೃದ್ಧರುಗಳು ಹಿಗೆ ಸಾಲು ಸಾಲು ಮರಣ ಹೊಂದುತ್ತಿರುವ ಹಿನ್ನೆಲ್ಲೆಯಲ್ಲಿ ಗ್ರಾಮದ ಜನತೆ ಜಯದೇವಶ್ರೀಗಳ ಮೊರೆ ಹೋಗಿ ಶ್ರೀಗಳು ಗ್ರಾಮಕ್ಕೆ ಬಂದು ಮುಕ್ಕಾಂ ಮಾಡಿ ಅಲ್ಲಿನ ಸಮಸ್ಯಗೆ ಪರಿಹಾರ ಎನ್ನುವಂತೆ ಕಂಡುಹಿಡಿದು ಗ್ರಾಮದಲ್ಲಿ ನೆಮ್ಮದಿ ನೆಲಸುವಂತೆ ಮಾಡಿದ ಹಿನ್ನೆಲೆಯಲ್ಲಿ ಜಯದೇವ ಜಗದ್ಗುರುಗಳವರ ಅಣತೆಯಂತೆ ಜಯಸುವರ್ಣಪುರ ಎಂಬ ಹೆಸರು ಬಂತು. ಅದರ ಹಿಂದೆ ತಿರುವನಾಳ್ ಪಾಳ್ಯ ಎಂಬ ಹೆಸರಿತ್ತು.

ಗುರುಗಳ ಆಗಮನದಿಂದ ಗ್ರಾಮ ಮಾದರಿ, ಸುಸಂಸ್ಕøತವಾಗಿ ಅಬಿವೃದ್ಧಿ ಹೊಂದಿ ನಾಲ್ಕಾರು ಗ್ರಾಮಗಳು ಅನುಸರಿಸುವಂತಿರುವುದು ಆಶಾದಾಯಕ ಬೆಳವಣಿಗೆಯೇ ಸರಿ ಎಂದು ಚಿತ್ರದುರ್ಗ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ
ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳವರು ಮೇಲಿನಂತೆ
ಚರಿತ್ರೆ ಮೇಲೆ ಬೆಳಕು ಚೆಲ್ಲಿದರು.


ಶ್ರೀಗಳವರು ತಾಲ್ಲೂಕಿನ ಜಯಸುವರ್ಣಪುರದಲ್ಲಿ ಜಯಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ ಹಾಗೂ
ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಸಮಾರಂಭದ ದಿವ್ಯಸಾನ್ನಿಧ್ಯ
ವಹಿಸಿ ಮಾತನಾಡುತ್ತ ಜಯದೇವ ಶ್ರೀಗಳು ಈ ರಾಜ್ಯ ಹೊರ ರಾಜ್ಯ ಸುತ್ತಾಡಿ ಬಂದರೂ ಸಹ ಅವರು ಹೋದ ಕಡೆಯಲ್ಲೆಲ್ಲ
ಏನಾದರೊಂದು ಸಾಮಾಜಿಕ ಕಾರ್ಯಗಳನ್ನು ಮಾಡಿಯೇ ಬರುತ್ತಿದ್ದರು. ಅದರೆ ಈ ಜಯಸುವರ್ಣಪುರದ ಕರುಹು ಮಾಹಿತಿ
ದೊರಕಿರಲಿಲ. ಇಲ್ಲಿನ ಭಕ್ತ ಸಮೂಹ ಅವರ ನೆನಪಿಗಾಗಿ ಒಂದು ಸುಂದರ ದೇವಾಲಯವನ್ನು ಕಟ್ಟಿರುವುದು ಶುಭೋದಯ ಹಾಗೆ
ಇಲ್ಲಿ ವಚನ, ಭಜನೆ ಧಾರ್ಮಿಕ ಕಾರ್ಯಗಳು ನಡೆಯಬೇಕು.

