ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ವಾಟ್ಸ್​ಆ್ಯಪ್​ನಲ್ಲೇ ಕಳುಹಿಸಿ ದೂರು ನೀಡಿ: ಬೆಸ್ಕಾಂ ಸಂಖ್ಯೆಗಳ ವಿವರ ಇಲ್ಲಿದೆ

Bescom WhatsApp Helpline: ವಿದ್ಯುತ್ ಸಂಬಂಧಿತ ಸಮಸ್ಯೆಗಳ ಬಗ್ಗೆ ದೂರು ನೀಡುವುದನ್ನು ಸರಳಗೊಳಿಸುವುದು ಮತ್ತು ಗ್ರಾಹಕರಿಗೆ ನೆರವಾಗುವುದಕ್ಕಾಗಿ ಬೆಸ್ಕಾಂ ಹೊಸ ವಾಟ್ಸ್​ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಿದೆ. ಬೆಸ್ಕಾಂ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಈ ಸೌಲಭ್ಯವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮನವಿಯನ್ನೂ ಮಾಡಿದೆ. ಬೆಸ್ಕಾಂ ವಾಟ್ಸ್​ಆ್ಯಪ್ ಸಹಾಯವಾಣಿ ಸಂಖ್ಯೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು, ಮೇ 15: ಹಲವಾರು ಗ್ರಾಹಕ ಸ್ನೇಹಿ ಕ್ರಮಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಯತ್ನಿಸುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ (BESCOM) ಇದೀಗ ವಾಟ್ಸ್​ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು (Bescom WhatsApp Helpline) ಆರಂಭಿಸಿದೆ. ಆ ಮೂಲಕ ಗ್ರಾಹಕರ ಸಮಸ್ಯಗಳಿಗೆ ಶೀಘ್ರದಲ್ಲೇ ಸ್ಪಂದಿಸುವ ಭರವಸೆ ನೀಡಿದೆ. ಬೆಸ್ಕಾಂ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ವಾಟ್ಸ್​ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದ್ದು, ಆ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​​ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ.

‘ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹಾರ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ’ ಎಂದು ಎಕ್ಸ್​ ಸಂದೇಶದಲ್ಲಿ ಬೆಸ್ಕಾಂ ಮನವಿ ಮಾಡಿದೆ.

ಬೆಸ್ಕಾಂ ವ್ಯಾಪ್ತಿಯ ಪ್ರತಿ ಜಿಲ್ಲೆಗಳಿಗೂ ವಿಶೇಷ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳಿದ್ದು, ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ, ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹಾರ ಪಡೆಯಿರಿ ಎಂದು ಬೆಸ್ಕಾಂ ಗ್ರಾಹಕರಿಗೆ ಸಲಹೆ ನೀಡಿದೆ.

ಬೆಸ್ಕಾಂ ವಾಟ್ಸ್​ಆ್ಯಪ್ ಸಹಾಯವಾಣಿ ಸಂಖ್ಯೆಗಳ ವಿವರ

  • ಕೋಲಾರ: 8277884015
  • ಚಿಕ್ಕಬಳ್ಳಾಪುರ: 8277884016
  • ಬಿಆರ್​ಸಿ: 8277884017
  • ರಾಮನಗರ: 8277884018
  • ತುಮಕೂರು: 8277884019
  • ಚಿತ್ರದುರ್ಗ: 8277884020
  • ದಾವಣಗೆರೆ: 8277884021

ಬೆಂಗಳೂರು ನಗರ ಬೆಸ್ಕಾಂ ವಾಟ್ಸ್​ಆ್ಯಪ್ ಸಹಾಯವಾಣಿ

  • ದಕ್ಷಿಣ ವೃತ್ತ: 8277884011
  • ಪಶ್ಚಿಮ ವೃತ್ತ: 8277884012
  • ಪೂರ್ವ ವೃತ್ತ: 8277884013
  • ಉತ್ತರ ವೃತ್ತ: 8277884014

ಸೂರ್ಯಘರ್ ಯೋಜನೆ ಸಬ್ಸಿಡಿ ಪಡೆಯಲು ಮನವಿ

ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆಯೂ ಗ್ರಾಹಕರಿಗೆ ಬೆಸ್ಕಾಂ ಮನವಿ ಮಾಡಿದೆ. ಸೂರ್ಯಘರ್ ಯೋಜನೆಯ ಮೂಲಕ ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಿ ಆಕರ್ಷಕ ಸಬ್ಸಿಡಿ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://pmsuryaghar.gov.in ನೋಂದಾಯಿಸಿಕೊಳ್ಳಿ ಎಂದು ಬೆಸ್ಕಾಂ ಕೇಳಿಕೊಂಡಿದೆ.

ಸೂರ್ಯಘರ್ ಯೋಜನೆಯ ಸಬ್ಸಿಡಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡುವಂತೆಯೂ ಬೆಸ್ಕಾಂ ಸಲಹೆ ನೀಡಿದೆ.

TV9 Kannada

Leave a Reply

Your email address will not be published. Required fields are marked *