
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ,15 : ದುರ್ಗದ ಬಸವೇಶ್ವರ ವಧು ವರರ ಮಾಹಿತಿ ಕೇಂದ್ರದ ವತಿಯಿಂದ ಇದೇ ತಿಂಗಳ 18-5-2025ರ ಭಾನುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಹಾರಾಷ್ಟ್ರ ಮಂಡಳ ಕುರುಬರ ಹಾಸ್ಟಲ್ ಎದುರು, ಗಾಂಧಿನಗರ ಎರಡನೇ ಮೇನ್ ಇಲ್ಲಿ ಸರ್ವಧರ್ಮೀಯರ ವಧು ವರರ ರಾಜ್ಯಮಟ್ಟದ ಸಮಾವೇಶವನ್ನು ಏರ್ಪಡಿಸಲಾಗಿದೆ, ಎಂದು ಸಂಘಟಕರು ಹಾಗೂ ಸಂಚಾಲಕರಾದ ಜೆ.ಎಂ. ಜಂಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದಿನ ಸಮಾರಂಭದ ಸಾನಿಧ್ಯವನ್ನು ಚಿತ್ರದುರ್ಗ ಸಂಸ್ಥಾನ ಖಾಸಮಠದ ಗುರುಮಠಕಲ್ನ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೆ.ಎಲ್.ಇ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜೆ.ಎಂ.ಮಲ್ಲಿಕಾರ್ಜುನಯ್ಯ, ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರ ಈ 9448011825,,9980658625 ಮೊಬೈಲ್ ನಂಬರ್ಗೆ ಸಂಪರ್ಕ ಸಂಪರ್ಕಿಸಬಹುದಾಗಿದೆ.