ಸಂಸ್ಕಾರ ಕೊಡುವ ತಾಣವಾಗಬೇಕಿದೆ. ಹಾಗೆ ಭಕ್ತನಂಗಳದ ಮುಖದರ್ಪಣದಲ್ಲಿ ಲಿಂಗವ ಕಾಣುವಂತವುದು ಗುರುಗಳು ಜಯದೇವಶ್ರೀಗಳ ಸ್ವಾಭಾವವಾಗಿತ್ತು. ಚಿತ್ರದುರ್ಗ ಬೃಹನ್ಮಠಕ್ಕೂ ಜಯಸುವರ್ಣಪುರ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಅದು ಇನ್ನು ಗಟ್ಟಿಯಾಗಿ ಉತ್ತಮ ಬಾಂಧವ್ಯ ಬೆಸೆಯಲಿ, ಬೇರೆ ಗ್ರಾಮಗಳು ಹೀಗೆ ಈ ಗ್ರಾಮವನ್ನು ಅನುಸರಿಸಲಿ, ದುಶ್ಚಟ ದುಗ್ರ್ಗುಣ ತೊಲಗಲಿ ಎಂದು ಕರೆ ನೀಡಿದರು.


ಸಾನ್ನಿಧ್ಯವಹಿಸಿದ್ದ ದಾವಣಗೆರೆ ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ತಮ್ಮ ಆರ್ಶೀವಚನದಲ್ಲಿ ತಿರುನಾಳ್ ಪಾಳ್ಯ ಹೋಗಿ
ಜಯದೇವರ ಪಾದಸ್ಪರ್ಶದಿಂದ ಜಯಸುವರ್ಣಪುರವಾಗಲು ಹೊಸತಿರುವು ಪಡೆದದ್ದು ಸೋಜಿಗದು. ಅವರ ದೂರದೃಷ್ಟಿ ಚಿಕಿತ್ಸಕ
ಮನೋಭಾವ ಜನರ ದೇಹ ಬೌಧ್ಧಿಕತೆಯ ನಾಡಿಮಿತ ಬಲ್ಲವರಾಗಿದ್ದರಿಂದ ಅದಕ್ಕೆ ಪರಿಹಾರ ಕಂಡು ಹಿಡಿದು ಕೊಡುವ ಧೀರೋದಾತ್ತ ಮನಸ್ಸು ಇತ್ತು ಎಂದು ನುಡಿದರು.


ದೇವಸ್ಥಾನ ಕಟ್ಟಿಕೊಳ್ಳುವ ಜತೆಗೆ ಬದುಕನ್ನ ಕಟ್ಟಿಕೊಳ್ಳಬೇಕು. ಕಾಯಕ ಮಾಡಬೇಕು ಬಂದದ್ದರಲ್ಲಿ ದಾಸೋಹ ಮಾಡಬೇಕು ಯಾವ ಕಾರಣಕ್ಕೂ ಸಮಯ ಅಪವ್ಯಯ ಮಾಡದಂತೆ ದುಡಿಯಬೇಕು. ಭವ ಬಂಧನಗಳಿಂದ ದೂರವಿರಬೇಕು. ವಿನಾಶಕಾರಿ ಚಟಗಳಿಗೆ ಬಲಿಯಾಗದೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತ ಸಾಗಬೇಕು. ಯಾವುದೇ ಮೂಲಭೂತ ಸೌಕರ್ಯಗಳಿಲ್ಲಿದ ಸಂದರ್ಭದಲ್ಲಿ ಶ್ರೀಗಳವರು ಇಲ್ಲಿಗೆ ಬಂದು ಜನರ ಸಂಕಷ್ಟಕ್ಕೆ ಪರಿಹಾರ ಕಂಡುಹಿಡಿದು ಈ ಗ್ರಾಮ ಸುಭಿಕ್ಷವಾಗಿರಲು ಪ್ರೇರಣೆಯಾದದ್ದು ಗುರುಗಳ ಸಮಾಜ ಸೇವೆಯ ದ್ಯೋತಕ ಗುರು ತಾಯಿ ಇದ್ದಂತೆ ಆ ಸ್ಥಾನ ಜಯದೇವಶ್ರೀಗಳು ತುಂಬಿ ಸಮಾಜಕ್ಕೆ ಕೊಡುಗೆ ನೀಡಿ ಹೋಗಿದ್ದಾರೆಂದು ಸ್ಮರಿಸಿದರು.

ಸಾನಿಧ್ಯವಹಿದ್ದ ಪುಷ್ಪಗಿರಿ ಮಠದ ಡಾ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಈ ಗ್ರಾಮದ ಜನರು ಕೃಷಿ ಮಾಡಿ ಕೃಷಿಯಿಂದ ಬಂದ ಹಣ ಮತ್ತು ಭಕ್ತರ ದೇಣಿಗೆಯಿಂದ ಹಣದಲ್ಲಿ ದೇವಸ್ಥಾನ ಕಟ್ಟಿಸಿದ್ದಿರಿ. ಕಟ್ಟಿದಮೇಲೆ
ಸಾರ್ಥಕವಾಗಬೇಕಾದರೆ ನಿಮ್ಮಲ್ಲಿ ಉತ್ತಮವಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶ್ರಮಪಟ್ಟು ಜೀವನ ಸಾಗಿಸಿದರೆ
ಸಾಧನೆಯಲ್ಲಿ ಮುಂದೆ ಬರುತ್ತಾರೆ. ಕಾವಿ, ಖಾದಿ, ಖಾಕಿ ಬೇರೆ ಬೇರೆ ಬಣ್ಣಗಳು. ಆದರೆ ಅವುಗಳು ಮಾಡುವ ಕೆಲಸಗಳು
ಉತ್ತಮವಾದ ಗುಣಹೊಂದಿವೆ.

ಮಾನವ ಜನ್ಮ ಶ್ರೇಷ್ಟವಾದದ್ದು. ಹಳ್ಳಿ ಹಳ್ಳಿಗಳ ಮನೆಮನೆಗಳಲ್ಲಿ ವಿರೋಧ ಮತ್ತು ದ್ವೇಷ ತುಂಬಿದೆ ಇದಕ್ಕೆ ಮಹತ್ವಕೊಡಬಾರದು. ಶಾಂತಿ ನೆಮ್ಮದಿಯಿಂದ ಬಾಳಬೇಕು. ತುನು ಮನ ಶುದ್ದಿಯಾಗಬೇಕಾಗಿದೆ. ಈ ಗ್ರಾಮಕ್ಕೆ ಶ್ರೀ ಮುರುಘಾಮಠದ ಶ್ರೀ ಜಯದೇವಸ್ವಾಮಿಗಳ ಆಶೀರ್ವಾದ ಮಾಡಿದ್ದಾರೆ. ಊರಿನ ಜನರು ಪುಣ್ಯವಂತರು ಎಂದು ಸ್ಮರಿಸಿದರು.


ಈ ಸಂದರ್ಭದಲ್ಲಿ ಜಯಲಿಂಗೇಶ್ವರ ಸ್ಮರಣ ಸಂಚಿಕೆ ಬಿಡುಗಡೆಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ
ಕೆ.ಎಸ್.ನವೀನ ಅವರು ಭಾರತೀಯ ಸೇನಕಾರ್ಯಚಾರಣೆಯಲ್ಲಿ ಭಾಗವಹಿಸಿದ ಸೇನಾನಿಗಳಿಗೆ ಮೊದಲು ಗೌರವ ಸಲ್ಲಿಸೋಣ.
ಅವರಿಗೆ ಜಯಲಿಂಗೇಶ್ವರ ಸ್ವಾಮಿಯ ಆಶೀರ್ವಾದ ಸಿಗಲಿ. ಸೇನಾನಿಗಳಿಗೆ ಜಯವಾಗಲಿ ಎಂದು ಬೇಡುತ್ತೇನೆ. ಈಗ್ರಾಮದ ಜನಗಳ ಸಹಕಾರದಿಂದ ಸುಂದರವಾದ ದೇವಸ್ಥಾನ ನಿರ್ಮಾಣವಾಗಿದೆ. ಸಂಸ್ಕಾರ ಕಲಿಯಬೇಕೆಂದರೆ ಜಯಸುರ್ವಣಪುರ ನೋಡಿ ಕಲಿಯಬೇಕೆನ್ನುವಂತಾಗಬೇಕು.

ಯುವಕರು ಮುಂದಿನಮಾನಗಳಲ್ಲಿ ದೇವಸ್ಥಾನದಲ್ಲಿ ಪ್ರತಿ ನಿತ್ಯ ಸಂಜೆ ವಚನಗಳನ್ನು ಕಲಿಸುವ ಕೇಂದ್ರವಾಗಬೇಕಾಗಿದೆ. ಮಕ್ಕಳು ತಂದೆ ತಾಯಿಗಳಿಗೆ ಗೌರವ ನೀಡುವಂತಗಬೇಕು ಈ ನಿಟ್ಟಿನಲ್ಲಿ ಸಮಾಜ ಸಾಗಬೇಕೆಂದರು. ನಿವೃತ್ತ ಜಿಲ್ಲಾಧಿಕಾರಿಗಳಾದ ಶ್ರೀ ರಂಗಯ್ಯನವರು ಜಯಸುವರ್ಣಪುರದಲ್ಲಿ ಯುವಕರು ಊರಿನ ಗ್ರಾಮಸ್ಥರು ತುಂಬಾ ಪರಿಶ್ರಮದಿಂದ ಶ್ರೀಜಯಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯವನ್ನು ಕಟ್ಟಿದ್ದಾರೆ. ದೇವಸ್ಥಾನ ಕಟ್ಟಿಸುವುದು ಸುಲಭದ ಕೆಲಸವಲ್ಲ. ನಾನು ಸಹ ಈ ಊರಿನಲ್ಲಿ ಬಾಲ್ಯದಲ್ಲಿ ಕೂಲಿ ಕೆಲಸಮಾಡಿದ್ದೇನೆ. ಮತ್ತು ನಮ್ಮ ತಾಯಿ ಕೂಲಿಕೆಲಸ ಮಾಡಿದ್ದಾರೆ. ಕಷ್ಟಪಟ್ಟು ವಿದ್ಯಾಬ್ಯಾಸ ಮಾಡಿ ಈ ಊರಿನ ದೇವರ ಆಶೀರ್ವಾದಿಂದ ಜಿಲ್ಲಾಧಿಕಾರಿಯಾಗಿ ಉನ್ನತ ಸ್ಥಾನಮಾನ ಪಡೆದಿದ್ದೇನೆ ಎಂದರು.


ನಿವೃತ್ತ ಐ.ಪಿ.ಎಸ್ ಆದ ಎಸ್.ಎನ್ ಸಿದ್ದರಾಮಪ್ಪ ಅವರು ಮಾತನಾಡಿ ಮನುಷ್ಯನ ಜನ್ಮ ದೊಡ್ಡದು ದೇವಸ್ಥಾನಗಳಿಂದ ಧರ್ಮ
ಸಂಸ್ಕøತಿ ದೇವರ ಭಕ್ತಿನಂಬಕೆ ಹೆಚ್ಚುತ್ತದೆ ಇಷ್ಟಲಿಂಗಧರಿಸಿ ಆಚಾರ ವಿಚಾರಗಳನ್ನು ಪಾಲಿಸಬೇಕು ಮಕ್ಕಳಿಗೆ ಉತ್ತಮವಾದ
ವಿದ್ಯಾಬ್ಯಾಸ ನೀಡಬೇಕೆಂದರು.


ಈ ಸಮಾರಂಭದಲ್ಲಿ ಎಲ್ಲ ವಿಭಾಗದ ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಮುಖಂಡರು, ವಿವಿಧ ಊರುಗಳಿಂದ ಬಂದಿದ್ದ
ಗ್ರಾಮಸ್ಥರು, ಭಕ್ತಾಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸಮಾರಂಭಕ್ಕೆ ಧನುಶ್ರಿ ಜೆ.ಕೆ ಪ್ರಾರ್ಥನೆ ಮಾಡಿದರು, ಜೆ.ಯು. ಸುಹಾಸ್‍ಅವರು ಸ್ವಾಗತ ಬಯಸಿದರು, ನಿರೂಪಣೆಯನ್ನು ಕಲಾವತಿ ಯೋಗೀಶ್ ಹಾಗೂ ಜೆ.ಸಿ ರವಿಕುಮಾರ್ ನಿರ್ವಹಿಸಿದರು. ಶರಣುಸಮರ್ಪಣೆಯನ್ನು ಜೆ.ಎಚ್.ಅವಿನಾಶ್ ನಡೆಸಿಕೊಟ್ಟರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *